ತೆರೆಯಲಾಗಿದ್ದು, ನೆಪ ಮಾತ್ರಕ್ಕೆ ಕಾರ್ಯನಿರ್ವಹಿಸುತ್ತಿದೆ. ಸಕಾಲದಲ್ಲಿ ಮಳಿಗೆ ಬಾಗಿಲು ಕೂಡ ತೆರೆಯುವುದಿಲ್ಲ. ಜನರಿಗೆ ಅಗತ್ಯವಿರುವ ಔಷಧಗಳು ಕೂಡ ಸಿಗುತ್ತಿಲ್ಲ. ಕೆಲವೇ ಕೆಲವು ಮಾತ್ರೆಗಳ ದಾಸ್ತಾನು ಇರುವುದರಿಂದ ಜನರಿಗೆ ಅಷ್ಟೇನು ಉಪಯೋಗ ಆಗುತ್ತಿಲ್ಲ. ಜನೌಷಧಿ ಕೇಂದ್ರದ ಆಶಯವೇ ಈಡೇರುತ್ತಿಲ್ಲ.
Advertisement
ನಿಯಮಾನುಸಾರು ಜನೌಷಧ ಮಳಿಗೆಯಲ್ಲಿ 1,500 ಔಷಧಗಳನ್ನು ಮಾರಾಟ ಮಾಡಲು ಅವಕಾಶವಿದೆ. ಆದರೆ, ಈ ಮಳಿಗೆಯಲ್ಲಿ ಅರ್ಧದಷ್ಟು ಔಷಧಗಳು ಕೂಡ ಸಿಗುವುದಿಲ್ಲ. ರಿಯಾಯಿತಿ ದರದಲ್ಲಿ ಔಷಧ ಸಿಗುತ್ತದೆ ಎಂದು ನಂಬಿ ಬಂದರೆ ಬರಿಗೈನಲ್ಲಿ ನಿರಾಸೆಯಿಂದ ಹೋಗಬೇಕಾದ ಪರಿಸ್ಥಿತಿ ಇದೆ. ಮಳಿಗೆ ಆರಂಭಿಸಿ ಮೂರ್‍ನಾಲ್ಕು ವರ್ಷಗಳು ಕಳೆದಿದ್ದರೂ ಇಂದಿಗೂನಾಮಫಲಕಅಳವಡಿಸಿಲ್ಲ.ಔಷಧ ಕೇಂದ್ರಇದೆಎಂಬುದೇ ಜನ ಸಾಮಾನ್ಯರಿಗೆ ತಿಳಿಯುತ್ತಿಲ್ಲ. ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆ ತನಕ ಕಾರ್ಯನಿರ್ವಹಿಸಬೇಕು ಎಂಬ ನಿಯಮವಿದ್ದರೂ ಇದ್ಯಾವುದೂ ಇಲ್ಲಿ ಪಾಲನೆಯಾಗುತ್ತಿಲ್ಲ. ಈ ನಡುವೆ ಬೆರಳೆಣಿಕೆ ಯಷ್ಟು ಔಷಧಗಳು ಮಾತ್ರ ಲಭ್ಯವಿದ್ದು, ಜನರಿಗೆ ತುರ್ತು ಬೇಕಾದ ಮಾತ್ರೆಗಳೇ ಸಿಗುತ್ತಿಲ್ಲ.
Related Articles
ನೀಡುವುದಾದರೆ ಜನೌಷಧಕೇಂದ್ರವನ್ನಾದರೂ ಏಕೆ ತೆರೆಯಬೇಕಿತ್ತು ಎಂದು ಸ್ಥಳೀಯರಾದ ಉಮೇಶ್ ಜೀವಕ ಮತ್ತಿತರರು ಪ್ರಶ್ನಿಸಿದ್ದಾರೆ.
ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಈ ಬಗ್ಗೆ ಗಮನ ಹರಿಸಿ ಜನರಿಗೆ ಉತ್ತಮ ಸೇವೆ ಸಿಗುಂತೆ ಜನೌಷಧ ಮಳಿಗೆ
ಕಾರ್ಯನಿರ್ವಹಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
Advertisement
ಜನೌಷಧ ಕೇಂದ್ರದಆಶಯ ಈಡೇರಲಿ
ಜನರಿಗೆ ರಿಯಾಯಿತಿ ದರಲ್ಲಿ ಮಾತ್ರೆಗಳು, ಟಾನಿಕ್‌ಗಳು ತಲುಪಿಸುವ ಆಶಯದೊಂದಿಗೆಕೇಂದ್ರ ಸರ್ಕಾರದ ಮಹತ್ವಾ ಕಾಂಕ್ಷಿ ಜನೌಷಧಕೇಂದ್ರ ತೆರೆಯಲಾಗಿದೆ. ಆದರೆ, ಇಲ್ಲಿ ಸೇವೆಯೇ ಅಸಮರ್ಪಕವಾಗಿದೆ. ಹೀಗಾಗಿ ಜನರು ಮಳಿಗೆಯ ಕಾರ್ಯವೈಖರಿಗೆ ಬೇಸತ್ತಿದ್ದಾರೆ. ಈ ಧೋರಣೆ ಯನ್ನು ಬದಲಿಸಿ ಕೊಂಡು ಜನಸ್ನೇಹಿಯಾಗಿ ಕಾರ್ಯನಿರ್ವಹಿಸಬೇಕಿದೆ. ಇಲ್ಲಿ ತೆರೆದಿರುವ ಮಳಿಗೆಗೆ ಮೊದಲ ನಾಮಫಲಕ ಅಳವಡಿಸಬೇಕು. ಸಕಾಲದಲ್ಲಿ ಬಾಗಿಲು ತೆರೆಯಬೇಕು. ಮಾರಾಟಗಾರರ ಮೊಬೈಲ್ ಸಂಖ್ಯೆ ನಮೂದಿಸಬೇಕು. ಈ ಭಾಗದ ಜನರಿಗೆ ತುರ್ತು ಬೇಕಿರುವ ಔಷಧ ಗಳು ಸಿಗುವಂತಾಗಬೇಕು.ಕಾಲ ಕಾಲಕ್ಕೆ ಪರಿಶೀಲನೆ ನಡೆಸಿ ಎಲ್ಲ ರೀತಿಯ ಔಷಧ ದಾಸ್ತಾನು ಇರುವಂತೆ ನೋಡಿಕೊಳ್ಳಬೇಕು. ಜನರು ಮೆಡಿಕಲ್ ಸ್ಟೋರ್‌ಗಳನ್ನು ಅವಲಂಬಿಸುವುದನ್ನು ತಪ್ಪಿಸಬೇಕಿದೆ. ಎಚ್.ಡಿ.ಕೋಟೆ ತಾಲೂಕಿಗೆ ಜನ ಔಷಧಕೇಂದ್ರ ಮಂಜೂರಾಗಿರುವುದು ವರದಾನ. ಮಳಿಗೆಯಲ್ಲಿ 1,400ಕ್ಕೂ ಅಧಿಕ ಔಷಧಗಳನ್ನು ಮಾರಾಟ ಮಾಡಲು ಅವಕಾಶ ಇದೆ. ಆದರೆ, ಇಲ್ಲಿಕೇವಲ 400 ಔಷಧಗಳು ಮಾತ್ರ ಲಭ್ಯ ಇವೆ ಎಂಬ ಆರೋಪಗಳುಕೇಳಿ ಬಂದಿವೆ. ಈ ಕುರಿತು ಔಷಧ ಕೇಂದ್ರದ ಮುಖ್ಯಸ್ಥರಿಗೆ ಮಾಹಿತಿ ನೀಡಿದ್ದರೂ ಉಪಯೋಗವಾಗಿಲ್ಲ.
-ಡಾ| ರವಿಕುಮಾರ್, ತಾಲೂಕು ಆರೋಗ್ಯಾಧಿಕಾರಿ -ಎಚ್.ಬಿ.ಬಸವರಾಜು