Advertisement

ಕಾಶ್ಮೀರದಲ್ಲಿ  ಭಾರೀ ಹಿಮಪಾತ : ಜಮ್ಮು -ಶ್ರೀನಗರ ಹೆದ್ದಾರಿ ಬಂದ್‌ 

05:43 AM Jan 11, 2019 | |

ಶ್ರೀನಗರ: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರೀ ಹಿಮಪಾತವಾಗಿದ್ದು ಜನಜೀವನಕ್ಕೆ ತೀವ್ರ ಬಾಧಿತವಾಗಿದೆ. ಶುಕ್ರವಾರ ಶ್ರೀನಗರದಲ್ಲಿ – 1.0 ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲಾಗಿದ್ದು, ಪಹಲ್‌ಗಾಮ್‌ನಲ್ಲಿ – 3.0 ಮತ್ತು ಗುಲ್‌ಮಾರ್ಗ್‌ನಲ್ಲಿ ಕನಿಷ್ಠ  – 7.5 ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲಾಗಿದೆ.

Advertisement

ಹಿಮ ವಿಪರೀತ ಪ್ರಮಾಣದಲ್ಲಿ ಸುರಿಯುತ್ತಿರುವ ಕಾರಣ ಜಮ್ಮು  ಮತ್ತು ಶ್ರೀಗರ ಹೆದ್ದಾರಿ ಸಂಚಾರ ಸಂಪೂರ್ಣ ಬಂದ್‌ ಆಗಿದೆ. ಜವಹಾರ್‌ ಸುರಂಗದಲ್ಲಿ ಸಂಚಾರ ಅಸಾಧ್ಯವಾಗಿದೆ ಎಂದು ವರದಿಯಾಗಿದೆ.

ಗುರುವಾರ ಹೆದ್ದಾರಿಯಲ್ಲಿ ಏಕಮುಖ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಶ್ರೀನಗರದಿಂದ ಜಮ್ಮು ಕಡೆಗೆ ವಾಹನಗಳು ಸಂಚರಿಸಿದ್ದವು. 

ಮುಂದಿನ 72 ಗಂಟೆಗಳ ಇದೇ ರೀತಿಯ ವಾತಾವರಣ ಮುಂದುವರಿಯಲಿದೆ ಎಂದು ಹವಮಾನ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. 

ದ್ರಾಸ್‌ ಪ್ರದೇಶದಲ್ಲಿ – 15.2 ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲಾಗಿದೆ. ಜಮ್ಮು ನಗರದಲ್ಲಿ 8.5 ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲಾಗಿದೆ. ಕತ್ರಾದಲ್ಲಿ 7.8, ಬಟೊಟೆಯಲ್ಲಿ 1.5, ಬನ್ನಿಹಾಲ್‌ನಲ್ಲಿ 2.1 ಮತ್ತು ಬದೆರ್‌ವಾಹದಲ್ಲಿ 0.4 ತಾಪಮಾನ ದಾಖಲಾಗಿದೆ. 

Advertisement

ಜನವರಿ 31 ರ ವರೆಗೆ ಕಾಶ್ಮೀರದಲ್ಲಿ ಕಠಿಣ ದಿನಗಳು ಎದುರಾಗಿದ್ದು  ಆ ಬಳಿಕ ಹಿಮಪಾತ ಕಡಿಮೆಯಾಗುವ ಸಾಧ್ಯತೆಗಳಿವೆ. 

Advertisement

Udayavani is now on Telegram. Click here to join our channel and stay updated with the latest news.

Next