Advertisement

ಜಮಖಂಡಿ ಪ್ರತ್ಯೇಕ ಜಿಲ್ಲೆಗೆ ಆಗ್ರಹಿಸಿ ನಾಳೆ ಬಂದ್

09:56 AM Oct 03, 2019 | Mithun PG |

ಬಾಗಲಕೋಟೆ: ಜಮಖಂಡಿ ಪ್ರತ್ಯೇಕ ಜಿಲ್ಲೆಗೆ ಆಗ್ರಹಿಸಿ ನಾಳೆ ನಗರ ಬಂದ್ ನಡೆಸಲಾಗುವುದು ಎಂದು ಓಲೆಮಠದ ಚೆನ್ನಬಸವ ಸ್ವಾಮೀಜಿ ತಿಳಿಸಿದ್ದಾರೆ.

Advertisement

1966ರಿಂದಲೂ ಪ್ರತ್ಯೇಕ ಜಿಲ್ಲೆಗಾಗಿ ಬೇಡಿಕೆ ಇಡಲಾಗುತ್ತಿದೆ. 1997 ರಿಂದ ಹೋರಾಟ ತೀವ್ರಗೊಳಿಸಲಾಗಿತ್ತು. ಆದರೇ ಸರ್ಕಾರ ಪ್ರತ್ಯೇಕ ಜಿಲ್ಲೆ ಮಾಡುವ ಕಡೆ ಗಮನ ಹರಿಸಿಲ್ಲ. ಜಿಲ್ಲೆಗೆ ಬೇಕಾಗಿರುವ ಮೂಲಭೂತ ಸೌಲಭ್ಯ ಜಮಖಂಡಿಯಲ್ಲೇ ಇದೆ.

ನಾಳೆ ಅಂಗಡಿ ಮುಂಗಟ್ಟು ಗಳನ್ನು ಮುಚ್ಚಿ ಸಂಪೂರ್ಣ ಬಂದ್ ನಡೆಸಲಾಗುವುದು. ಬಸ್ ಸಂಚಾರ, ವ್ಯಾಪಾರ ವಹಿವಾಟು ಸ್ಥಗಿತಗೊಳ್ಳುವುದು. ಜಮಖಂಡಿ ಜಿಲ್ಲೆಗೆ ಆಗ್ರಹಿಸಿ ಪಕ್ಷಾತೀತವಾಗಿ ಹೋರಾಟ ನಡೆಸಲಾಗುವುದು.  ರಾಜಕೀಯ ಕ್ಷೇತ್ರದ ಗಣ್ಯರು, ಸ್ವಾಮೀಜಿಗಳು, ಜಿಲ್ಲಾ ಹೋರಾಟ ಸಮೀತಿ ಮುಂತಾದವರು ಪ್ರತಿಭಟನೆಯಲ್ಲಿ ಭಾಗಿಯಾಗಲಿದ್ದಾರೆ. ಈ ವೇಳೆ ಸಿ.ಎಂ ಗೆ ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.