Advertisement

ದೇಶಕ್ಕೆ ಕಂಟಕ ಎನಿಸಿದ್ದು ಕೆಲವರಿಗೆ ಉಭಯ ಸಂಕಟವಾಗಿದ್ದೇಕೆ?

04:08 PM Aug 09, 2019 | sudhir |

ಆಹಾರಕ್ಕಾಗಿ ಪೀಡಿಸುತ್ತಿದ್ದ ಜೆಹಾದಿಗಳನ್ನು ಸತ್ಕರಿಸದಿದ್ದರೆ ಎದುರಿಸಬೇಕಾದ ಪರಿಣಾಮಗಳ ಹೆದರಿಕೆ ಒಂದೆಡೆಯಾದರೆ ಉಗ್ರರಿಗೆ ಆಶ್ರಯ ನೀಡಿದ ಶಂಕೆಯಿಂದ ಬೆಂಬತ್ತಿ ಬರುತ್ತಿದ್ದ ಸುರûಾ ಪಡೆಗಳ ಕಾಕದೃಷ್ಟಿಗೆ ಗುರಿಯಾಗಬೇಕಾದ ವಿಕಟ ಸ್ಥಿತಿ ಇನ್ನೊಂದೆಡೆ ಎನ್ನುವಂತಾಗಿತ್ತು ಬಡಪಾಯಿ ಕಾಶ್ಮೀರಿಗನ ಸ್ಥಿತಿ. ಗ್ರಾಮೀಣ ಯುವಕರಿಗೆ ಸೇನೆಯ ಕೂಲಿ (ಪೋರ್ಟರ್‌) ಕೆಲಸ ಆಸರೆಯಾದರೂ ಅದಕ್ಕೂ ಉಗ್ರರ ಪೀಡೆ ತಪ್ಪಿರಲಿಲ್ಲ.

Advertisement

ಹಾವಿನ ಹುತ್ತಕ್ಕೆ ಕೈ ಹಾಕಬೇಕಾದರೆ ಗುಂಡಿಗೆ ಗಟ್ಟಿಯಾಗಿರಬೇಕು ಎನ್ನುವುದು ಎಲ್ಲರಿಗೂ ಗೊತ್ತಿರುವ ಸಾಮಾನ್ಯ ಜ್ಞಾನ. ಹುತ್ತಕ್ಕೆ ದೂರದಿಂದಲೇ ಕೈ ಮುಗಿದು ಶರಣು ಶರಣು ಎಂದು ಜಾರಿಕೊಳ್ಳುವುದೇ ಉತ್ತಮ ಎನ್ನುವವರೇ ಅಧಿಕ. ಭಾರತ ಸ್ವತಂತ್ರವಾದಾಗಿನಿಂದ ಈ ಏಳು ದಶಕದ ಸುದೀರ್ಘ‌ ಅವಧಿಯಲ್ಲಿ ಎÇÉಾ ಸರಕಾರಗಳ ಪಾಲಿಗೆ ಕಾಶ್ಮೀರ ಸಮಸ್ಯೆ ವಿಷಸರ್ಪದ ಹುತ್ತಕ್ಕಿಂತ ಕಡಿಮೆಯಾಗಿರಲಿಲ್ಲ. ಅದರಲ್ಲೂ 90ರ ದಶಕದಲ್ಲಿ ಉಗ್ರರ ಹುಚ್ಚಾಟದ ರಕ್ತಪಾತ ಪ್ರಾರಂಭವಾದ ನಂತರದ ಎÇÉಾ ಪ್ರಧಾನಿಗಳ ಪಾಲಿಗೆ ಆ ಹುತ್ತಕ್ಕೆ ಕೈ ಹಾಕುವುದಿರಲಿ, ಅದನ್ನು ಯಥಾ

ಸ್ಥಿತಿಯಲ್ಲಿಟ್ಟುಕೊಳ್ಳುವುದೇ ದೊಡ್ಡ ತಲೆನೋವಾಗಿತ್ತು. ಸರಕಾರಗಳು ಬದಲಾದಂತೆÇÉಾ ಶಾಂತಿ ಮಾತುಕತೆ, ಆರ್ಥಿಕ ಪ್ಯಾಕೇಜ್‌ ಘೋಷಣೆ, ವಿಶ್ವಾಸ ವೃದ್ಧಿಗಾಗಿ ಪುಂಡಾಟಿಕೆ ಮೆರೆದು ಜೈಲು ಸೇರಿದವರ ಬಿಡುಗಡೆ, ನೂರಾರು ಮುಗ್ಧರನ್ನು ಹತ್ಯೆಗೈದು ಒಳ್ಳೆಯವನಾಗ ಬಯಸುವ ಮಾಜಿ ಉಗ್ರರ ಪುನರ್ವಸತಿಯಂತಹ ಹಲವಾರು ಯೋಜನೆಗಳ ಘೋಷಣೆಯಾಗುತ್ತಿತ್ತು.

ಇನ್ನೊಂದೆಡೆ ಪ್ರತ್ಯೇಕತಾವಾದಿಗಳು ಮತ್ತು ಪಾಕಿಸ್ಥಾನದೊಂದಿಗೆ ಮಾತುಕತೆಯ ಪ್ರಹಸನಗಳು ಜತೆಯಾಗಿ ನಡೆಯುತ್ತಿತ್ತು. ಎಪ್ಪತ್ತು ವರ್ಷಗಳಲ್ಲಿ ಇಷ್ಟೆÇÉಾ ನಿಷ#ಲ ಮಾತುಕತೆಗಳು ನಡೆದರೂ ಇನ್ನೂ ಮಾತುಕತೆ ಇಲ್ಲದೇ ಆರ್ಟಿಕಲ್‌ 370 ರದ್ದುಗೊಳಿಸುವ ಏಕಾಏಕಿ ಕ್ರಮಕೈಗೊಂಡಿದ್ದೀರಿ ಎಂದು ಕಾಂಗ್ರೆಸ್ಸಿಗರು ರಾಜ್ಯಸಭೆಯಲ್ಲಿ ಆರೋಪಿಸುತ್ತಿರುವುದು ವಿಚಿತ್ರವೇ ಸರಿ.

ಸ್ವಘೋಷಿತ ನಾಯಕರು
ತಮಗಿರುವ ಜನಬೆಂಬಲವನ್ನು ಒರೆಗೆ ಹಚ್ಚಲು ಸಿದ್ಧವಿಲ್ಲದ, ಯಾವುದೇ ಚುನಾವಣೆಯಲ್ಲಿ ಭಾಗವಹಿಸದೆ, ತಮ್ಮನ್ನು ತಾವೇ ಕಾಶ್ಮೀರದ ನಿಜವಾದ ಪ್ರತಿನಿಧಿಗಳೆಂದು ಬಿಂಬಿಸಿಕೊಳ್ಳುತ್ತಾ, ಪಾಕಿಸ್ಥಾನದ ಪರ ವಕಾಲತ್ತು ಹಾಗೂ ಉದ್ರೇಕಕಾರಿ ಭಾಷಣ ಮಾಡುತ್ತಾ ಬಂದಿದ್ದ ಪ್ರತ್ಯೇಕತಾವಾದಿ ನಾಯಕರು ಮುಗ್ಧ ಕಾಶ್ಮೀರಿಗಳ ಜೀವನವನ್ನು ನರಕಸದೃಶ ಮಾಡಿದ್ದರು ಎಂದರೆ ತಪ್ಪಾಗದು. ವರ್ಷದ ಆರು ತಿಂಗಳು ಹಿಮ ತುಂಬಿರುವ ಕಾಶ್ಮೀರದ ಗುಡ್ಡಗಾಡಿನ ಜನ ಶಿಕ್ಷಣ,ಸಂಚಾರ ವ್ಯವಸ್ಥೆ, ಆರೋಗ್ಯದಂತ ಮೂಲಸೌಕರ್ಯಗಳಿಂದ ವಂಚಿತ ಕಡು ಕಷ್ಟದ ಬದುಕನ್ನು ಸವೆಸುತ್ತಿದ್ದರೆ, ವಾರಗಟ್ಟಲೆ ಬಂದ್‌ಗಳಿಗೆ ಕರೆಕೊಟ್ಟು ಕಣಿವೆಯ ಜನಜೀವನವನ್ನೇ ಸ್ಥಬ್ಧಗೊಳಿಸುತ್ತಿದ್ದ ಹುರಿಯತ್‌ ನಾಯಕರಲ್ಲಿ ಹೆಚ್ಚಿನವರ ವಂಶದ ಕುಡಿಗಳು ವಿದೇಶಗಳಲ್ಲಿ ಶಿಕ್ಷಣ,ಉದ್ಯೋಗ ಮಾಡಿಕೊಂಡು ಸುಂದರ ಬದುಕು ಕಟ್ಟಿಕೊಂಡಿ¨ªಾರೆ ಎನ್ನುವ ಹಕೀಕತ್ತು ತೀರಾ ಇತ್ತೀಚಿನವರೆಗೆ ಹೊರಜಗತ್ತಿಗೆ ತಿಳಿಯಲೇ ಇಲ್ಲ. ಚಳಿಗಾಲದಲ್ಲಿ ಹಿಮದ ಮಳೆಯಿಂದ ರಸ್ತೆಗಳು ಮುಚ್ಚಿಕೊಂಡು ಕಣಿವೆ ಪ್ರದೇಶ ಹೊರಜಗತ್ತಿನಿಂದ ಸಂಪರ್ಕ ಕಡಿದುಕೊಂಡು ಸುದೂರ ಗುಡªಗಾಡುಗಳಲ್ಲಿ ಗೃಹಬಂಧನ ಸ್ಥಿತಿಯಲ್ಲಿರಬೇಕಾದ ಸಾಮಾನ್ಯ ಕಾಶ್ಮೀರಿಗಳಿಗೆ, ಶ್ರೀನಗರದಲ್ಲಿ ಸರಕಾರಿ ಸುರಕ್ಷೆಯಲ್ಲಿ ಬಂದ್‌ಗಳಿಗೆ ಕರೆನೀಡುವ, ಕಲ್ಲು ತೂರುವವರಿಗೆ ಕುಮ್ಮಕ್ಕು ಕೊಡುವ ನಾಯಕರ ಕರೆಗೆ ಹೇಗೆ ಸ್ಪಂದಿಸಬೇಕೋ ಎನ್ನುವುದು ಯಾವಾಗಲೂ ಅರ್ಥವಾಗದ ಪ್ರಶ್ನೆಯಾಗಿಯೇ ಉಳಿದಿತ್ತು.

Advertisement

ಅಸಹಾಯಕ ಬದುಕು
ಮತಾಂಧರ ಮತೋಪದೇಶಗಳಿಂದ ಬ್ರೈನ್‌ವಾಷ್‌ ಮಾಡಿಕೊಂಡು ಆಯುಧಗಳೊಂದಿಗೆ ಮನೆಗೆ ನುಗ್ಗಿ ಆಹಾರಕ್ಕಾಗಿ ಪೀಡಿಸುತ್ತಿದ್ದ ಜೆಹಾದಿಗಳನ್ನು ಸತ್ಕರಿಸದಿದ್ದರೆ ಎದುರಿಸಬೇಕಾದ ಪರಿಣಾಮಗಳ ಹೆದರಿಕೆ ಒಂದೆಡೆಯಾದರೆ ಉಗ್ರರಿಗೆ ಆಶ್ರಯ ನೀಡಿದ ಶಂಕೆಯಿಂದ ಬೆಂಬತ್ತಿ ಬರುತ್ತಿದ್ದ ಸುರûಾ ಪಡೆಗಳ ಕಾಕದೃಷ್ಟಿಗೆ ಗುರಿಯಾಗಬೇಕಾದ ವಿಕಟ ಸ್ಥಿತಿ ಇನ್ನೊಂದೆಡೆ ಎನ್ನುವಂತಾಗಿತ್ತು ಬಡಪಾಯಿ ಕಾಶ್ಮೀರಿಗನ ಸ್ಥಿತಿ. ಪ್ರವಾಸೋ ದ್ಯಮವನ್ನು ಹೊರತುಪಡಿಸಿ ಇನ್ನಾವುದೇ ಉದ್ಯೋಗಾವಕಾಶವಿಲ್ಲದ ಗ್ರಾಮೀಣ ಪ್ರದೇಶದಲ್ಲಿ ಕಾಶ್ಮೀರಿ ಯುವಕರಿಗೆ ವ್ಯಾಪಕವಾಗಿ ನಿಯೋಜಿತವಾಗಿರುವ ಸೇನೆಯ ಕೂಲಿ (ಪೋರ್ಟರ್‌) ಕೆಲಸವೊಂದೇ ಆಸರೆಯಾದರೂ ಅದಕ್ಕೂ ಉಗ್ರರ ಪೀಡೆ ತಪ್ಪಿರಲಿಲ್ಲ. ಸೇನೆ, ಪೋಲೀಸ್‌ ಉದ್ಯೋಗಗಳಲ್ಲಿರುವಯುವಕರಿಗೆ ಹಾಗೂ ಅವರ ಕುಟುಂಬಸ್ಥರಿಗೆ ಸದಾ ಕಾಡುವಜೀವ ಭಯ, ಅತ್ತ ದರಿ ಇತ್ತ ಪುಲಿ ಎನ್ನುವಂತೆ ಉದ್ಯೋಗವನ್ನು ಬಿಡಲಾಗದ, ನಿಷ್ಠೆಯಿಂದ ಕೆಲಸ ಮಾಡಲಾಗದ ಸ್ಥಿತಿ ಕಾಡುತ್ತಿತ್ತು. ತುತ್ತು ಕೂಳಿಗಾಗಿ ಸಂಘರ್ಷದ ಸ್ಥಿತಿಯನ್ನು ಎದುರಿಸುತ್ತಿದ್ದ ಸಾಮಾನ್ಯ ಕಾಶ್ಮೀರಿಗಳಿಗೆ ಪಾಕಿಸ್ಥಾನದ ಕುಮ್ಮಕ್ಕಿನ ಮೇರೆಗೆ ನಡೆಯುತ್ತಿದ್ದ ಧರ್ಮಯುದ್ಧದೊಂದಿಗಾಗಲೀ ಅಥವಾ ವಿದೇಶಿ ಚಂದಾದ ಪ್ರಾಯೋಜಕತ್ವದಡಿ ನಡೆಯುತ್ತಿದ್ದ ಕಲ್ಲು ತೂರಾಟದಂತಹ ಸಮಾಜ ಕೃತ್ಯದೊಂದಿಗೆ ದೂರದೂರದವರೆಗೆ ಸಂಬಂಧವಿರಲಿಲ್ಲ ಎನ್ನುವುದು ಕಾಶ್ಮೀರದ ಹಳ್ಳಿಗಾಡಿನ ಸಾಮಾನ್ಯರನ್ನು ತೀರಾ ಹತ್ತಿರದಿಂದ ಕಂಡಿದ್ದವರಿಗೆ ಮಾತ್ರ ಗೊತ್ತಿದೆ.

ಅಸಮಾನತೆಯ ಮೂಲ ಕಾರಣ
ಧರ್ಮದ ಅಫೀಮಿನೊಂದಿಗೆ ಸ್ವಾತಂತ್ರ್ಯದ ಹುಚ್ಚು ಹತ್ತಿಸಿಕೊಂಡ ಕೆಲವೇ ಕೆಲವು ದಾರಿತಪ್ಪಿದ ಯುವಕರಿಂದ ಜನ್ನತ್‌ ಆಸೆಗಾಗಿ ನಡೆಯುತ್ತಿದ್ದ ಧರ್ಮಯುದ್ಧದಿಂದಾಗಿ ಭುವಿಯ ಸ್ವರ್ಗ ಎನಿಸಿದ ಕಾಶ್ಮೀರ ರಕ್ತಪಾತದಿಂದ ಕೊತಕೊತ ಕುದಿಯುತ್ತಿತ್ತು. ಸ್ವಾಯತ್ತತೆ, ಸ್ವಾತಂತ್ರ್ಯ ಎನ್ನುವ ಚಂದದ ಶಬ್ದಗಳ ಲಾಲಿಪಾಪ್‌ ತೋರಿಸಿ ಪ್ರತ್ಯೇಕತಾವಾದಿಗಳು ಪಂಡಿತರನ್ನು ಓಡಿಸಿ, ತಮ್ಮದೇ ಸ್ತ್ರೀ-ಪುರುಷರನ್ನು ಗುಲಾಮರಾಗಿಸಿ ಕಾಶ್ಮೀರ ಭಾರತದಲ್ಲಿ ಲ್ಲವೇನೋ ಎನ್ನುವ ಕಲ್ಪನೆ ಮೂಡುವಂತಹ ವಾತಾವರಣ ಮೂಡಿಸಿದ್ದರು.

ಇದೆಲ್ಲದಕ್ಕೂ ಮೂಲ ಕಾರಣ ಜಮ್ಮು ಕಾಶ್ಮೀರಕ್ಕಿದ್ದ ವಿಶೇಷ ಸ್ಥಾನಮಾನ. ಯಾವ ವಿಶೇಷ ಸ್ಥಾನಮಾನದಿಂದ ಕಾಶ್ಮೀರಿಗರು ಭಾರತದ ಮುಖ್ಯಧಾರೆಗೆ ಬರಬಹುದೆಂದು ಆಶಿಸಲಾಗಿತ್ತೋ ಆ ವಿಶೇಷ ಸ್ಥಾನಮಾನ ಅನೇಕ ಅಸಮಾಧಾನಗಳಿಗೆ, ಅಸಮಾನತೆಗೆ ಕಾರಣವಾಯಿತು. ಕಾಶ್ಮೀರಿ ಯುವತಿಯರು ಹೊರ ರಾಜ್ಯದವರನ್ನು ಮದುವೆಯಾದರೆ ಪೌರತ್ವ ಕಳೆದುಕೊಳ್ಳುವ ತಾರತಮ್ಯ ಎದುರಿಸಬೇಕಾಯಿತು. ಸ್ವಾತಂತ್ರ್ಯ ಬಂದು ಎಪ್ಪತ್ತು ವರ್ಷಗಳು ಕಳೆದ ಅನಂತರವೂ ಭಾರತದ ಸಂವಿಧಾನದ ಅನ್ವಯ ಜಮ್ಮು – ಕಾಶ್ಮೀರದಲ್ಲಿ ನೆಲೆಸಿರುವ ಅಲ್ಪಸಂಖ್ಯಾತರಿಗೆ ಮತ್ತು ದಲಿತರಿಗೆ ಸಿಗಬೇಕಾದ ಸವಲತ್ತುಗಳು ಸಿಗದಿರಲು ಕಾರಣವಾಯಿತು. ಭಾರತದ ಅನ್ಯಪ್ರಾಂತದವರು ಅಲ್ಲಿ ಆಸ್ತಿಪಾಸ್ತಿ ಖರೀದಿಸಲು ನೆಲೆಸಲು ಅಡ್ಡಿಯಾಯಿತು. ಆರ್ಟಿಕಲ್‌ 370 ಮತ್ತು 35ಎ ಸಮಾಪ್ತಿಯೊಂದಿಗೆ ಕಾಶ್ಮೀರ ಭಾರತದ ಇತರ ರಾಜ್ಯಗಳಂತೆ ನಮ್ಮ ಜಾತ್ಯಾತೀತ ಸಂವಿಧಾನಬದ್ಧ ಶಾಸನಕ್ಕೆ ಒಳಪಡುವಂತಾಯಿತು. ಇದರೊಂದಿಗೆ ಕಾಶ್ಮೀರದಲ್ಲಿ ಇದುವರೆಗೆ ಪ್ರತ್ಯೇಕತಾವಾದಿಗಳು ನಡೆಸಿಕೊಂಡು ಬಂದಿರುವ ಜೆಹಾದಿ ಅಂಗಡಿಗಳು ಬಂದ್‌ ಆಗಲು ಕಾರಣವಾಯಿತು ಎನ್ನುವ ಆಶಾಭಾವನೆ ದೇಶದಾದ್ಯಂತ ಮೂಡಿದೆ. ಶಂಕರಾಚಾರ್ಯರ ಪಾದಸ್ಪರ್ಷದಿಂದ ಪುನೀತವಾದ ಪುಣ್ಯಭೂಮಿಯಲ್ಲಿ ಶಾಂತಿ ಸ್ಥಾಪನೆಯಾಗಬಹುದೆನ್ನುವ ಸಂತಸ ದೇಶದೆÇÉೆಡೆ ಕಂಡು ಬಂದಿದೆ.

ಕಟು ವಿರೋಧಿಗಳಾಗಿದ್ದ ಬಹುಜನ ಸಮಾಜ ಪಕ್ಷ, ತೆಲುಗು ದೇಶಂ ಪಕ್ಷ ಕೂಡಾ ಸರ‌ಕಾರದ ಕ್ರಮವನ್ನು ಸ್ವಾಗತಿಸಿ ಬೆಂಬಲಿಸಿದರೆ ದೇಶದ ಅತ್ಯಂತ ಹಳೆಯ ರಾಜಕೀಯ ಪಕ್ಷವಾದ ಕಾಂಗ್ರೆಸ್‌ ಕಿಂಕರ್ತವ್ಯ ವಿಮೂಢವಾದಂತೆ ವರ್ತಿಸುತ್ತಿರುವುದು ಆಶ್ಚರ್ಯಕರ. ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಸುದ್ದಿ ಮಾಧ್ಯಮಗಳಲ್ಲಿ ಸರಕಾರದ ಕಟು ಟೀಕಾಕಾರರೂ ಎಪ್ಪತ್ತು ವರ್ಷಗಳಿಂದ ಕಾಡುತ್ತಿದ್ದ ಸಮಸ್ಯೆಗೆ ವಿಶೇಷ ಸ್ಥಾನಮಾನ ರದ್ದತಿಯಂತಹ ಶಾಕ್‌ ಟ್ರೀಟ್‌ಮೆಂಟ್‌ ಮೂಲಕ ನರೇಂದ್ರ ಮೋದಿ ಸರಕಾರ ತೆಗೆದುಕೊಂಡ ದಿಟ್ಟ ಕ್ರಮಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು. ದೇಶದ ಎÇÉಾ ಪ್ರಾಂತಗಳಿಗೆ ಸೇರಿದ ಸೈನಿಕರ ಶವಗಳು ಆಗಾಗ್ಗೆ ಕಾಶ್ಮೀರದಿಂದ ಬರುತ್ತಿದ್ದುದನ್ನು ನೋಡಿ ಮಮ್ಮಲ ಮರುಗುತ್ತಿದ್ದ ರಾಜ್ಯಗಳ ನಾಯಕರು, ಸಾಮಾನ್ಯ ಜನರು ಇನ್ನು ಮುಂದಾದರೂ ಇಂತಹ ಘಟನೆಗಳು ಸಂಭವಿಸದು ಎಂದು ನಿಟ್ಟುಸಿರು ಬಿಟ್ಟರೆ ಕಾಂಗ್ರೆಸ್ಸಿನ ನಾಯಕರ ವಿರೋಧಾಭಾಸದ ಹೇಳಿಕೆಗಳು ಪ್ರಜ್ಞಾವಂತರನ್ನು ಹತಪ್ರಭ ಗೊಳಿಸಿತು. ಸ್ತ್ರೀ ಸಮಾನತೆ, ದಲಿತೋದ್ಧಾರದ ನೀತಿಯನ್ನು ಪ್ರತಿಪಾದಿಸುತ್ತಿದ್ದ ಪಕ್ಷ ಇಷ್ಟೊಂದು ಅಸಮಾನತೆಗೆ ಕಾರಣವಾಗಿದ್ದ ವಿಶೇಷ ಸ್ಥಾನಮಾನ ರದ್ದತಿಗಾಗಿ ಶೋಕಿಸುತ್ತಿರುವುದು, ಕರಾಳ ದಿನಕ್ಕೆ ಕರೆಕೊಡುತ್ತಿರುವುದು ಆಶ್ಚರ್ಯವೇ ಸರಿ. ದೇಶದ ಜನತೆಯ ನಾಡಿಮಿಡಿತ ಅರಿಯುವಲ್ಲಿ ಅದು ಎಡವುತ್ತಿರುವುದರ ಸಂಕೇತ ಇದು. ಕಂಟಕವಾಗಿ ಕಾಡಿದ ಕಾಶ್ಮೀರದ ವಿಶೇಷ ಸ್ಥಾನಮಾನ ತೊಲಗಿತೆಂದು ದೇಶಕ್ಕೆ ದೇಶವೇ ಸಂತಸಪಡುತ್ತಿದ್ದರೆ ದೇಶದ ಏಕತೆಗೆ ಪೂರಕವಾಗಬಹುದಾದ ಕ್ರಮದ ಕುರಿತು ಕಾಂಗ್ರೆಸ್ಸಿಗರಿಗೇಕೆ ಉಭಯಸಂಕಟ?

– ಬೈಂದೂರು ಚಂದ್ರಶೇಖರ ನಾವಡ

Advertisement

Udayavani is now on Telegram. Click here to join our channel and stay updated with the latest news.

Next