ಕಾಶ್ಮೀರದ ಪ್ರೇಕ್ಷಣೀಯ ತಾಣಗಳು:ಕಾಶ್ಮೀರಕ್ಕೆ ಹೇೂಗಿ ಕಾಶ್ಮೀರ ಎಲ್ಲಿದೆ ಎಂದು ಹುಡುಕ ಬೇಡಿ.ಕನಾ೯ಟಕದ ನೆಲದಲ್ಲಿ ನಿಂತು ಕನಾ೯ಟಕ ಹುಡುಕಿದ ಅನುಭವವಾಗಬಹುದು. ಕಾಶ್ಮೀರವೆಂದರೆ ಹತ್ತು ಜಿಲ್ಲೆಗಳಿಂದ ಒಂದು ಗೂಡುವ ಎಲ್ಲಾ ಪ್ರಕೃತಿ ರಮಣೀಯವಾದ ತಾಣಗಳ ಸೌಂದರ್ಯತೆಯೇ ಕಾಶ್ಮೀರದ ಸೊಬಗಿನ ವ್ಯಕ್ತಿತ್ವ.
ಬಹು ಮುಖ್ಯವಾಗಿ ಕಾಶ್ಮೀರದಲ್ಲಿ ಪ್ರವಾಸಿಗರ ತನು ಮನ ತಣಿಸುವ ತಾಣಗಳೆಂದರೆ ಗುಲ್ ಮಾರ್ಗ್;ಸೇೂನ್ ಮಾರ್ಗ್;ಪೌಲ್ ಗಮ್; ದೂದ …ಸರೇೂವರಗಳು;ಮೊಘಲ್ ಗಾಡ೯ನ್;ಆದಿ ಶಂಕರಾಚಾರ್ಯ ಪೀಠ ಮುಂತಾದ ಅನೇಕ ಪ್ರವಾಸಿ ಮತ್ತು ಯಾತ್ರಾಥಿ೯ ಸ್ಥಳಗಳು ಪ್ರವಾಸಿಗರನ್ನು ಕೈ ಬೀಸಿ ಕರೆಯುವಂತಿದೆ.
ಗುಲ್ ಮಾರ್ಗ್:ಕಾಶ್ಮೀರಕ್ಕೆ ಹೇೂದವರು ಗುಲ್ ಮಾರ್ಗ್ ನೇೂಡಲೇ ಬೇಕಾದ ತಾಣ. ಶ್ರೀನಗರದಿಂದ 30 ಕಿ.ಮೀ ದೂರದಲ್ಲಿದೆ ಈ ಗುಲ್ ಮಾರ್ಗ್.”ಗುಲ್”ಅಂದರೆ ಹೂಗಳು ಅನ್ನುವ ಅರ್ಥ;ಮಾರ್ಗ್ ಅಂದರೆ Medow( ಬಯಲು ಅನ್ನುವುದರ ಸಂಕೇತ. ಇದು ಬೇಸಿಗೆಯಲ್ಲಿ ಹಚ್ಚ ಹಸಿರಿನಿಂದ ಕಂಗೊಳಿಸುವ ಪವ೯ತ ಶ್ರೇಣಿಯಾದರೆ ಡಿಸೆಂಬರ್ ಫೆಬ್ರವರಿ ಮಾಸದ ಚಳಿಗಾಲದ ಹಿಮದ ಗಡ್ಡೆಯಲ್ಲಿ ಕಂಗೊಳಿಸುವ ರಜತಾದ್ರಿ ಬೆಟ್ಟ.ದಾರಿ ಪೂರ್ತಿ ಹಿಮದಿಂದ ಮುಚ್ಚಿ ಕೊಂಡಿದ್ದು ಅದರಲ್ಲಿಯೇ ದಾರಿ ಮಾಡಿ ನಡೆಯ ಬೇಕು..ಅಥವಾ ಕುದುರೆ ಹಾಗೂ ಸಣ್ಣಪುಟ್ಟ ಸ್ನೇೂ ಸ್ಕೂ ಬೈಕ್ ವಾಹನಗಳ ವ್ಯವಸ್ಥೆಯೂ ಇದೆ.ಗುಲ್ ಮಾರ್ಗ್ ದಲ್ಲಿ ಬಹು ಮುಖ್ಯವಾಗಿ ನೇೂಡ ಬೇಕಾದದ್ದು ಹಿಮದ ಪರ್ವತಾಲಯ. ಹಿಮದ ಸಿಂಚನ ಅನುಭವವೇ ಒಂದು ವಿಶಿಷ್ಟವಾದ ರೇೂಚಕ ಅನುಭವ.ಇಲ್ಲಿ ಇಂತಹ ಅನುಭವದ ಪರಾಕಾಷ್ಟೆಗಾಗಿಯೇ ಅತಿ ಎತ್ತರದಲ್ಲಿ ಸಂಚರಿಸುವ ಕೇಬಲ್ ಕಾರ್…ಪಯಣದ ವ್ಯವಸ್ಥೆಯೂ ಇದೆ.
ಸೇೂನ್ ಮಾರ್ಗ:ಕಾಶ್ಮೀರಕ್ಕೆ ಹೇೂದವರು ನೇೂಡಲೇ ಬೇಕಾದ ಇನ್ನೊಂದು ಸ್ಥಳವೆಂದರೆ ಸೇೂನ್ ಮಾಗ೯.ಇದು ಶ್ರೀನಗರದಿಂದ ಸುಮಾರು 80ಕಿ.ಮೀ.ದೂರದ ಗಂಧರ್ ಬಾಲ್ ಜಿಲ್ಲೆಯಲ್ಲಿದೆ.ಇದರ ವಿಶೇಷತೆ ಅಂದರೆ ಕಡಿದಾದ ಪರ್ವತ ಶ್ರೇಣಿಯಲ್ಲಿ ಹಬ್ಬಿಕೊಂಡಿರುವ ಮರಗಳ ಸಾಲಿನಲ್ಲಿ ಹಿಮದ ಲೇಪನದಿಂದ ಮರಗಳು ಬೆಳ್ಳಿ ಝರಿ ಸೀರೆಯನ್ನು ತೊಟ್ಟು ನಿಂತಿರುವ ಸೌಂದರ್ಯದ ರೂಪದಶಿ೯. .ಸೇೂನ್ ಮಾರ್ಗದ ಕೊನೆಯಲ್ಲಿ ಸುಮಾರು 6 ಕಿ.ಮಿ ದೂರದಷ್ಟು ಸುರಂಗಮಾರ್ಗದಲ್ಲಿ ಕ್ರಮಿಸುವುದೇ ಒಂದು ರೇೂಚಕ ಅನುಭವ.ಈ ಸುರಂಗಮಾರ್ಗ ಇತ್ತೀಚೆಗಷ್ಟೇ ಲೋಕಾರ್ಪಣೆ ಗೊಂಡಿದ್ದು ಇದನ್ನು “Z.ಮಾಥ೯” ವೆಂದು ಹೆಸರಿಸಲಾಗಿದೆ.ಇಲ್ಲಿಂದ ಮುಂದೆ ಹಿಮ ಬೆಟ್ಟದ ಶ್ರೇಣಿ.ಅಲ್ಲಿ ಪ್ರವಾಸಿಗರ ಮನೇೂರಂಜನ ಆಟಗಳಿಗಾಗಿಯೇ ಸ್ಕೇಟಿಂಗ್; ಜಾರು ಬಂಡಿ ಆಟಗಳಿಗೂ ಅನುಕೂಲ ಮಾಡಿಕೊಡಲಾಗಿದೆ.
ಇಲ್ಲಿಂದ ಕೆಲವೇ ದೂರದಲ್ಲಿ ಕಾಣ ಬಹುದಾದ ಬಹು ಚಿರಪರಿಚಿತ ಪ್ರದೇಶವೆಂದರೆ ಕಾಗಿ೯ಲ್ ಮಿಲಿಟರಿ ನೆಲೆಯ ತಾಣ.ಕಾಗಿ೯ಲ್ ಯುದ್ಧ ಸಂದರ್ಭದಲ್ಲಿ ಇದೇ ಸೇೂನ್ ಮಾಗ೯ವನ್ನು ನಮ್ಮ ಮಿಲಿಟರಿ ಕಾರ್ಯಚರಣೆಗಾಗಿ ಬಳಸಿಕೊಂಡಿದರಂತೆ..ಇದನ್ನು ನೇೂಡುವಾಗಲೇ ನಮ್ಮ ದೇಶ ರಕ್ಷಣೆ ಹೊತ್ತ ಸೈನಿಕರ ಸ್ಥೈರ್ಯ ಧೈರ್ಯ ಬಲಿದಾನವೆಲ್ಲವನ್ನು ನೆನಪಿಸುವ ತಾಣವೂ ಹೌದು.
ಪಾಲ್ ಗಮ್:ಕಾಶ್ಮೀರದ ಅತೀ ದೊಡ್ಡ ಜಿಲ್ಲೆ ಎಂದೇ ಕರೆಸಿಕೊಂಡ ಅನಂತನಾಗ್ ನಿಂದ ಸುಮಾರು 15 ಕಿ.ಮೀ.ದೂರದಲ್ಲಿ ಕಾಣ ಸಿಗುವ ಅತ್ಯಂತ ಸೊಗಸಾದ ಅದರಲ್ಲೂ ಮಕ್ಮಳ ಆಟೇೂಟಗಳಿಗೆ ಹೇಳಿಸಿ ಮಾಡಿಸಿದ ಪ್ರೇಕ್ಷಣೀಯ ತಾಣವೆಂದರೆ ಪಾಲ್ ಗಮ್. ಇದನ್ನೇ ಬೇತಾಬ್ ವ್ಯಾಲ್ಯೂ ಎಂದೇ ಕರೆಯುವುದು ವಾಡಿಕೆ. ಬೇತಾಬ್ ಬಾಲಿವುಡ್ ಸಿನಿಮಾ ಚಿತ್ರೀಕರಣವಾದ ಕಾರಣ ಇದಕ್ಕೆ ಈ ಹೆಸರು ಅಂಟಿಕೊಂಡಿದೆ ಅಂತೆ. ಇಡಿ ಪ್ರದೇಶ ಹಿಮದಿಂದ ಆವರಿಸಿದ್ದರೂ ಕೂಡಾ ಹಿಮ ಕರಗಿ ನದಿ ರೂಪದಲ್ಲಿ ಹರಿಯುತ್ತಿರುವುದನ್ನು ಚಳಿಗಾಲದಲ್ಲಿ ನೇೂಡ ಬಹುದು.ಅದೇ ಬೇಸಿಗೆಯಲ್ಲಿ ಈ ಪ್ರದೇಶದಲ್ಲಿ ನದಿ ತುಂಬಿ ಹರಿಯುತ್ತದೆ ಮಾತ್ರವಲ್ಲ ಮರಗಿಡ ನೆಲ ಎಲ್ಲವೂ ಹಸಿರಿನಿಂದ ಕಂಗೊಳಿಸುವ ರಮಣೀಯ ನೇೂಟ ಪ್ರವಾಸಿಗರನ್ನು ಇನ್ನಷ್ಟು ಆಕರ್ಷಿಸುತ್ತದೆ..ಅಂದರೆ ಇಲ್ಲಿಗೆ ವರುಷ ಪೂತಿ೯ ಪ್ರವಾಸಿಗರನ್ನು ಆಮಂತ್ರಿಸುವ ಸೌಂದರ್ಯತೆ ಈ ಪ್ರದೇಶದ ಇನ್ನೊಂದು ವೈಶಿಷ್ಟ್ಯ.
ದೂದ್ ಪತ್ರಿ:ಇದು ಹೆಸರಿಗೆ ಅನ್ವರ್ಥವಾಗಿ ನಿಂತಿರುವ ಪ್ರವಾಸಿ ತಾಣ.ಕಾಶ್ಮೀರದ ಬುದಗಾಮ್ ಜಿಲ್ಲೆಯಲ್ಲಿ ಕಾಣ ಸಿಗುವ ಬಹು ಸುಂದರವಾದ ಹಿಲ್ ಸ್ಟೇಷನ್.ಇದು ವ್ಯಾಲ್ಯೂ ಆಫ್ ಮಿಲ್ಕ್ ಅಂತಲೇ ಪ್ರಸಿದ್ಧವಾದ ಪ್ರವಾಸಿ ತಾಣ. ಶ್ರೀನಗರದಿಂದ 30ಕಿ.ಮೀ ದೂರದಲ್ಲಿದೆ. ಇಲ್ಲಿನ ನದಿ ಶಾಲಿಗಂಗಾ..ಕಡಿದಾದ ಪರ್ವತ ಶ್ರೇಣಿಯಲ್ಲಿ ಹಾಲಿನ ಹೊಳೆ ಹರಿದು ಬರುವ ನೀರಿನ ಝಳ ಝಳ ರೂಪ ನೇೂಡುವುದೇ ಸೊಬಗು. ಚಳಿಗಾಲದಲ್ಲಿ ಹಿಮದಿಂದ ಆವೃತ್ತವಾದ ಸೌಂದರ್ಯವಾದರೆ ಬೇಸಿಗೆ ಅಂದರೆ ಎಪ್ರಿಲ್ ನಿಂದ ಸೆಪ್ಟೆಂಬರ್ ತನಕ ಹಸಿರಿನ ಸಿರಿ ಹಾಸಿದ ಮಡಿಲಿನ ಮಧ್ಯೆ ಹಾಲಿನ ಹೊಳೆ.
ಕಾಶ್ಮೀರದ ಇನ್ನೊಂದು ವಿಶಿಷ್ಟತೆಯಂದರೆ ಸಾರ್ವಕಾಲಿಕವಾಗಿ ಪ್ರವಾಸಿಗರ ತನು ಮನ ತಣಿಸುವ ಸೌಂದರ್ಯದ ತಾಣವೂ ಹೌದು. ಕಾಶ್ಮೀರದ ಕೇಂದ್ರ ಸ್ಥಳ ಅನ್ನಿಸಿಕೊಂಡ ಶ್ರೀನಗರದ ಸುತ್ತ ಮುತ್ತ ಅಷ್ಟೇನೂ ಸ್ನೊ ಫಾಲ್ ಇಲ್ಲ..ಇಲ್ಲಿ ಕಾಣ ಬಹುದಾದ ಬಹು ಆಕಷಿ೯ತ ಸ್ಥಳಗಳು ಮಾತ್ರವಲ್ಲ ಅಲ್ಲಿನ ಜನ ಸಾಮಾನ್ಯ ಬದುಕಿಗೆ ಇಂಬು ನೀಡುವ ಪ್ರವಾಸಿಗರ ತಾಣವೆಂದರೆ ಅಲ್ಲಿನ ಸರೇೂವರಗಳು.ಕಾಶ್ಮೀರದ ಕೇಂದ್ರದಲ್ಲಿರವ ದಾಲ್ ಲೇಕ್ ಅತ್ಯಂತ ವಿಸ್ತಾರವಾಗಿ ಸುಸಜ್ಜಿತವಾದ ಜನಾಕಷ೯ಣ ಸರೇೂವರವೆಂದೇ ಹೆಸರು ವಾಸಿ ಸರೋವರ .ಸುಮಾರು 12ಕಿ.ಮಿ ಉದ್ಧ ಸರೇೂವರದಲ್ಲಿ ಬೇೂಟ್ ವಿಹಾರ ಮಾಡುವುದು ಜೊತೆಗೆ ಹೌಸ್ ಬೇೂಟಿಂಗ್ ರಾತ್ರಿಯಲ್ಲಿ ಉಳಿದು ಕೊಳ್ಳುವ ಸೌಲಭ್ಯವು ಇದೆ..ಅಲ್ಲಿನ ಚಿಕ್ಕ ಪುಟ್ಟ ವ್ಯಾಪಾರಿಗಳು ತಮ್ಮ ಬದುಕನ್ನು ಇಲ್ಲಿಯೇ ಕಟ್ಟಿ ಕೊಂಡಿರುತ್ತಾರೆ.
ಬಹು ಪ್ರಸಿದ್ಧವಾದ ಮೊಘಲ್ ಗಾರ್ಡನ್ ನೇೂಡ ಬಹುದು. ಶ್ರೀನಗರದಿಂದ ಅಣತಿ ದೂರದಲ್ಲಿದೆ ಆದಿ ಶಂಕರಾಚಾರ್ಯ ಪೀಠ. ಸುಮಾರು ಒಂದು ಸಾವಿರ ಅಡಿ ಎತ್ತರದಲ್ಲಿ ಇರುವ ಬಹು ಪುರಾತನ ಶಂಕರಾಚಾರ್ಯ ಪೀಠ ನೇೂಡ ಬೇಕಾದರೆ ಸುಮಾರು 250 ರಿಂದ 300 ಮೆಟ್ಟಿಲುಗಳನ್ನು ಹತ್ತಿ ಹೇೂಗ ಬೇಕು.ಇದನ್ನು ಗೇೂಪಾದಾರಿ ಬೆಟ್ಟ ಎಂದು ಕರೆಯುತ್ತಾರೆ.ಅದು ಶಿವಾರಾಧನಾ ಪಾವನ ತಾಣವು ಹೌದು.
*ಲೇಖಕರು:ಪ್ರತ್ಯಕ್ಷ ದಶಿ೯ :ಪ್ರೊ.ಕೊಕ್ಕಣೆ೯ ಸುರೇಂದ್ರ ನಾಥ ಶೆಟ್ಟಿ ಉಡುಪಿ.