Advertisement

ಜ.16, 17: ವಿವಿಧೆಡೆ ವಿದ್ಯುತ್‌ ವ್ಯತ್ಯಯ

12:42 PM Jan 14, 2018 | Team Udayavani |

ಮಹಾನಗರ: ಗುರುಪುರ ಉಪಕೇಂದ್ರದಿಂದ ಹೊರಡುವ 11 ಕೆ.ವಿ. ಫೀಡರ್‌ಗಳಲ್ಲಿ ತುರ್ತು ವಿದ್ಯುತ್‌ ನಿರ್ವಹಣೆ ಕಾಮಗಾರಿಯನ್ನು ಇರುವುದರಿಂದ ವಿವಿಧೆಡೆ ಜ. 16ರಂದು ಬೆಳಗ್ಗೆ 9.30ರಿಂದ ಸಂಜೆ 6 ಗಂಟೆಯವರೆಗೆ 110 ಕೆ.ವಿ. ವಿದ್ಯುತ್‌ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

Advertisement

ಕಂದಾವರ, ಕಲ್ಲಾಪು, ಮೂಡುಕೆರೆ, ಕೌಡೂರು, ಆದ್ಯಪಾಡಿ, ಪಾದೆ, ದೋರಿಂಜೆ, ಕೈಕಂಬ ಪೇಟೆ, ಸುರಲ್ಪಾಡಿ, ಗಂಜಿಮಠ, ಕುಕ್ಕಟ್ಟೆ, ಗಾಂಧಿನಗರ, ನಾರ್ಲಪದವು, ಒಡ್ಡೂರು, ಮಾರ್ಗದಂಗಡಿ, ಕಂದಾವರ, ಸುರಭಿಕಟ್ಟೆ, ಹೊಗೆಪದವು, ಮಟ್ಟಿ, ಮುಂಡೇವು, ಗುರುಪುರ ಪೇಟೆ, ಅಲೈಗುಡ್ಡೆ, ಕೊಟ್ಟಾರಿಗುಡ್ಡೆ, ಮಠದ ಗುಡ್ಡೆ, ಕೊಳಂಬೆ, ಮೂಡುಪೆರಾರ, ಮುರ, ಕಜೆಪದವು, ತಿರುವೆದ ಗುರಿ, ಕಿನ್ನಿಕಂಬಳ, ಎರ್ಮೆಪದವು, ಗುರುಕಂಬ್ಳ, ದರ್ಗಾ, ಮುಂಡಬೆಟ್ಟು, ಕೊಂಪದವು, ಪೆರಾರ, ಚರ್ಚ್‌, ಮಳಲಿ, ಭವಂತಿಬೆಟ್ಟು, ಮುಲ್ಲಗುಡ್ಡೆ, ನಾಡಜೆ, ಚೆನ್ನರಪಾದೆ, ಸಾದೂರು, ಅಡ್ಡೂರು, ತಾರಿಕರಿಯ, ಕಾಂಜಿಲಕೋಡಿ, ಇ.ಪಿಐ.ಪಿ. ಕೈಗಾರಿಕಾ ವಲಯ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಿಲುಗಡೆ ಮಾಡಲಾಗುವುದು.

ಕುದ್ರೋಳಿ ಉಪಕೇಂದ್ರದಿಂದ ಹೊರಡುವ ಕಾರ್‌ಸ್ಟ್ರೀಟ್‌, ಪ್ರಗತಿ, ಡೊಂಗರಕೇರಿ ಫೀಡರ್‌ಗಳ ಅಳಕೆ, ಡೊಂಗರಕೇರಿ, ಪಿ.ವಿ. ಮಹೇಂದ್ರ ಆರ್ಕೆಡ್‌, ಕೋರ್ಟ್‌ ರೋಡ್‌, ಮೆಜೆಸ್ಟಿಕ್‌ ಕಾಂಪ್ಲೆಕ್ಸ್‌, ಕರಂಗಲ್ಪಾಡಿ, ಮಾರ್ಕೆಟ್‌, ಜೈಲ್‌ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜ. 16ರಂದು ಬೆಳಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್‌ ಸರಬರಾಜಿನಲ್ಲಿ ನಿಲುಗಡೆ ಮಾಡಲಾಗುವುದು.

ಬಿಜೈ ಉಪಕೇಂದ್ರದ 20 ಎಂ.ವಿ.ಎ. ಶಕ್ತಿ ಪರಿವರ್ತಕ 1ರಲ್ಲಿ ಕೆಪಿಟಿಸಿಎಲ್‌ ವತಿಯಿಂದ ನಿರ್ವಹಣ ಕಾಮಗಾರಿ ಹಮ್ಮಿಕೊಂಡಿದೆ. ಹ್ಯಾಟ್‌ಹಿಲ್‌, ಬಿಜೈ , ಕಾಪಿಕಾಡ್‌, ಆನೆಗುಂಡಿ, ಕೊಟ್ಟಾರ ಕ್ರಾಸ್‌, ದಡ್ಡಲ್‌ ಕಾಡು, ಕುಂಟಿಕಾನ, ಸಂಕೇಶ್‌, ಕೋಟೆಕಣಿ, ಭಾರತಿನಗರ, ಬಿಜೈ ಮೈನ್‌ ರೋಡ್‌, ಬಿಜೈ ನ್ಯೂರೋಡ್‌, ಸಂಕೈಗುಡ್ಡ, ಬಟ್ಟಗುಡ್ಡ, ಕದ್ರಿಹಿಲ್ಸ್‌, ಬಿಜೈ ಕೆಎಸ್‌ಆರ್‌ ಟಿಸಿ, ವಿವೇಕನಗರ, ಕೊಡಿಯಾಲ್‌ ಗ‌ುತ್ತು, ಜೈಲ್‌ ರೋಡ್‌ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜ. 17ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್‌ ಸರಬರಾಜಿನಲ್ಲಿ ನಿಲುಗಡೆ
ಮಾಡಲಾಗುವುದು.

ಜ. 17ರಂದು ಬೆಳಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ ಕಾವೂರು ಉಪಕೇಂದ್ರದಿಂದ ಹೊರಡುವ 11 ಕೆ.ವಿ. ಸುಂಕದಕಟ್ಟೆ, ಪೆರಾರ, ಈಶ್ವರಕಟ್ಟೆ ಫೀಡರ್‌ಗಳಲ್ಲಿ ತುರ್ತು ನಿರ್ವಹಣೆ ಕಾಮಗಾರಿಗಳನ್ನು ಹಮ್ಮಿಕೊಂಡಿರುವುದರಿಂದ, ತಾರಿಕಂಬ್ಳ, ಜರಿನಗರ, ಸುಂಕದಕಟ್ಟೆ, ಅಂಬಿಕಾನಗರ, ಪಡುಪೆರಾರ, ಪುಚ್ಚಲ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜ. 17ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್‌ ನಿಲುಗಡೆ ಮಾಡಲಾಗುವುದು.

Advertisement
Advertisement

Udayavani is now on Telegram. Click here to join our channel and stay updated with the latest news.

Next