Advertisement

Jammu-Kashmir Election: ಹಿರಿಯ ನಾಯಕ ಗುಲಾಂ ನಬಿ ಆಜಾದ್‌ ಮತ್ತೆ ಕಾಂಗ್ರೆಸ್‌ ಸೇರ್ಪಡೆ?

10:31 PM Aug 18, 2024 | Team Udayavani |

ಶ್ರೀನಗರ: ಜಮ್ಮು-ಕಾಶ್ಮೀರ ಚುನಾವಣೆ ಸಮೀಪಿಸುತ್ತಿರುವಂತೆಯೇ ಅಲ್ಲಿ ರಾಜಕೀಯ ಚಟುವಟಿಕೆಗಳು ಬಿರುಸಾಗತೊಡಗಿವೆ.

Advertisement

2022ರ ಆಗಸ್ಟ್‌ನಲ್ಲಿ ಕಾಂಗ್ರೆಸ್‌ ತೊರೆದು ಡೆಮಾಕ್ರಾಟಿಕ್‌ ಪ್ರೊಗ್ರೆಸಿವ್‌ ಆಜಾದ್‌ ಪಾರ್ಟಿ(ಡಿಪಿಎಪಿ) ಸ್ಥಾಪಿಸಿದ್ದ ಮಾಜಿ ಸಚಿವ ಗುಲಾಂ ನಬಿ ಆಜಾದ್‌ ಮತ್ತೆ ಕಾಂಗ್ರೆಸ್‌ಗೆ ವಾಪಸಾಗಲು ಮುಂದಾಗಿದ್ದಾರೆ ಎನ್ನಲಾಗಿದೆ.

ಆದರೆ, ಈ ವರದಿಗಳನ್ನು ಆಜಾದ್‌ ಪಕ್ಷದ ನಾಯಕ ಸಲ್ಮಾನ್‌ ನಿಜಾಮಿ ತಿರಸ್ಕರಿಸಿದ್ದಾರೆ. 2 ವರ್ಷಗಳ ಹಿಂದೆ ಕಾಂಗ್ರೆಸ್‌ ತೊರೆದ ಬಳಿಕ ಆ ಪಕ್ಷದ ಯಾವೊಬ್ಬ ನಾಯಕರೂ ಆಜಾದ್‌ ಅವರನ್ನು ಸಂಪರ್ಕಿಸಿಲ್ಲ. ಹೀಗಾಗಿ, ಚುನಾವಣೆ ಸಂದರ್ಭದಲ್ಲಿ ಮತ್ತೆ ಆಜಾದ್‌ ಅವರು ಕಾಂಗ್ರೆಸ್‌ ಸೇರುವ ವರದಿಗಳಲ್ಲಿ ಸತ್ಯಾಂಶವಿಲ್ಲ ಎಂದು ನಿಜಾಮಿ ಹೇಳಿದ್ದಾರೆ. ಈ ನಡುವೆ ಆಜಾದ್‌ ಪಕ್ಷದ ಹಿರಿಯ ನಾಯಕ ತಾಜ್‌ ಮೊಯ್ದೀನ್‌ ಅವರು ಕಾಂಗ್ರೆಸ್‌ ಸೇರಲು ತೀರ್ಮಾನಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next