Advertisement

 ‘ಜನನ್ಯ’ಮಗುವಿನ ಆರೈಕೆ ಕೊಠಡಿ ಲೋಕಾರ್ಪಣೆ

07:26 PM Dec 18, 2021 | Team Udayavani |

ಅಂಕೋಲಾ : ರಾಷ್ಟ್ರೀಯ ಹೆದ್ದಾರಿ 66 ರ ಬೆಲೇಕೇರಿ ಟೋಲಪ್ಲಾಜಾ ಬಳಿ ಐ.ಆರ್.ಬಿ ಕಂಪನಿಯು ನಿರ್ಮಿಸಿದ ಜನನ್ಯ ಮಗುವಿನ ಆರೈಕೆ ಕೊಠಡಿಯನ್ನು ಪದ್ಮಶ್ರೀ ತುಳಸೀ ಗೌಡ ಲೋಕಾರ್ಪಣೆಗೊಳಿಸಿದರು.

Advertisement

ಕಾರ್ಯಕ್ರಮ ಅದ್ಯಕ್ಷತೆ ವಹಿಸಿದ ಉ.ಕ.ಜಿಲ್ಲಾಧಿಕಾರಿ ಮುಲೈ ಮುಗಿಲನ್ ಮಾತನಾಡಿ ಮಗುವಿನೊಂದಿಗೆ ಪ್ರಯಾಣ ಮಾಡುವಾಗ  ಮಹಿಳೆಯರು ಮಗುವಿಗೆ ಹಾಲು ಕುಡಿಸಲು ಕಷ್ಟಪಡುತ್ತಿರುವ ಕಂಡಿದ್ದೇನೆ ಅಲ್ಲದೆ ನನ್ನ ಧರ್ಮಪತ್ನಿ ಅಶ್ವಿನಿ ಕೂಡ ಈ ವಿಷಯದ ಬಗ್ಗೆ ಹೆಚ್ಚು ಉತ್ಸಾಹವನ್ನು ತೋರಿಸಿದ್ದು ಅವರ ಪ್ರೇರಣೆಯಂತೆ ನಾನು ಇತ್ತೀಚೆಗೆ ಐ.ಆರ್.ಬಿ ಕಂಪನಿಯ ಕಾರ್ಯಕ್ರಮವೊಂದಕ್ಕೆ ಬಂದಾಗ ಪ್ರವಾಸೀ ಮಹಿಳೆಯರಿಗೆ ಮಗುವಿಗೆ ಹಾಲುಣಿಸಲು ಪ್ರಶಸ್ತವಾದ ಅತ್ಯಾಧುನಿಕ ಸೌಕರ್ಯಗಳುಳ್ಳ ಒಂದು ಕೊಠಡಿ ನಿರ್ಮಿಸುವ ಬಗ್ಗೆ ತಿಳಿಸಿದ್ದೆ ಕಂಪನಿಯವರು ತ್ವರಿತವಾಗಿ ಕಟ್ಟಡವನ್ನು ನಿರ್ಮಿಸಿ ಅನುಕೂಲ ಮಾಡಿಕೊಟ್ಟಿದ್ದಾರೆ ಇದರಿಂದ ಬಹಳಷ್ಟು ಮಹಿಳೆಯರಿಗೆ ಪ್ರಯೋಜನವಾಗಲಿದೆ. ಮುಂದುವರಿದ ರಾಷ್ಟ್ರಗಳಲ್ಲಿ ಮಾತ್ರ ಇಂತಹ ಯೋಜನೆಗಳಿದ್ದು ನಮ್ಮ ದೇಶದಲಗಲಿಯೂ ಎಲ್ಲ ಕಡೆ ಸಿಗುವಂತಾಗಲಿ  ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೂ ಈ ವಿಷಯದ ಬಗ್ಗೆ ಮಾತನಾಡಿದ್ದೇನೆ ಎಂದರು.

ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಪನ್ನೆಕರ ಮಾತನಾಡಿ ಜಿಲ್ಲಾಧಿಕಾರಿಯವರ ಆಶಯದಂತೆ ಐ.ಆರ್.ಬಿ ಕಂಪನಿಯವರು ಅತ್ಯಂತ ಸುಸಜ್ಜಿತ, ಸುರಕ್ಷಿತ ಕಟ್ಟಡವನ್ನು ನಿರ್ಮಿಸಿದ್ದು ಅತ್ಯಾಧುನಿಕ ವ್ಯವಸ್ಥೆಗಳನ್ನೂ ಕಲ್ಪಿಸಿದ್ದು ಮಹಿಳೆಯರು ಖುಷಿ ಪಡುವ ವಿಚಾರ ಇದು ತುಂಬ ಪ್ರಯೋಜನಕಾರಿಯಾಗಿದೆ. ಮಹಿಳೆಯರ ಕಷ್ಟಕ್ಕೆ ಸ್ಪಂದಿಸುವ ಜಿಲ್ಲಾಧಿಕಾರಿಯವರ ಈ ಯೋಜನೆ ಎಲ್ಲಡೆಯೂ ಸಿಗುವಂತಾಗಲಿ ಎಂದರು. ಕೊಠಡಿಯನ್ನು ಉದ್ಘಾಟಿಸಿದ ಪದ್ಮಶ್ರೀ ತುಳಸೀ ಗೌಡ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಐ.ಆರ್.ಬಿ ಕಂಪನಿಯ ಸಿ.ಜಿ ಮೋಹನದಾಸ, ಟೋಲಗೇಟ್ ಜಿ.ಎಮ್ ವಿವೇಕ ಗಡೇಕರ , ಸಿ.ಪಿ.ಐ. ಸಂತೋಷ ಶೆಟ್ಟಿ, ಅರುಣ ಹರಕಡೆ,  ಟೋಲ್ ಗೇಟ್ ಸಿಬ್ಬಂದಿಗಳು ಉಪಸ್ಥಿತರಿದ್ದರು.

ರಾ.ಹೆ ಸಾರ್ವಜನಿಕ ಹಾಗೂ ಖಾಸಗೀ ವಾಹನಗಳಲ್ಲಿ ಪ್ರಯಾಣಿಸುವಾಗ ಅನೇಕ ಮಹಿಳೆಯರಿಗೆ ಮಗುವಿಗೆ ಹಾಲುಣಿಸಲು ಸಮಸ್ಯೆಗಳು ಎದುರಾಗುತ್ತವೆ ಚಲಿಸುವ ವಾಹನದಲ್ಲಿ ಅಥವಾ ಸಾರ್ವಜನಿಕರೆದುರು ಹಾಲುಣಿಸಲು ಮುಜುಗರದಿಂದ ಕಷ್ಟಪಡುವದರಿಂದ ಮಾನ್ಯ ಜಿಲ್ಲಾಧಿಕಾರಿ ಮುಲೈ ಮುಗಿಲನ್ ರವರ ಸೂಚನೆಯಂತೆ ಐ.ಆರ್.ಬಿ ಕಂಪನಿ ಟೋಲಪ್ಲಾಜಾದಲ್ಲಿ ಜನನ್ಯ ಮಗುವಿನ ಆರೈಕೆ ಕೊಠಡಿಯನ್ನು ನಿರ್ಮಿಸಿದೆ ಈ ಕಟ್ಟಡವು ಪ್ರಶಾಂತವಾದ ನಾಲ್ಕೈದು ಪ್ರತ್ಯೇಕ ಕೊಠಡಿಗಳನ್ನು ಹೊಂದಿದ್ದು ಅಲ್ಲಿ ಗಾಳಿ, ಬೆಳಕು, ಶೌಚಾಲಯ, ಕುಡಿಯುವ ನೀರು, ಮಗುವಿಗೆ ಮಲಗಿಸಲು ಬೆಡ್, ಹಾಗೂ ಕೆಲವು ಅವಶ್ಯಕ ವಸ್ತುಗಳನ್ನು ವ್ಯವಸ್ಥೆಗೊಳಿಸಲಾಗಿದೆ.

Advertisement

ಮುಂದಿನ ದಿನದಲ್ಲಿ ಹೆಚ್ಚು ಹೆಚ್ಚಾಗಿ ಕೆಎಸ್ಆರಟಿಸಿ ಬಸ್ ನಿಲ್ದಾಣ ಮತ್ತು ಸಾರ್ವಜನಿಕ ಪ್ರದೇಶಗಳಲ್ಲಿ ಇಂತಹ ತಾಯಿ ಮಗುವಿಗೆ ಹಾಲುಣಿಸುವ ಕೊಠಡಿ ನಿರ್ಮಾಣ ಮಾಡುವ ಉದ್ದೇಶವಿದೆ . – ಜಿಲ್ಲಾಧಿಕಾರಿ ಮುಲೈ ಮುಗಿಲನ್

Advertisement

Udayavani is now on Telegram. Click here to join our channel and stay updated with the latest news.

Next