Advertisement

ನ.1ರಿಂದ ಜಮುರಾ ರಾಷ್ಟ್ರೀಯ ನಾಟಕೋತ್ಸವ

10:51 PM Oct 28, 2019 | Team Udayavani |

ಚಿತ್ರದುರ್ಗ: ಕನ್ನಡ ರಾಜ್ಯೋತ್ಸವದ ಅಂಗವಾಗಿ ನಗರದ ಮುರುಘಾ ಮಠದಲ್ಲಿ ನ. 1 ರಿಂದ 6 ರವರೆಗೆ ಜಮುರಾ ರಾಷ್ಟ್ರೀಯ ನಾಟಕೋತ್ಸವವನ್ನು ಆಯೋಜಿಸಲಾಗಿದೆ. ಡಾ| ಶಿವಮೂರ್ತಿ ಮುರುಘಾ ಶರಣರ ಸಾನ್ನಿಧ್ಯದಲ್ಲಿ ಆರು ದಿನಗಳ ಕಾಲ ನಡೆಯುವ ಈ ನಾಟಕೋತ್ಸವಕ್ಕೆ ನ. 1 ರಂದು ಸಂಜೆ 6 ಗಂಟೆಗೆ ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಆರ್‌. ಭೀಮಸೇನ ಉದ್ಘಾಟಿಸುವರು.

Advertisement

ನಾಟಕೋತ್ಸ ವದ ಸಭಾ ಕಾರ್ಯಕ್ರಮಗಳಲ್ಲಿ ವಸತಿ ಸಚಿವ ವಿ. ಸೋಮಣ್ಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ. ರವಿ, ಜಿಲ್ಲಾ ಉಸ್ತುವಾರಿ ಸಚಿವ ಬಿ. ಶ್ರೀರಾಮುಲು ಹಾಗೂ ಸಮಾರೋಪ ಸಮಾರಂಭದಲ್ಲಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಭಾಗವಹಿಸುವರು.

ರಂಗ ಸಂಘಟಕ ಶ್ರೀನಿವಾಸ ಜಿ. ಕಪ್ಪಣ್ಣ, ಬೆಂಗಳೂರಿನ ರಂಗ ನಿರ್ದೇಶಕ ಕೃಷ್ಣಮೂರ್ತಿ ಕವತ್ತಾರ್‌, ಹಿರಿಯೂರಿನ ರಂಗ ಕಲಾವಿದೆ ಭಾಗ್ಯಶ್ರೀ, ರಾಷ್ಟ್ರೀಯ ನಾಟಕ ಶಾಲೆ ನಿರ್ದೇಶಕ ಸಿ. ಬಸವಲಿಂಗಯ್ಯ, ಹೊಳಲ್ಕೆರೆಯ ಹಿರಿಯ ರಂಗ ಕಲಾವಿದ ಸುಭಾಶ್ಚಂದ್ರ ದೇವರಗುಡ್ಡ, ಮೈಸೂರಿನ ಹಿರಿಯ ರಂಗ ನಿರ್ದೇಶಕ ಗಂಗಾಧರಸ್ವಾಮಿ ಅವರನ್ನು ಸನ್ಮಾನಿಸಲಾಗುವುದು. ಪ್ರತಿ ದಿನ ಸಂಜೆ ಬೆಂಗಳೂರಿನ ಥಿಯೇಟರ್‌ ವಿಂಗ್ಸ್‌ ತಂಡ, ನೀನಾಸಂ, ಜಮುರಾ, ಹೈದರಾಬಾದ್‌ನ ಜಿ.ಪಿ.ಎಲ್‌ ಮೀಡಿಯಾ ತಂಡಗಳು ವಿವಿಧ ನಾಟಕಗಳನ್ನು ಪ್ರದರ್ಶಿಸಲಿವೆ.

Advertisement

Udayavani is now on Telegram. Click here to join our channel and stay updated with the latest news.

Next