Advertisement

ರಾಜ್ಯದಲ್ಲಿ ನೂತನ ಪಕ್ಷದ ಉದಯ: “ಜನಸಾಮಾನ್ಯರ ಪಕ್ಷ”ಲೋಕಾರ್ಪಣೆ

01:48 PM Jan 15, 2018 | |

ಬಾಗಲಕೋಟೆ: ನಿಧಾನಸಭೆ ಚುನಾವಣೆ ಸಮೀಪಿಸುತ್ತಿದಂತೆ ರಾಜ್ಯದಲ್ಲಿ ನೂತನ ಪಕ್ಷಗಳ ಉದಯವಾಗತೊಡಗಿದೆ. ಸೋಮವಾರ “ಜನಸಾಮಾನ್ಯರ ಪಕ್ಷ”ವೆಂಬ ನೂತನ ಪಕ್ಷವೊಂದು ಜಿಲ್ಲೆಯ ಕೂಡಲ ಸಂಗಮದಲ್ಲಿ ಅನಾವರಣಗೊಂಡಿದೆ.

Advertisement

ರೈತರು, ಚಿಂತಕರು, ಶಿಕ್ಷಣ ತಜ್ಞರು ಹಾಗೂ ಜನ ಸಾಮಾನ್ಯರಿಗಾಗಿ ಸ್ಥಾಪಿಸಿದ ಪಕ್ಷ ಇದಾಗಿದ್ದು. ಪ್ರೊ. ಚಂದ್ರಶೇಖರ ಪಾಟೀಲ ಅವರು ಹೊಸ ಪಕ್ಷಕ್ಕೆ ಬಂಬಲ ವ್ಯಕ್ತಪಡಿಸಿ ಪಕ್ಷದ ಲಾಂಛನವನ್ನು ಬಿಡುಗಡೆಗೊಳಿಸಿದರು.

ಕಳೆದ  ಹಲವಾರು ದಶಕಗಳಿಂದಲೂ ಸಮಸ್ಯೆಯಾಗಿಯೇ ಉಳಿದಿರುವ ಕಳಾಸ ಬಂಡೂರಿ ನಾಲಾ ಯೋಜನೆಯ ಇತ್ಯರ್ಥಕ್ಕೆ ಹಾಗೂ ಪ್ರಾದೇಶಿಕ ಅಸಮಾನತೆಗೆ ಧಕ್ಕೆ ಬಂದಿರುವ ಕಾರಣ ಶಿಕ್ಷಣ ತಜ್ಞ ಡಾ.ಅಯ್ಯಪ್ಪ ಅವರ ನೇತೃತ್ವದಲ್ಲಿ ಜನಸಾಮಾನ್ಯರ ಪಕ್ಷ ಸ್ಥಾಪನೆಗೊಂಡಿದೆ.

“ಟ್ರಾಕ್ಟರ್‌ ನಡೆಸುತ್ತಿರುವ ರೈತ” ಚಿಹ್ನೆಯನ್ನು ಹೊಂದಿರುವ ಲಾಂಛನ ಬಿಡುಗಡೆಯಾಗಿದ್ದು. ಜನ ಸಾಮಾನ್ಯರು ಹೂಗೂ ರೈತರು ಈ ಪಕ್ಷದಿಂದ ಸ್ಪರ್ಧಿಸಬಹುದು ಎಂದು ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next