1. ನಲ್ಲಿ ನೀರಿನ ಸಂಪರ್ಕವನ್ನು ಆಗಾಗ್ಗೆ ಚೆಕ್ ಮಾಡುತ್ತಿರಿ. ಪೈಪ್ ಲೂಸಾಗಿ ನೀರು ಸೋರುವುದೋ ಅಥವಾ ಬೇರೇನಾದರೂ ಸಮಸ್ಯೆ ಇದೆಯೋ ಎಂದು ಖಚಿತಪಡಿಸಿಕೊಳ್ಳಬೇಕು.
2. ಮಶೀನ್‌ನ ಒಗೆಯುವ ಸಾಮರ್ಥ್ಯಕ್ಕಿಂತ ಹೆಚ್ಚಿನ ಬಟ್ಟೆಗಳನ್ನು ತುರುಕಬೇಡಿ. ಇದರಿಂದ ವಾಶರ್‌ಗೆ ಹಾನಿ ಉಂಟಾಗುತ್ತದೆ. ಹಾಗಾಗಿ, ತುಂಬಾ ಬಟ್ಟೆಗಳಿದ್ದಲ್ಲಿ ಅದನ್ನು ಎರಡು ಬ್ಯಾಚ್ ಮಾಡಿ ವಿಂಗಡಿಸಿ. ನಂತರ ಮಶೀನ್‌ಗೆ ಲೋಡ್ ಮಾಡಿ.
3. ನಿಮ್ಮ ವಾಶಿಂಗ್ ಮಶೀನ್ ಮಾಡೆಲ್ಲಿಗೆ ಯಾವ ಬಗೆಯ ಡಿಟರ್ಜೆಂಟ್ ಸೂಕ್ತ ಎಂದು ತಿಳಿದುಕೊಂಡು, ಅದನ್ನೇ ಬಳಸಿ.
4. ಸಿಕ್ಕಾಪಟ್ಟೆ ಡಿಟರ್ಜೆಂಟನ್ನು ಬಳಸಬೇಡಿ. ಲಿಕ್ವಿಡ್ ಡಿಟರ್ಜೆಂಟ್ ಬಳಸುತ್ತಿದ್ದರೆ, ವಾಶಿಂಗ್ ಸಂಸ್ಥೆ ನಿಗದಿ ಪಡಿಸಿರುವಷ್ಟನ್ನೇ ಬಳಸಿ.
5. ತಿಂಗಳಿಗೊಮ್ಮೆ ಡ್ರಡ್ರ, ಡೋರ್ ಮತ್ತು ಗ್ಯಾಸ್ಕೆಟ್ ಅನ್ನು ಶುಚಿಗೊಳಿಸಿ. ಗ್ಯಾಸ್ಕೆಟ್ ಅನ್ನು ಕ್ಲೀನ್ ಮಾಡಲು, ನೀರು ಮತ್ತು ವಿನೆಗರ್‌ನ ಮಿಶ್ರಣವನ್ನು ಬಳಸಬಹುದು. ಇದರಿಂದ ಗ್ಯಾಸ್ಕೆಟ್‌ನಲ್ಲಿ ಹಳೆ ಕೊಳೆಯ ವಾಸನೆ ಇರುವುದಿಲ್ಲ.