Advertisement

Jamakhandi; ಹೆತ್ತವರ ಋಣ ತೀರಿಸಲು ಯಾರಿಂದಲೂ ಸಾಧ್ಯವಿಲ್ಲ: ಕಡ್ಡಿ

01:23 PM Oct 23, 2023 | Team Udayavani |

ಜಮಖಂಡಿ: ಜೀವನದಲ್ಲಿ ಹೆತ್ತವರ ಋಣ ಯಾರಿಂದಲೂ ತೀರಿಸಲು ಸಾಧ್ಯವಿಲ್ಲ, ಆದರೇ ಅವರ ನೆನಪುಗಳು ಅವರು ತೋರಿದ
ಮಾರ್ಗದರ್ಶನದಲ್ಲಿ ನಾವುಗಳು ಕಾಯಕ ಜೀವನ ಸಾಗಿದರೇ ಸ್ವಲ್ಪಮಟ್ಟಿಗೆ ಋಣ ಕಡಿಮೆ ಮಾಡಿಕೊಳ್ಳಲು ಸಾಧ್ಯವಿದೆ ಎಂದು ಸಾಹಿತಿ, ಚಿಂತಕ ಬಸವರಾಜ ಕಡ್ಡಿ ಹೇಳಿದರು.

Advertisement

ನಗರದ ರಮಾನಿವಾಸ ಸಭಾಭವನದಲ್ಲಿ ರವಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಂದೆ-ತಾಯಿ ಪುಣ್ಯಸ್ಮರಣೆಗಾಗಿ ಕಳೆದ 50 ವರ್ಷಗಳಿಂದ ದತ್ತಿನಿಧಿ  ಮೂಲಕ ಸಾಮಾಜಿಕ ಸೇವೆ ಹಮ್ಮಿಕೊಂಡು ಗಿರಡ್ಡಿ ಕುಟುಂಬ ಋಣ ಕಡಿಮೆ ಮಾಡುವ ಕಾಯಕದಲ್ಲಿ ತೊಡಗಿಕೊಂಡಿದೆ. ಅಕ್ಟೋಬರ್‌ 24ರಂದು ತುಂಗಳ ಗ್ರಾಮದಲ್ಲಿ 50ನೇ ಪುಣ್ಯಾರಾಧನೆ ಮತ್ತು ಜಾನಪದ ವಾದ್ಯಮೇಳ ವೈಭವ ಕಾರ್ಯಕ್ರಮ ಹಮ್ಮಿಕೊಂಡಿದ್ದು ಶ್ಲಾಘನೀಯ ಎಂದರು.

ಕನ್ನಡ ಸಾಹಿತ್ಯ ಪರಿಷತ್‌ ತಾಲೂಕಾಧ್ಯಕ್ಷ ಸಂತೋಷ ತಳಕೇರಿ ಮಾತನಾಡಿ, ತಾಲೂಕಿನ ತುಂಗಳ ಗ್ರಾಮದಲ್ಲಿ ಅಕ್ಟೋಬರ್‌ 24ರಂದು 9ಗಂಟೆಗೆ ಗಿರಡ್ಡಿ ಪರಿವಾರ, ನಮನ ಟ್ರಸ್ಟ್‌ ಬೆಂಗಳೂರ, ಕನ್ನಡ ಸಾಹಿತ್ಯ ಪರಿಷತ್‌ ಜಮಖಂಡಿ, ಇಂಚಗೇರಿ ಆಧ್ಯಾತ್ಮ ಸಂಪ್ರದಾಯ ಸಹಯೋಗದಲ್ಲಿ ಜಾನಪದ ವಾದ್ಯಮೇಳ ವೈಭವ ಕಾರ್ಯಕ್ರಮ ನಡೆಯಲಿದೆ. ಕಲಾವಿದ ಶ್ರೀಶೈಲ ಕುಂಚನೂರ ಸಂಗಡಿಗರಿಂದ ಭಜನೆ, ಕಲಾವಿದ ಮಹಾದೇವ ಕಲ್ಯಾಣಿ ಸಂಗಡಿಗರಿಂದ ಕರಡಿವಾದನ, ಕಲಾವಿದ ಸಚಿನ ಮಾದರ ಅವರಿಂದ ಕಣಿವಾದನ ಮತ್ತು ಬಿ.ಎನ್‌.ಅಸ್ಕಿ ಅವರಿಂದ ತತ್ವಪದಗಳು ಮೂಡಿ ಬರಲಿವೆ ಎಂದರು.

ಅಂದು ಬೆಳಗ್ಗೆ 11ಗಂಟೆಗೆ ಉದ್ಘಾಟನಾ ಸಮಾರಂಭದಲ್ಲಿ ಇಂಚಗೇರಿ ಮಠದ ಸಮರ್ಥ ಸದ್ಗುರು ರೇವಣಸಿದ್ಧೇಶ್ವರ ಮಹಾರಾಜರ
ಮತ್ತು ಹುಲ್ಯಾಳದ ಗುರುದೇವಾಶ್ರಮದ ಹರ್ಷಾನಂದ ಶ್ರೀ ಸಾನಿಧ್ಯ ವಹಿಸುವರು. ಶರಣ ಶ್ರೀ ಶಿವಲಿಂಗಪ್ಪ ಮೈಗೂರ ಅಧ್ಯಕ್ಷತೆ
ವಹಿಸುವರು. ನ್ಯಾಯವಾದಿ ಎನ್‌. ಎಸ್‌.ದೇವರವರ, ಡಾ| ಎಸ್‌.ಎಸ್‌. ಸುವರ್ಣಖಂಡಿ, ಡಾ|ಸಂಗಮೇಶ ಮಟೋಳಿ, ವಚನಸಾಹಿತಿ ಬಸವರಾಜ ಕಡ್ಡಿ, ಮುಕುಂದ ಬೆಳಗಲಿ, ಸಂತೋಷ ತಳಕೇರಿ ಬಿ.ಟಿ.ಮಾಳಿ ಆಗಮಿಸಲಿದ್ದಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ನಿವೃತ್ತ ಪ್ರಾಚಾರ್ಯ ಎಸ್‌.ಎಸ್‌.ಸುವರ್ಣಖಂಡಿ, ಪ್ರಾಚಾರ್ಯ ಡಾ| ಟಿ.ಪಿ.ಗಿರಡ್ಡಿ, ವಿನೋದ ಲೋಣಿ ಸಹಿತ ಹಲವರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next