ನ್ಯೂಯಾರ್ಕ್: ಬಾಹ್ಯಾಕಾಶಕ್ಕೆ ದೂರದರ್ಶಕ ಉಡಾಯಿಸುವ ವಿಜ್ಞಾನಿ ಗಳ ಕನಸು 25 ವರ್ಷಗಳ ಬಳಿಕ ಶನಿವಾರ ನನಸಾಗಿದೆ. ಬ್ರಹ್ಮಾಂಡ ಸೃಷ್ಟಿಯ ಮೂಲ ಹುಡುಕುತ್ತಾ ಹೊರಟಿರುವ ಜೇಮ್ಸ್ ವೆಬ್ ಸ್ಪೇಸ್ ಟೆಲಿಸ್ಕೋಪ್ ಶನಿವಾರ ಫ್ರೆಂಚ್ ಗಯಾನಾದಿಂದ ಯಶಸ್ವಿಯಾಗಿ ನಭಕ್ಕೆ ಚಿಮ್ಮಿದೆ. ದೂರದರ್ಶಕ ಹೊತ್ತ ಅರಿ ಯಾನೆ-5 ರಾಕೆಟ್ ಭೂಮಿಯಿಂದ 15 ಲಕ್ಷ ಕಿ.ಮೀ. ದೂರಕ್ಕೆ ಪ್ರಯಾಣ ಬೆಳೆಸಿದೆ.
ದೂರದರ್ಶಕದ ಕೆಲಸವೇನು? :
ಮಹಾಸ್ಫೋಟ (ಬಿಗ್ ಬ್ಯಾಂಗ್)ದ ಬಳಿಕ ಹೊಮ್ಮಿದ ಮೊದಲ ಬೆಳಕಿನಿಂದ ಹಿಡಿದು ಸೌರ ವ್ಯವಸ್ಥೆಯ ಸೃಷ್ಟಿ, ಭೂಮಿ ಯಂಥ ಗ್ರಹಗಳಲ್ಲಿ ಜೀವಿಗಳ ಸೃಷ್ಟಿ ಹಾಗೂ ಇತರ ಗ್ರಹಗಳು ರೂಪುಗೊಳ್ಳುವ ವರೆಗೆ ಬ್ರಹ್ಮಾಂಡದ ಇತಿಹಾಸದ ಪ್ರತಿಯೊಂದು ಹಂತವನ್ನೂ ಇದು ಅಧ್ಯಯನ ನಡೆಸಲಿದೆ. ಆರಂಭದಲ್ಲಿ ಹುಟ್ಟಿದ ನಕ್ಷತ್ರಪುಂಜಗಳ ಪತ್ತೆ, ನಮ್ಮ ಕ್ಷೀರಪಥ ಸಹಿತ ವಿವಿಧ ತಾರಾ ಪುಂಜಗಳು ಸೃಷ್ಟಿಯಾಗಿದ್ದು ಹೇಗೆ ಎಂಬು ದನ್ನು ಕಂಡುಕೊಳ್ಳಲೂ ನೆರವಾಗಲಿದೆ.
ಅರಿಯಾನೆ-5 ರಾಕೆಟ್‌ನ ಮೊದಲ ಹಂತದ ಬೂಸ್ಟರ್ ಪ್ರತ್ಯೇಕಗೊಳ್ಳುವುದನ್ನು ಜಗತ್ತಿನಾದ್ಯಂತದ ಖಗೋಳ ವಿಜ್ಞಾನಿಗಳು ಉಸಿರು ಬಿಗಿಹಿಡಿದುಕೊಂಡು ವೀಕ್ಷಿಸಿದ್ದಾರೆ.
- 14 ದೇಶಗಳ ವಿಜ್ಞಾನಿಗಳು, ಎಂಜಿನಿಯರ್‌ಗಳಿಂದ ಟೆಲಿಸ್ಕೋಪ್ ಅಭಿವೃದ್ಧಿ
- 1996ರಲ್ಲಿ ನಿರ್ಮಾಣ ಆರಂಭ
- 5 ಮೀಟರ್ ವ್ಯಾಸದ ಸ್ವರ್ಣ ಲೇಪಿತ ದರ್ಪಣ ಇದರಲ್ಲಿದೆ
- 15 ಲಕ್ಷ ಕಿ.ಮೀ. ದೂರದಲ್ಲಿ ಸೂರ್ಯನ ಕಕ್ಷೆಯಲ್ಲಿ ಸುತ್ತಲಿದೆ
- ಏಕಕಾಲಕ್ಕೆ 100 ವಸ್ತುಗಳನ್ನು ಅವ ಲೋಕಿಸುವ ಪರಿಕರಗಳು ಇದರಲ್ಲಿವೆ
- ಟೆನ್ನಿಸ್ ಕೋರ್ಟ್ ಗಾತ್ರದ 5 ಪದರಗಳುಳ್ಳ ಸೌರ ರಕ್ಷಾಕವಚವಿದೆ