Advertisement

ಜಾಂಬೂರಿಯಲ್ಲಿ ಮೋಡಿ ಮಾಡಿದ “ಸಾಹಸ’! ಆಟೋಟವೇ ಇಲಿ ಬಹು ಸಂಭ್ರಮ

01:16 PM Dec 26, 2022 | Team Udayavani |

ಮೂಡುಬಿದಿರೆ: ಪ್ರಶಿ ಕ್ಷಣಾರ್ಥಿಗಳಲ್ಲಿ ಪರಿಸರ ಪ್ರೀತಿ ಮೂಡಿಸುವ ನಿಟ್ಟಿನಲ್ಲಿ ಆಯೋಜಿಸಲಾದ ಸಾಹಸಮಯ ಆಟೋಟಗಳು ವಿಶ್ವ ಜಾಂಬೂರಿಯ ರವಿವಾರದ ದಿನ ಬಹು ಆಕರ್ಷಣೆಗೆ ಕಾರಣವಾಯಿತು. ಬಹುಸಂಖ್ಯೆಯಲ್ಲಿ ವಿದ್ಯಾರ್ಥಿ ಗಳು ಆಟೋಟದಲ್ಲಿ ಪಾಲ್ಗೊಂಡರು.

Advertisement

ವಿವೇಕಾನಂದ ನಗರದ ಆಳ್ವಾಸ್‌ ಪ್ರಾಥಮಿಕ ಶಾಲೆಯ ಹಿಂಭಾಗದ ಗುಡ್ಡ ಪ್ರದೇಶದಲ್ಲಿ ರೂಪಿಸಲಾದ ಚ್ಯಾಲೆಂಜ್‌ ವ್ಯಾಲಿಯಲ್ಲಿ ಸುಮಾರು 100 ಬಗೆಯ ಸಾಹಸಮಯ ಆಟಗಳಲ್ಲಿ ತೊಡಗಿ ವಿದ್ಯಾರ್ಥಿಗಳು ಸಂಭ್ರಮಿಸಿದರು.

ಡೆರಿಕ್‌ ಬ್ರಿಡ್ಜ್, ನೀರಿನ ಹೊಂಡಕ್ಕೆ ಜಿಗಿಯುವ ಸಾಹಸ, ಹ್ಯಾಂಗಿಂಗ್‌ ಬ್ರಿಡ್ಜ್, ಹಗ್ಗದ ಮಗ್ಗವನ್ನೇರಬೇಕಾದ ರಶಿಯನ್‌ ವಾಲ್‌ ರೋಪ್‌ ಕ್ಲೈಂಬಿಂಗ್‌ ನಂತಹ ಸಾಹಸ ಕ್ರೀಡೆಯಲ್ಲಿ ಮಕ್ಕಳು ಭಾಗವಹಿಸಿದರು. ಬ್ಯಾಲೆನ್ಸಿಂಗ್‌ ಬೀಂ ವಾಕ್‌, ಪ್ಲಾಂಕ್‌ ಕ್ಲೈಂಬಿಂಗ್‌, ಮಂಕಿ ಬ್ರಿಜ್‌, ಅಗಲವಾದ ಏಣಿ ಹತ್ತುವ ವೈಡ್‌ ಲಾಡರ್‌ ಕ್ಲೈಂಬಿಂಗ್‌, ಟಯರ್‌ ಬ್ಯಾಲೆನ್ಸ್‌ ವಾಕ್‌ ರೋಚಕವಾಗಿತ್ತು.

ಇದರ ಜತೆಗೆ, ಮಂಕಿ ಕ್ರಾಲಿಂಗ್‌, ಲ್ಯಾಡರ್‌ ಕ್ರಾಸಿಂಗ್‌ ಮೊದಲಾದ ಸಾಹ ಸಮಯ ಆಟಗಳಲ್ಲಿ ವಿದ್ಯಾರ್ಥಿಗಳು ತೊಡಗಿಸಿಕೊಂಡರು.

ಪ್ರತಿ ಚಟುವಟಿಕೆ ನಡೆಸಿದ ಬಳಿಕ ನಿರ್ವಹಣೆ ಅಧಿಕಾರಿಗಳು ವಿದ್ಯಾರ್ಥಿ ಗಳಲ್ಲಿದ್ದ ದಾಖಲೆ ಪುಸ್ತಕಗಳಿಗೆ ಮೊಹರು ಒತ್ತಿ ಕಳುಹಿಸಿದರು.

Advertisement

ರವಿವಾರ ರಜಾದಿನವಾದ ಕಾರಣ ದಿಂದ ಬಹುಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಸಾಹಸ ಕ್ರೀಡೆಯಲ್ಲಿಯೇ ಭಾಗವಹಿಸಿದರು. ಹೀಗಾಗಿ ಮೈದಾನ ಪೂರ್ಣ ಮಕ್ಕಳದ್ದೇ ಕಲರವ. ವಿವಿಧ ನಮೂನೆಯ ಆಟೋಟ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ಸಂಭ್ರಮಿಸಿದರು.

ಮಾಸ್‌ಧಾರಿಗಳು! ದೇಶದಲ್ಲಿ ಕೊರೊನಾ ಪ್ರಕರಣ ಏರಿಕೆ ಕಾಣುತ್ತಿರುವ ಆತಂಕ ಹಿನ್ನೆಲೆಯಲ್ಲಿ ಮಾಸ್ಕ್ಧಾರಣೆಗೆ ಸರಕಾರ ಸೂಚಿಸಿದೆ. ಹೀಗಾಗಿ ಆಳ್ವಾಸ್‌ನಲ್ಲಿ ನಡೆಯುತ್ತಿರುವ ಜಾಂಬೂರಿಯಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳ ಪೈಕಿ ಹಲವರು ಮಾಸ್ಕ್ ಹಾಕಿಯೇ ಕಾರ್ಯಕ್ರಮ ದಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು. ಆಟೋಟದಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳ ಪೈಕಿ ಹಲವರು ಮಾಸ್ಕ್ ನಲ್ಲಿಯೇ ಕಂಡುಬಂದರು. ಒಂದೆಡೆ ಕೊರೊನಾ ಆತಂಕ ವಾದರೆ-ಮತ್ತೂಂದೆಡೆ ಧೂಳು!

Advertisement

Udayavani is now on Telegram. Click here to join our channel and stay updated with the latest news.

Next