Advertisement
ದುಂಡಪ್ಪ ಭಿಮಪ್ಪ ಹಲಗಲಿ, ಸಿದ್ದಪ್ಪ ಹಲಗಲಿ, ಪರಸಪ್ಪ ಕಲ್ಲೋಳ್ಳಿ, ಹನುಮಂತ ಕಲ್ಲೋಳ್ಳಿ, ಮಂಜುನಾಥ ಗೋಂಗಾಗೋಳ ಶಿಕ್ಷೆಗೆ ಗುರಿಯಾದ ಅಪರಾಧಿಗಳು.
ಜಿಲ್ಲೆಯ ಜಮಖಂಡಿ ತಾಲೂಕಿನ ಹುಲ್ಯಾಳ ಗ್ರಾಮದಲ್ಲಿ ಈರವ್ವ ಹಲಗಲಿ ಎನ್ನುವ ಯುವತಿಗೆ ಪ್ರೀತಿಸುವಂತೆ ಇದೇ ಗ್ರಾಮದ ಸದಾಶಿವ ಭೀಮಪ್ಪ ಕೆಸರಕೊಪ್ಪ ದುಂಬಾಲು ಬಿದ್ದಿದ್ದನು. ಇದನ್ನು ಸಹಿಸಲಾಗದೇ ಯುವತಿಯ ಸಹೋದರರಾದ ದುಂಡಪ್ಪ ಹಲಗಲಿ, ಸಿದ್ದಪ್ಪ ಹಲಗಲಿ ತಮ್ಮ ಸ್ನೇಹಿತರೊಂದಿಗೆ ಗ್ರಾಮದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ್ದರು. 2017 ಡಿಸೆಂಬರ್ 7 ರಂದು ಈ ದುರ್ಘಟನೆ ನಡೆದಿತ್ತು. ಜಮಖಂಡಿ ಗ್ರಾಮೀಣ ಪೊಲೀಸ ಠಾಣೆಯಲ್ಲಿ ಮೃತನ ಸಂಬಂಧಿ ಕರಿಯಪ್ಪ ಕೆಸರಕೊಪ್ಪ ದೂರು ದಾಖಲಿಸಿದ್ದರು. ಪ್ರಕರಣದ ತನಿಖೆ ಕೈಗೊಂಡ ಸಿಪಿಐ ಅಶೋಕ ಸದಲಗಿ, ಪಿಎಸ್ಐ ಪಿ.ಎಂ.ಪಟಾತಾರ ಅಪರಾಧಿಗಳ ವಿರುದ್ಧ ನ್ಯಾಯಾಲಾಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಪ್ರಕರಣ ವಿಚಾರಣೆ ನಡೆಸಿದ ಜಮಖಂಡಿಯ 1 ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾದೀಶೆ ಎ.ಕೆ.ನವೀನ ಕುಮಾರಿ ತೀರ್ಪು ನೀಡಿದ್ದು, ಪ್ರತಿಯೊಬ್ಬ ಆರೋಪಿಗೆ ಜೀವಾವಧಿ ಶಿಕ್ಷೆ ಹಾಗೂ ತಲಾ 52 ಸಾವಿರ ದಂಡವಿಧಿಸಿದ್ದಾರೆ. ಸದರಿ ಹಣದಲ್ಲಿ 2.5 ಲಕ್ಷ ರೂಪಾಯಿ ಮೃತನ ಪರಿವಾರಕ್ಕೆ ಪರಿಹಾರ ರೂಪದಲ್ಲಿ ನೀಡಬೇಕು ಎಂದು ಆದೇಶಿದ್ದಾರೆ. ಸರ್ಕಾರದ ಪರವಾಗಿ ವಿ.ಜಿ.ಹಬಸೂರ ವಾದ ಮಂಡಿಸಿದ್ದರು.