Advertisement

ಕುಳಗೇರಿ ಕ್ರಾಸ್: ಜಾತ್ರಾ ಮಹೋತ್ಸವದ ಪ್ರಯುಕ್ತ ಜಂಗೀ ಕುಸ್ತಿ ಪಂದ್ಯಾವಳಿಗೆ ಚಾಲನೆ

12:32 PM Apr 16, 2022 | Team Udayavani |

ಕುಳಗೇರಿ ಕ್ರಾಸ್ (ಜಿ.ಬಾಗಲಕೋಟೆ) :  ಖಾನಾಪೂರ ಎಸ್ ಕೆ ಗ್ರಾಮದ ಗ್ರಾಮದೇವತೆ ಹೆಬ್ಬಳೆಮ್ಮದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡ ಬಯಲು ಜಂಗೀ ಕುಸ್ತಿ ಪಂದ್ಯಾವಳಿಯಲ್ಲಿ ಸೇರಿದ್ದ ಸಾವಿರಾರು ಅಭಿಮಾನಿಗಳನ್ನು ಕುಸ್ತಿ ಪಟುಗಳು ತುದಿಗಾಲ ಮೇಲೆ ನಿಲ್ಲುವಂತೆ ಮಾಡಿದರು.

Advertisement

ಗ್ರಾಮದ ಜಮಿನಿನಲ್ಲಿ ಏರ್ಪಡಿಸಿದ್ದ ಕುಸ್ತಿ ಮೈದಾನದ ಸುತ್ತ ಎರಡು ಗಂಟೆಗೂ ಮುಂಚಿತವಾಗಿಯೇ ಜನಸ್ತೋಮ ಸೇರಿದ್ದರು. ಕುಸ್ತಿಯಲ್ಲಿ ಭಾಗವಹಿಸಲು  ಬಂದಿದ್ದ ಕುಸ್ತಿ ಪಟುಗಳು ತಮಗೆ ಸರಿ-ಸಮಾನ ಕುಸ್ತಿ ಪಟುಗಳನ್ನು ಹುಡಕುತ್ತಿದ್ದರು.

ಪಂದ್ಯಾವಳಿಗೆ ಚಾಲನೆ ದೊರೆಯುತ್ತಿದ್ದಂತೆ ಕುಸ್ತಿ ಪಟುಗಳು ಅಖಾಡಕ್ಕಿಳಿದು ಸೆಣಸಿದರು. ಬೇರೆ ಬೇರೆ ಜಿಲ್ಲೆ ತಾಲೂಕಿನಿಂದ ಕುಸ್ತಿ ಪಟುಗಳು ಆಗಮಿಸಿದ್ದರು. ಮೊದಲದಿನ ನಡೆದ ಕುಸ್ತಿ ವೀಕ್ಷಣೆಗೆ ಜನಸ್ತೋಮ ಸೇರಿತ್ತು.

ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷ ಬಸವರಾಜ ಕಟ್ಟಿಕಾರ, ಸದಸ್ಯರಾದ ಶೇಖಪ್ಪ ಪವಾಡಿನಾಯ್ಕರ, ಲಕ್ಷ್ಮಣ ದಾದನಟ್ಟಿ, ವೆಂಕಣ್ಣ ಹೊರಕೇರಿ, ಹನುಮಂತ ನರಗುಂದ, ಚುರ್ಚಪ್ಪ ಲೋಖಾಪೂರ, ಯಮನಪ್ಪ ಪೂಜಾರ, ಅಮೃತ ನಾಯ್ಕರ್, ಸುರೇಶ ಲೋಖಾಪೂರ, ಅಬ್ದುಲ್ ನದಾಫ್, ವೆಂಕಣ್ಣ ಲೋಕಾಪುರ, ಚುರ್ಚಪ್ಪ ಜಾಡರ, ಭೀಮಪ್ಪ ಚಿಚಗಂಡಿ, ಯಮನಪ್ಪ ಲೋಕಾಪುರ, ವಾಸನಗೌಡ ಪಾಟೀಲ, ಹನುಮಂತ ಲೋಕಾಪುರ ಸೇರಿದಂತೆ ಗ್ರಾಮದ ಪ್ರಮುಖರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next