Advertisement

Jammu Kashmir; ಯಾವುದೇ ಕ್ಷಣದಲ್ಲಿ ಚುನಾವಣೆ ನಡೆಸಲು ಸಿದ್ದರಿದ್ದೇವೆ: ಕೇಂದ್ರ ಸರ್ಕಾರ

12:25 PM Aug 31, 2023 | Team Udayavani |

ಹೊಸದಿಲ್ಲಿ: ಹಿಂದಿನ ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ 370 ನೇ ವಿಧಿಯನ್ನು ರದ್ದುಗೊಳಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಮುಂದುವರಿಸಿದೆ. ಸಿಜೆಐ ಚಂದ್ರಚೂಡ್ ಅವರಿರುವ ಐವರು ಸದಸ್ಯರ ಬೆಂಚ್ ಇದರ ವಿಚಾರಣೆ ನಡೆಸುತ್ತಿದ್ದು ಅರ್ಜಿದಾರರ ಪರ ಕಪಿಲ್ ಸಿಬಲ್ ಅವರು ವಾದ ಮಂಡಿಸುತ್ತಿದ್ದಾರೆ. ಸಾಲಿಟರಿ ಜನರಲ್ ತುಷಾರ್ ಮೆಹ್ತಾ ಅವರು ಕೇಂದ್ರ ಸರ್ಕಾರದ ಪರವಾಗಿ ವಾದಿಸುತ್ತಿದ್ದಾರೆ.

Advertisement

ಮಂಗಳವಾರ ವಿಚಾರಣೆ ವೇಳೆ ಹಿಂದಿನ ರಾಜ್ಯವಾದ ಜಮ್ಮು ಮತ್ತು ಕಾಶ್ಮೀರದಲ್ಲಿ ಚುನಾವಣಾ ಪ್ರಜಾಪ್ರಭುತ್ವವನ್ನು ಮರುಸ್ಥಾಪಿಸಲು ಸಮಯದ ಚೌಕಟ್ಟನ್ನು ನಿರ್ದಿಷ್ಟಪಡಿಸಲು ಮೊದಲ ಬಾರಿಗೆ ಕೇಂದ್ರವನ್ನು ಕೇಳಿತ್ತು. ಕಣಿವೆಯಲ್ಲಿರುವ ಪ್ರಸ್ತುತ ವ್ಯವಸ್ಥೆಯು ಅಂತ್ಯಕ್ಕೆ ಬರಬೇಕಾಗಿದೆ ಎಂದು ಹೇಳಿತ್ತು. ಇಂದು ಇದಕ್ಕೆ ಉತ್ತರ ನೀಡಿರುವ ತುಷಾರ್ ಮೆಹ್ತಾ, “ಕೇಂದ್ರವು ಜಮ್ಮು ಮತ್ತು ಕಾಶ್ಮೀರದಲ್ಲಿ ಯಾವುದೇ ಸಮಯದಲ್ಲಿ ಚುನಾವಣೆ ನಡೆಸಲು ಸಿದ್ಧವಾಗಿದೆ” ಎಂದಿದ್ದಾರೆ.

ವೋಟರ್ ಪಟ್ಟಿಯನ್ನು ಸದ್ಯ ನವೀಕರಿಸಲಾಗುತ್ತಿದೆ. ಶೀಘ್ರದಲ್ಲಿ ಅದನ್ನು ಬಿಡುಗಡೆ ಮಾಡಲಾಗುತ್ತದೆ. ಚುನಾವಣಾ ಆಯೋಗವು ಇದರ ಬಗ್ಗೆ ನಿರ್ಧರಿಸುತ್ತದೆ ಎಂದರು.

ಇದನ್ನೂ ಓದಿ:Gangavathi-ಮುಸ್ಟೂರು ಕೆಎಸಾರ್ಟಿಸಿ ಬಸ್ ಗೆ ಕಲ್ಲು: ಪುಡಿ ಪುಡಿಯಾದ ಹಿಂಬದಿ ಗಾಜು

“ಗ್ರಾಮೀಣ ಪ್ರದೇಶಗಳಿಗೆ 2019 ರ ನಂತರ ಮೂರು ಹಂತದ ಪಂಚಾಯತ್ ಚುನಾವಣೆಗಳನ್ನು ಮೊದಲು ನಡೆಸಲಾಗುವುದು” ಎಂದು ಅವರು ಕೇಂದ್ರಾಡಳಿತ ಪ್ರದೇಶದಲ್ಲಿ ಚುನಾವಣಾ ಯೋಜನೆಯ ಬಗ್ಗೆ ಹೇಳಿದರು.

Advertisement

ಜಮ್ಮು ಕಾಶ್ಮೀರದ ಎರಡನೇ ಚುನಾವಣೆಯು ಸ್ಥಳೀಯ ನಾಗರಿಕ ಸಂಸ್ಥೆಗಳ ಚುನಾವಣೆ ಎಂದು ಪೀಠಕ್ಕೆ ತಿಳಿಸಿದರು.

ಜಮ್ಮು ಕಾಶ್ಮೀರದ ಸ್ಥಿತಿಗತಿಯ ಬಗ್ಗೆ ಕೋರ್ಟ್ ಗೆ ತಿಳಿಸಿದ ಮೆಹ್ತಾ, ಕಣಿವೆಯಲ್ಲಿ ಅಭಿವೃದ್ಧಿ ಪ್ರಕ್ರಿಯೆಯು ನಡೆಯುತ್ತಿದೆ ಮತ್ತು ಶೀಘ್ರದಲ್ಲೇ ಮುಗಿಯಲಿದೆ ಎಂದು ಹೈಲೈಟ್ ಮಾಡಿದರು. ಕಾರ್ಗಿಲ್ ಮತ್ತು ಲೇಹ್ ಗಾಗಿ ಅಭಿವೃದ್ಧಿ ನಡೆಯಲಿದೆ” ಎಂದು ಅವರು ಹೇಳಿದರು.

2019 ರ ನಂತರ ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕ ಚಟುವಟಿಕೆಗಳು ಶೇಕಡಾ 45.2 ರಷ್ಟು ಕಡಿಮೆಯಾಗಿದೆ. ಒಳನುಸುಳುವಿಕೆಯು 90.2ರಷ್ಟು ತಗ್ಗಿದೆ ಎಂದರು.

2018 ರಿಂದ ಕಣಿವೆಯಲ್ಲಿ 1767 ಕಲ್ಲು ತೂರಾಟದ ಘಟನೆಗಳು ದಾಖಲಾಗಿವೆ ಎಂದು ಕೇಂದ್ರವು ಪೀಠಕ್ಕೆ ತಿಳಿಸಿದೆ. “2023 ರಲ್ಲಿ ಅದು ಈಗ ಶೂನ್ಯವಾಗಿದೆ. 2018ರಲ್ಲಿ ಸಂಘಟಿತ ಬಂದ್‌ ಗಳು ಶೇ.52 ರಷ್ಟಿದ್ದವು ಮತ್ತು ಇಂದು ಅದು ಶೂನ್ಯವಾಗಿದೆ ಎಂದು ಅವರು ಸುಪ್ರೀಂ ಕೋರ್ಟ್‌ಗೆ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next