Advertisement

ಮೆಕ್‌ಗ್ರಾಥ್‌ ಸಾಧನೆ ಹಿಂದಿಕ್ಕಿದ ಆ್ಯಂಡರ್ಸನ್‌

06:20 AM Sep 13, 2018 | Team Udayavani |

ಲಂಡನ್‌: ಪ್ರವಾಸಿ ಭಾರತ ತಂಡದೆದುರಿನ ಐದನೇ ಟೆಸ್ಟ್‌ನಲ್ಲಿ ಮೊಹಮ್ಮದ್‌ ಶಮಿ ಅವರ ವಿಕೆಟನ್ನು ಹಾರಿಸುವ ಮೂಲಕ ಇಂಗ್ಲೆಂಡಿನ ಜೇಮ್ಸ್‌ ಆ್ಯಂಡರ್ಸನ್‌ ಅವರು ಟೆಸ್ಟ್‌ ಇತಿಹಾಸದ ಶ್ರೇಷ್ಠ ವೇಗದ ಬೌಲರ್‌ ಎಂದೆನಿಸಿಕೊಂಡಿದ್ದಾರೆ.

Advertisement

143 ಪಂದ್ಯಗಳನ್ನಾಡಿದ 36ರ ಹರೆಯದ ಆ್ಯಂಡರ್ಸನ್‌ ಒಟ್ಟು 564 ವಿಕೆಟ್‌ ಕಿತ್ತು ಆಸ್ಟ್ರೇಲಿಯದ ಶ್ರೇಷ್ಠ ವೇಗಿ ಗ್ಲೆನ್‌ ಮೆಕ್‌ಗ್ರಾಥ್‌ ಅವರ ಸಾಧನೆಯನ್ನು ಹಿಂದಿಕ್ಕಿದರು. ಸೋಮವಾರ ಒಂದೇ ಓವರಿನಲ್ಲಿ ಧವನ್‌ ಮತ್ತು ಪೂಜಾರ ಅವರ ವಿಕೆಟನ್ನು ಹಾರಿಸುವ ಮೂಲಕ ಆRಂಡರ್ಸನ್‌ ಅವರು ಮೆಕ್‌ಗ್ರಾಥ್‌ ಸಾಧನೆಯನ್ನು ಸಮಗಟ್ಟಿದ್ದರು. ಅವರು ಈ ಪಂದ್ಯದಲ್ಲಿಯೇ ಮೆಕ್‌ಗ್ರಾಥ್‌ ಅವರ ಸಾಧನೆಯನ್ನು ಹಿಂದಿಕ್ಕಬಹುದೇ ಎಂಬ ಸಂಶಯ ಎಲ್ಲರಲ್ಲಿತ್ತು. ಆದರೆ ಅಂತಿಮ ದಿನ ನಿರಂತರ ದಾಳಿ ಸಂಘಟಿಸಿ ಶಮಿ ಅವರ ವಿಕೆಟನ್ನು ಪಡೆದು ಸಂಭ್ರಮಿಸಿದರು.

ಶಮಿ ವಿಕೆಟ್‌ ಪಡೆದ ಆ್ಯಂಡರ್ಸನ್‌ ಇದೀಗ ಟೆಸ್ಟ್‌ ಕ್ರಿಕೆಟ್‌ನ ಶ್ರೇಷ್ಠ ವೇಗದ ಬೌಲರ್‌ ಆಗಿದ್ದಾರೆ. ಯಾಕೆಂದರೆ ಅವರಿಗಿಂತ ಹೆಚ್ಚಿನ ವಿಕೆಟ್‌ ಕಿತ್ತ ಮೂವರೂ ಸ್ಪಿನ್ನರ್‌ಗಳಾಗಿದ್ದಾರೆ. ಅವರಲ್ಲಿ 800 ವಿಕೆಟ್‌ ಕಿತ್ತ ಮುತ್ತಯ್ಯ ಮುರಳೀಧರನ್‌ ಅಗ್ರಸ್ಥಾನದಲ್ಲಿದ್ದರೆ ಶೇನ್‌ ವಾರ್ನ್ (708) ಮತ್ತು ಅನಿಲ್‌ ಕುಂಬ್ಳೆ (619) ಅನಂತರದ ಸ್ಥಾನಗಳಲ್ಲಿ ಇದ್ದಾರೆ.

ಗರಿಷ್ಠ ವಿಕೆಟ್‌ ಕಿತ್ತ ವೇಗಿಗಳು
ಗರಿಷ್ಠ ವಿಕೆಟ್‌ ಕಿತ್ತ ಮೊದಲ ಆರು ವೇಗದ ಬೌಲರ್‌ಗಳ ಪಟ್ಟಿ ಹೀಗಿದೆ. 1. ಜೇಮ್ಸ್‌ ಆ್ಯಂಡರ್ಸನ್‌ (564), 2. ಗ್ಲೆನ್‌ ಮೆಕ್‌ಗ್ರಾಥ್‌ (563), 3. ಕೋಟ್ನಿ ವಾಲ್ಶ್ (519), 4. ಕಪಿಲ್‌ ದೇವ್‌ (434), 5. ಸ್ಟುವರ್ಟ್‌ ಬ್ರಾಡ್‌ (433), 6. ರಿಚರ್ಡ್‌ ಹ್ಯಾಡ್ಲಿ (431).

Advertisement

Udayavani is now on Telegram. Click here to join our channel and stay updated with the latest news.

Next