ಚಂದಾಪುರ: ಶಿಕ್ಷಕರ ವೃತ್ತಿಯು ಪವಿತ್ರವಾದುದ್ದು ಇದರ ಪಾವಿತ್ರತೆಯನ್ನು ಕಾಪಾಡಿಕೊಳ್ಳುವ ಜವಾಬ್ದಾರಿ ಶಿಕ್ಷಕರ ಮೇಲೆ ಇದೆ ಎಂಬುದಾಗಿ ಖ್ಯಾತ ಹಿರಿಯ ಚಲನಚಿತ್ರ ನಟ ದೊಡ್ಡಣ್ಣ ತಿಳಿಸಿದರು. ಅವರು ಜನಸಿರಿ ತಂಡವು ಖ್ಯಾತ ಕವಿ ಹಾಗೂ ಹೋರಾಟಗಾರ ನಾಗಲೇಖ ನೇತೃತ್ವದಲ್ಲಿ ಆಯೋಜಿಸಿದ್ದ 2021ರ ಶಿಕ್ಷಕರ ಹಬ್ಬ ಹಾಗೂ ವಿವಿಧ ಸಾಂಸ್ಕೃತಿಕ ಹಾಗೂ ಸಂಪ್ರದಾಯಕ ಸ್ಪರ್ಧಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ನಾಲ್ಕುಗೋಡಿಯ ತರಗತಿಯೊಳಗೆ ಕಲಿಸಿ ಶಿಕ್ಷಣವು ಮಕ್ಕಳನ್ನು ಹೊರ ಜಗತ್ತಿಗೆ ಪರಿಚಯಿಸಿವ ಹೊಣೆಗಾರಿಕೆ ಶಿಕ್ಷಕರ ಮೇಲೆ ಇರುತ್ತದೆ, ತಂದೆ ತಾಯಿ ಹಾಗೂ ಪೋಷಕರ ಮಾತಿಗಿಂತಲೂ ಶಿಕ್ಷಕರ ಮಾತು ಗಳಿಗೆ ಮಕ್ಕಳು ಹೆಚ್ಚು ಬೆಲೆಕೊಡುತ್ತಾರೆ. ಮಕ್ಕಳು ಯಾವಾಗಲೂ ಶಿಕ್ಷಕರ ನಡವಳಿಕೆ, ಮಾತು, ಪ್ರೀತಿ ಹಾಗೂ ವರ್ತನೆಗಳನ್ನು ಅನುಸರಿಸುತ್ತಾರೆ.
ಇದನ್ನೂ ಓದಿ;- ಎಲ್ಲರ ಅನುಭವ, ಮಾರ್ಗದರ್ಶನದ ಅಗತ್ಯ
ಅದಕ್ಕಾಗಿ ಶಿಕ್ಷಕರು ನಮ್ಮ ರಾಮಾಯಣ, ಮಹಾ ಭಾರತ, ಸೇರಿದಂತೆ, ಸಾಹಿತಿಗಳ ಕೃತಿಗಳನ್ನು ಹೆಚ್ಚು ಹೆಚ್ಚು ಅರ್ಥವಾಗುವಂತೆ ಭೋದಿಸಬೇಕು. ಪುಸ್ತಕಗಳನ್ನು ಉಡುಗೊರೆಯಾಗಿ ನೀಡಬೇಕು ಎಂದರು. ಖ್ಯಾತ ಕವಿ ಹಾಗೂ ಹೋರಾಟಗಾರ ಜಿಗಣಿ ನಾಗಲೇಖ ಮಾತನಾಡಿದರು.
ಅತ್ತಿಬೆಲೆ ಪೊಲೀಸ್ ವೃತ್ತ ನಿರೀಕ್ಷಕ ಕೆ.ವಿಶ್ವನಾಥ್ ಮಾತನಾಡಿದರು. ಎಲೈಟ್ ಅಕಾಡೆಮಿ ಜಿ.ಮುನಿರಾಜ್,ಬೆಂಗಳೂರು ಶಿಕ್ಷಣ ನಿರ್ದೇಶಕ ಡಿ.ಆರ್.ರಾಮ ಮೂರ್ತಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ.ಶಿವಣ್ಣ, ಅನುದಾನ ರಹಿತ ಶಾಲೆಗಳ ಒಕ್ಕೂಟದ ಪದಾಧಿಕಾರಿಗಳಾದ ಡಿ.ಮುನಿರಾಜ್, ಜಿಗಣಿ ಪ್ರಹ್ಲಾದ್ ಗೌಡ,ತೆ.ನಾ.ಅಂಬರೀಶ್,ಅನಂತ್ ರಾಜ್, ಜ್ಯೋತಿಗೌಡ, ರಾಜೇಂದ್ರ ಪ್ರಸಾದ್, ಶಿಕ್ಷಕರ ಸಂಘದ ಅಧ್ಯಕ್ಷ ಕೆ.ಚಂದ್ರಶೇಖರ್ ಇತರರಿದ್ದರು.