Advertisement

ಬಂಡಿಪೋರ್‌ನಲ್ಲಿ ಭಾರೀ ಗುಂಡಿನ ಕಾಳಗ: ಲಷ್ಕರ್‌ ಕಮಾಂಡರ್‌ ಫಿನಿಶ್‌

08:52 AM Jan 19, 2017 | |

ಶ್ರೀನಗರ : ಉತ್ತರ ಕಾಶ್ಮೀರದ ಬಂಡಿಪೋರ್‌ನ ಹಾಜಿನ್‌ ಎಂಬಲ್ಲಿ  ಗುರುವಾರ ಬೆಳ್ಳಂಬೆಳಗ್ಗೆ ಭದ್ರತಾ ಪಡೆಗಳು ಮತ್ತು ಉಗ್ರರ ನಡುವೆ ಭಾರೀ ಗುಂಡಿನ ಕಾಳಗ ನಡೆದಿದ್ದು ಓರ್ವ ಲಷ್ಕರ್‌ ಎ ತೋಯ್ಬಾ ಉಗ್ರ ಸಂಘಟನೆಯ ಕಮಾಂಡರ್‌ನನ್ನು ಹತ್ಯೆ ಗೈಯಲಾಗಿದೆ. ಕಾರ್ಯಾಚರಣೆ ವೇಳೆ ಓರ್ವ ಪೊಲೀಸ್‌ ಸಿಬಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. 

Advertisement

ನಸುಕಿನ ವೇಳೆ ಪೊಲೀಸರು ಮತ್ತು ಸೇನಾ ಪಡೆಗಳು ಜಂಟಿ ಕಾರ್ಯಾಚರಣೆಗಿಳಿದು ಲಷ್ಕರ್‌ ಕಮಾಂಡರ್‌ ಆಗಿದ್ದ ಅಬು ಮುಸೈಬ್‌ನನ್ನು ಹತ್ಯೆಗೈದಿವೆ. 

ಸ್ಥಳೀಯವಾಗಿ ಯುವಕರನ್ನು ಉಗ್ರ ಚಟುವಟಿಕೆಗಳತ್ತ ಆಕರ್ಷಿಸುವಲ್ಲಿ ಮುಸೈಬ್‌ ಕೆಲಸ ಮಾಡುತ್ತಿದ್ದು ಆತನ ಹತ್ಯೆಯಿಂದ ಸೇನಾ ಪಡೆಗೆ ದೊಡ್ಡ ಯಶಸ್ಸು ಸಿಕ್ಕಂತಾಗಿದೆ. ಸ್ಥಳದಲ್ಲಿ ಇನ್ನೂ ಉಗ್ರರು ಇರುವ ಸಾಧ್ಯತೆಗಳಿದ್ದು ಶೋಧ ಮುಂದುವರಿದಿದೆ. 

Advertisement

Udayavani is now on Telegram. Click here to join our channel and stay updated with the latest news.

Next