ಉಡುಪಿ: ಪರ್ಯಾಯ ಶ್ರೀ ಪುತ್ತಿಗೆ ಶ್ರೀಕೃಷ್ಣ ಮಠದ ಆಶ್ರಯದಲ್ಲಿ ನಡೆಯುವ ವಾರ್ಷಿಕ ಸಪ್ತೋತ್ಸವ ಕಾರ್ಯಕ್ರಮ ಜ. 9 ರಿಂದ ಜ. 15ರವರೆಗೆ 7 ದಿನಗಳ ಕಾಲ ಅತ್ಯಂತ ವೈಭವದಿಂದ ನಡೆಯಲಿದೆ.
ಮಕರ ಸಂಕ್ರಮಣದ ಪವಿತ್ರದಂದು 8 ಶತಮಾನಗಳ ಹಿಂದೆ ಜಗದ್ಗುರು ಶ್ರೀಮನ್ಮದ್ವಾಚಾರ್ಯರು ದ್ವಾರಕೆಯಿಂದ ಬಂದ ಶ್ರೀ ಕೃಷ್ಣ ನನ್ನು ಭಕ್ತರಿಗಾಗಿ ಉಡುಪಿಯಲ್ಲಿ ಪ್ರತಿಷ್ಠಾಪಿಸಿದ್ದರು.
ಉಡುಪಿಯ ಅಪೂರ್ವ ಪೂಜಾ ಉತ್ಸವ ವೈಭವಗಳಿಂದ ಜಗತ್ತಿನ ಗಮನ ಸೆಳೆದ ಧಾರ್ಮಿಕ ಸಾಂಸ್ಕೃತಿಕ ನಗರಿಯಾದ ರಜತಪೀಠ ಪುರಿ ಎಂದು ಕೊಂಡಾಡಲ್ಪಟ್ಟ ಉಡುಪಿಯಲ್ಲಿ ನಡೆಯುವ ಈ ಸಪ್ತೋತ್ಸವದಲ್ಲಿ ಭಾಗವಹಿಸಲು ಪೂಜ್ಯ ಪರ್ಯಾಯ ಶ್ರೀಪಾದರ ಆಹ್ವಾನದಂತೆ ಆಸ್ಟ್ರೇಲಿಯಾದ ವಿಕ್ಟೋರಿಯಾ ರಾಜ್ಯದ ಪ್ರಸಕ್ತ ಎಂಪಿ ಯಾದ ಜಾನ್ ಮುಲಾಯ್ ರವರು ಆಗಮಿಸಲಿದ್ದಾರೆ.
ಹಾಗೆ ತಮ್ಮ ಅಮೂಲ್ಯ ಭಾಗವತ ಪ್ರವಚನ ಗಳಿಂದ ಉಪರಾಷ್ಟ್ರಪತಿಯಾದಿಯಾಗಿ ಅನೇಕ ಗಣ್ಯರ ಗೌರವಕ್ಕೆ ಭಾಜನರಾದ ಉಡುಪಿಯ ಕೃಷ್ಣನ ಪರಮಭಕ್ತರಾದ ಗೌಡೀಯ ಮಾಧ್ವ ಮಠದ ಮಹಾಸ್ವಾಮಿಗಳಾದ ಶ್ರೀ ಪುಂಡರೀಕ ಗೋಸ್ವಾಮಿಯವರು ಭಾಗವಹಿಸಲಿದ್ದಾರೆ ಎಂದು ಪರ್ಯಾಯ ಮಠದ ಪ್ರಕಟಣೆ ತಿಳಿಸಿದೆ.