Advertisement
ಶನಿವಾರ ಬೆಳಗ್ಗೆ ಸುಮಾರು 11 ಗಂಟೆಗೆ ತಂಡೋಪತಂಡವಾಗಿ ಜಮಾವಣೆಗೊಂಡ ಸಹ ಸ್ರಾರು ಕಾರ್ಯ ಕರ್ತರನ್ನು ತಡೆದ ಜಿಲ್ಲಾಡಳಿತ, ಅವರು ಪಟ್ಟಣದ ಒಳಗೆ ಪ್ರವೇಶಿಸದಂತೆ ತಡೆಯಿತು.
ಶ್ರೀರಂಗಪಟ್ಟಣ ಮೂಡಲ ಬಾಗಿಲು ಆಂಜನೇಯ ಸ್ವಾಮಿ ಮೂಲ ಮಂದಿರದಲ್ಲಿ ಮದ್ರಸ ಇದ್ದು, ಅಲ್ಲಿ ವಿದ್ಯಾರ್ಥಿಗಳಿಗೆ ಇಸ್ಲಾಂ ಧಾರ್ಮಿಕ ಪಾಠ ಬೋಧಿಸಲಾಗುತ್ತಿದೆ. ಹಿಂದೂ ದೇವರ ಹಲವು ಕುರುಹು ನಾಶಪಡಿಸುತ್ತಿದ್ದಾರೆ. ಇದನ್ನು ನಿಲ್ಲಿಸಬೇಕೆಂದು ಪ್ರತಿಭಟನಕಾರರು ಆಗ್ರಹಿಸಿದರು. ಈ ಸಂದರ್ಭ ಹಿಂದೂ ಸಂಘಟನೆಗಳ ಕಾರ್ಯಕರ್ತರು ಪೊಲೀಸರ ಜತೆಗೆ ಮಾತಿನ ಚಕಮಕಿ ನಡೆಸಿದರು. ಹನುಮಾನ್ ಚಾಲೀಸಾ
ಜಿಲ್ಲಾಡಳಿತ ತಡೆಯೊಡ್ಡಿದ ಹಿನ್ನೆಲೆಯಲ್ಲಿ ನಗರದ ಹೊರವಲಯದ ಕಿರಂಗೂರು ವೃತ್ತದ ಬಳಿ ಇರುವ ಬನ್ನಿ ಮಂಟಪದಲ್ಲಿ ಹಿಂದೂ ಕಾರ್ಯಕರ್ತರು ಜಮಾವಣೆಗೊಂಡರು. ಬಳಿಕ ಬನ್ನಿ ಮಂಟಪದ ಆವರಣದಲ್ಲಿ ಹನುಮನನ್ನು ಪ್ರತಿಷ್ಠಾಪಿಸಿ ಹನುಮಾನ್ ಚಾಲೀಸಾ ಹಾಗೂ ರಾಮನಾಮ ಭಜನೆ ಮಾಡಿದರು.
Related Articles
ಈಗಾಗಲೇ ಜಿಲ್ಲಾಡಳಿತ, ತಾಲೂಕು ಆಡಳಿತ ಹಾಗೂ ಪುರಾತತ್ವ ಇಲಾಖೆಗೆ 4-5 ಬಾರಿ ಜಾಮಿಯಾ ಮಸೀದಿಯಿಂದ ಮದ್ರಸ ಖಾಲಿ ಮಾಡಿಸಲು, ವೀಡಿಯೋ ಸರ್ವೇ ನಡೆಸಲು ಹಾಗೂ ಮಸೀದಿ ಒಳಗಿನ ಮೂಲ ಮಂದಿರ ಮೂಡಲ ಬಾಗಿಲು ಆಂಜನೇಯ ಸ್ವಾಮಿ ದೇವಾಲಯದಲ್ಲಿ ಹಿಂದೂಗಳಿಗೆ ಪೂಜೆ ಮಾಡಲು ಅವಕಾಶ ಕಲ್ಪಿಸುವಂತೆ ಮನವಿ ಸಲ್ಲಿಸಿದ್ದರೂ ಪ್ರಯೋಜವಾಗಿಲ್ಲ. ಮುಂದಿನ 25 ದಿನದೊಳಾಗಿ ನಮ್ಮ ಬೇಡಿಕೆ ಈಡೇರಿಸದಿದ್ದರೆ ಹೋರಾಟ ತೀವ್ರ ಗೊಳಿಸಲಾಗುವುದು ಎಂದು ಮುಖಂಡ ಜಿ. ಬಾಲು ಎಚ್ಚರಿಸಿದರು.
Advertisement
ಜಾಮಿಯಾ ಮಸೀದಿ ಪ್ರವೇಶಿಸಿದರೇ?ಕಿರಂಗೂರು ಬನ್ನಿಮಂಟಪದಲ್ಲಿ ಹನುಮಾನ್ ಚಾಲೀಸಾ ಪಠಿಸುತ್ತಿದ್ದ ವೇಳೆ, ನಿಷೇಧಾಜ್ಞೆ ನಡುವೆಯೂ ಪೊಲೀಸರ ಕಣ್ತಪ್ಪಿಸಿ ಮಸೀದಿ ಪ್ರವೇಶಿಸಿದ ಇಬ್ಬರು ಹನುಮಾನ್ ಚಾಲೀಸಾ ಪಠಿಸಿ ದ್ದಾರೆ. ಹಿಂದೂ ಮುಖಂಡರಿಬ್ಬರು ಮಸೀದಿಯಲ್ಲಿ ಹನುಮಾನ್ ಚಾಲೀಸಾ ಪಠಿಸುತ್ತಿದ್ದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು ಅಚ್ಚರಿ ಮೂಡಿಸಿತು. ಎಲ್ಲರೂ ಒಟ್ಟಾಗಿ ಮಾಡಿದರೆ ಮಾತ್ರ ಹೋರಾಟವಲ್ಲ, ಒಬ್ಬನೇ ಒಬ್ಬ ಮಾಡಿದರೂ ಅದು ಹೋರಾಟವೇ ಎಂದು ಅವರು ಹೇಳುತ್ತಿದ್ದಾರೆ.