Advertisement

Jammu-Kashmir: ಏಳು ವಲಸಿಗ ಕಾರ್ಮಿಕರ ಹ*ತ್ಯೆಗೈದ ಉಗ್ರರು, ಕೆಲವರಿಗೆ ಗಾಯ

12:33 AM Oct 21, 2024 | Team Udayavani |

ಶ್ರೀನಗರ: ಜಮ್ಮು-ಕಾಶ್ಮೀರದ ಗಾಂದರ್‌ಬಲ್‌ ಜಿಲ್ಲೆಯ ಸೋನ್‌ಮಾರ್ಗ್‌ ಪ್ರದೇಶದಲ್ಲಿ ರವಿವಾರ ಸಂಜೆ ನಡೆದ ಭಯೋತ್ಪಾದಕ ದಾಳಿಯಲ್ಲಿ ವೈದ್ಯರೊಬ್ಬರು ಸೇರಿ ಒಟ್ಟು ಏಳು ಮಂದಿ ವಲಸಿಗ ಕಾರ್ಮಿಕರು ಮೃತಪಟ್ಟಿದ್ದರೆ, ಕೆಲವು ಕಾರ್ಮಿಕರು ಗಾಯಗೊಂಡಿದ್ದಾರೆ.

Advertisement

ಜಿಲ್ಲೆಯ ಗುಂಡ್‌ ಪ್ರದೇಶದಲ್ಲಿ ನಡೆಯುತ್ತಿರುವ ಗಗನೀರ್‌ನಿಂದ ಸೋನ್‌ಮಾರ್ಗ್‌ ಸಂಪರ್ಕಿಸುವ ಸುರಂಗ ನಿರ್ಮಾಣ ಕಾರ್ಯದಲ್ಲಿ ನಿಯೋಜಿತರಾಗಿದ್ದ ಖಾಸಗಿ ಕಂಪನಿಯ ಕಾರ್ಮಿಕರ ಕ್ಯಾಂಪ್‌ಗಳ  ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಘಟನೆಯಲ್ಲಿ ಮೂವರು ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟಿದ್ದರೆ, ಐವರು ಕಾರ್ಮಿಕರು ಗಾಯಗೊಂಡಿದ್ದಾರೆ. ದಾಳಿಕೋರರನ್ನು ಪತ್ತೆಹಚ್ಚಲು ಸೇನೆ ಮತ್ತು ಪೊಲೀಸರು ಈ ಪ್ರದೇಶದಲ್ಲಿ ಕಾರ್ಯಾಚರಣೆ ಆರಂಭಿಸಿದ್ದಾರೆ. ಶುಕ್ರವಾರವಷ್ಟೇ ಶೋಪಿಯಾನ್‌ ಜಿಲ್ಲೆಯಲ್ಲಿ ಉಗ್ರರಿಂದ ಹತನಾದ ಬಿಹಾರ ಮೂಲದ ಕಾರ್ಮಿಕನ ಶವ ಪತ್ತೆಯಾಗಿತ್ತು.

ಸಿಎಂ ಒಮರ್ ಅಬ್ದುಲ್ಲಾ ಖಂಡನೆ:
ಈ ಭಯೋತ್ಪಾದಕ ದಾಳಿಯ ಕುರಿತು ಜಮ್ಮು -ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ  ಎಕ್ಸ್‌ನಲ್ಲಿ ಪೋಸ್ಟ್‌ನಲ್ಲಿ  “ನಿರಾಯುಧ ಅಮಾಯಕರ” ಮೇಲಿನ ಉಗ್ರ  ದಾಳಿಯ ತೀವ್ರವಾಗಿ ಖಂಡಿಸಿ ಮೃತರಿಗೆ ಸಂತಾಪ ಸೂಚಿಸಿದ್ದಾರೆ. “ಸೋನಾಮಾರ್ಗ್ ಪ್ರದೇಶದ ಗಗಾಂಗಿರ್‌ನಲ್ಲಿ ಸ್ಥಳೀಯರಲ್ಲದ ಕಾರ್ಮಿಕರ ಮೇಲೆ ಹೇಡಿತನದ ದಾಳಿ ಅತ್ಯಂತ ದುಃಖದ ಸಂಗತಿ . ಈ ಪ್ರದೇಶದಲ್ಲಿ  ಮೂಲಸೌಕರ್ಯ ಯೋಜನೆಯಲ್ಲಿ  ಕಾರ್ಯನಿರ್ವಹಿಸುತ್ತಿದ್ದ ನಿರಾಯುಧ ಅಮಾಯಕ ಕಾರ್ಮಿಕರ ಮೇಲೆ ಉಗ್ರರ ದಾಳಿಯ ನಾನು ಬಲವಾಗಿ ಖಂಡಿಸುತ್ತೇನೆ ಹಾಗೂ ಮೃತಪಟ್ಟ ಕಾರ್ಮಿಕರ ಕುಟುಂಬದವರಿಗೆ ಸಂತಾಪ ಸೂಚಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next