Advertisement

Hermes Bag ಸ್ಫೂರ್ತಿಯಾಗಿದ್ದ ನಟಿ ಜೇನ್‌ ಬರ್ಕಿನ್‌ ಸಾವು

11:10 PM Jul 16, 2023 | Team Udayavani |

ಫ್ರಾನ್ಸ್‌ನ ಖ್ಯಾತ ಗಾಯಕಿ ಹಾಗೂ ನಟಿಯಾಗಿ ಮಿಂಚಿದ್ದ ಬ್ರಿಟನ್‌ ಮೂಲದ ಜೇನ್‌ ಬರ್ಕಿನ್‌(76) ರವಿವಾರ ಕೊನೆಯುಸಿರೆಳೆದಿದ್ದಾರೆ.

Advertisement

ವಯೋಸಹಜ ಅನಾರೋಗ್ಯದಿಂದ ಅವರು ಬಳಲುತ್ತಿದ್ದರು. ಬರ್ಕಿನ್‌ ಅವರು 70ರ ದಶಕದಲ್ಲಿ ದೊಗಲೆ ಜೀನ್ಸ್‌, ಮಿನಿ ಡ್ರೆಸ್‌ಗಳನ್ನು ಧರಿಸಿ, ಅಂದಿನ ಸ್ಟೈಲ್‌ ಐಕಾನ್‌ ಆಗಿಯೂ, ಖ್ಯಾತ ಗಾಯಕಿಯಾಗಿಯೂ ಜನಮಾನಸದಲ್ಲಿ ನೆಲೆನಿಂತಿದ್ದರು.

1984ರಲ್ಲಿ ಖ್ಯಾತ ಬ್ಯಾಗ್‌ ತಯಾರಕ ಕಂಪೆನಿಯಾದ ಹರ್ಮೀಸ್‌, ಈ ನಟಿಯಿಂದ ಸ್ಫೂರ್ತಿ ಪಡೆದು ತನ್ನ ದುಬಾರಿ ಹ್ಯಾಂಡ್‌ಬ್ಯಾಗ್‌ಗೆ “ಹರ್ಮೀಸ್‌ ಬರ್ಕಿನ್‌ ಬ್ಯಾಗ್‌’ ಎಂದು ನಾಮಕರಣ ಮಾಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next