Advertisement

ಕೃಷಿ ಪತ್ತಿನ ಸಂಘಗಳಲ್ಲಿ ಜನೌಷಧ ಕೇಂದ್ರ

01:31 PM Mar 15, 2021 | Team Udayavani |

ಕೋಲಾರ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ಪ್ರಧಾನ ಮಂತ್ರಿಜನೌಷಧಿ ಕೇಂದ್ರಗಳನ್ನು ತೆರೆಯುವ ಬಗ್ಗೆಹಾಗೂ ಸಾಲ ವಸೂಲಾತಿ ಕುರಿತು ಅರಿವುಮೂಡಿಸಲು ಸೊಸೈಟಿಗಳ ಸಿಇಒಗಳಿಗೆ ಒಂದು ದಿನದ ರಾಜ್ಯಮಟ್ಟದ ವಿಶೇಶ ತರಬೇತಿ ಕಾರ್ಯಾಗಾರವನ್ನು ಮಾ.17 ರಂದು ಬೆಳಗ್ಗೆ 10 ಗಂಟೆಗೆ ನಗರದ ಟಿ.ಚೆನ್ನಯ್ಯ ರಂಗಮಂದಿರದಲ್ಲಿ ಆಯೋಜಿಸ ಲಾಗಿದೆ ಎಂದು ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಬ್ಯಾಲಹಳ್ಳಿ ಎಂ.ಗೋವಿಂದಗೌಡ ತಿಳಿಸಿದ್ದಾರೆ.

Advertisement

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ರಾಜ್ಯ ಸಹಕಾರ ಮಹಾಮಂಡಳ, ಜಿಲ್ಲಾ ಸಹಕಾರ ಒಕ್ಕೂಟ, ಕೋಲಾರ ಮತ್ತುಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಕೇಂದ್ರಬ್ಯಾಂಕ್‌ ಹಾಗೂ ಸಹಕಾರ ಇಲಾಖೆಆಶ್ರಯದಲ್ಲಿ ಈ ಕಾರ್ಯಾಗಾರಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಡಿಸಿಸಿ ಬ್ಯಾಂಕ್‌ ವ್ಯಾಪ್ತಿ ಹೆಚ್ಚು: ಸಹಕಾರ ಮಹಾಮಂಡಳ ವತಿಯಿಂದ ರಾಜ್ಯಾದ್ಯಂತ 1 ಸಾವಿರ ಜನೌಷಧಿ ಕೇಂದ್ರಗಳನ್ನುತೆರೆಯಲು ನಿರ್ಧರಿಸಲಾಗಿದ್ದು, ಇದರಲ್ಲಿಹೆಚ್ಚಿನ ಸಂಖ್ಯೆಯ ಕೇಂದ್ರಗಳನ್ನು ಡಿಸಿಸಿ ಬ್ಯಾಂಕ್‌ ವ್ಯಾಪ್ತಿಯಲ್ಲಿನ ಸೊಸೈಟಿಗಳಮೂಲಕ ಆರಂಭಿಸುವ ಚಿಂತನೆಯೊಂದಿಗೆಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಜನೌಷಧ ಕೇಂದ್ರಗಳಮಾಹಿತಿ: ಕಾರ್ಯಗಾರವನ್ನು ಶ್ರೀನಿವಾಸಪುರ ಶಾಸಕಕೆ.ಆರ್‌.ರಮೇಶ್‌ ಕುಮಾರ್‌ ಉದ್ಘಾಟಿಸುವರು. ರಾಜ್ಯ ಸಹಕಾರ ಮಹಾಮಂಡಳಿ ಅಧ್ಯಕ್ಷ ಡಾ.ಎಂ.ಎನ್‌. ರಾಜೇಂದ್ರಕುಮಾರ್‌ಜನೌಷಧ ಕೇಂದ್ರಗಳನ್ನು ತೆರೆಯುವ ಬಗ್ಗೆ ಮಾಹಿತಿ ನೀಡುವರು. ಶಾಸಕರು ಹಾಗೂ ಇಪ್ಕೋ ವಿಮೆ ಕಂಪನಿ ಅಧ್ಯಕ್ಷ ಕೆ.ಶ್ರೀನಿವಾಸಗೌಡ ಅಧ್ಯಕ್ಷತೆ ವಹಿಸುವರು.

ಸಿಬ್ಬಂದಿಗೆ ತರಬೇತಿ: ಕಾರ್ಯಕ್ರಮದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮುಖಾಂತರ ಜನೌಷಧಿ ಕೇಂದ್ರತೆರೆಯುವ ಕುರಿತು ಅನುಸರಿಸಬೇಕಾದ ಕ್ರಮಗಳು ಮತ್ತು ಬ್ಯಾಂಕುಗಳ ನಿಷ್ಕ್ರಿಯಆಸ್ತಿಯಾಗಿರುವ ಎನ್‌ಪಿಎ ಸಾಲಗಳನ್ನು ಗುರುತಿಸುವಿಕೆ ಹಾಗೂ ವಸೂಲಾತಿ ಕುರಿತು ಫ್ಯಾಕ್ಸ್‌ಗಳ ಆಡಳಿತ ಮಂಡಳಿ ಮತ್ತು ಸಿಬ್ಬಂದಿ ವರ್ಗದವರಿಗೆ ಡಿಸಿಸಿ ಬ್ಯಾಂಕ್‌ಎಜಿಎಂ ಎಂ.ಆರ್‌. ಶಿವಕುಮಾರ್‌ ತರಬೇತಿ ನೀಡಲಿದ್ದಾರೆ ಗೋವಿಂದಗೌಡ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next