ಜಮಖಂಡಿ: ನಗರದಲ್ಲಿ ವಿವಿಧ ಸಂಘ-ಸಂಸ್ಥೆಗಳು 72ನೇ ಸ್ವಾತಂತ್ರೋತ್ಸವ ದಿನಾಚರಣೆ ನಿಮಿತ್ತ ಸಂಭ್ರಮದಿಂದ ಧ್ವಜಾರೋಹಣ ನೆರವೇರಿಸಿದರು. ಕುಡಚಿ ರಸ್ತೆಯಲ್ಲಿನ ಮಿನಿ ವಿಧಾನಸೌಧ ಆವರಣದಲ್ಲಿ ಉಪವಿಭಾಗಾಧಿಕಾರಿ ರವೀಂದ್ರ ಕರಲಿಂಗನವರ ಧ್ವಜಾರೋಹಣ ನೆರವೇರಿಸಿದರು. ತಹಶೀಲ್ದಾರ್ ಪ್ರಶಾಂತ ಚನಗೊಂಡ, ಗ್ರೇಡ್-2 ತಹಶೀಲ್ದಾರರಾದ ಎಸ್.ಎಸ್.ನಾಯ್ಕಲಮಠ, ಎ.ಎಸ್. ಗೊಟ್ಯಾಳ, ಶಿರಸ್ತೆದಾರಾದ ಎನ್.ಜಿ.ಬಿರಡಿ, ಡಿ.ಬಿ.ಭೋವಿ ಕಂದಾಯ ನಿರೀಕ್ಷಕ ಬಸವರಾಜ ಸಿಂಧೂರ ಸಹಿತ ಹಲವರು ಇದ್ದರು.
ನ್ಯಾಯಾಲಯ ಆವರಣದಲ್ಲಿ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನ್ಯಾಯಾ ಧೀಶೆ ಎ.ಕೆ.ನವೀನ ಕುಮಾರಿ ಧ್ವಜಾರೋಹಣ ನೆರವೇರಿಸಿದರು. ಇದೇ ಸಂದರ್ಭದಲ್ಲಿ ನ್ಯಾಯಾಧಿಧೀಶರಾದ ಸಿ.ಎಸ್. ಜಿತೇಂದ್ರನಾಥ, ಸರಸ್ವತಿದೇವಿ, ಬಿ.ಆರ್. ಮುತಾಲಿಕದೇಸಾಯಿ, ರವೀಂದ್ರಕುಮಾರ ಕಟ್ಟಿಮನಿ, ವಕೀಲರಾದ ಎಸ್.ಆರ್. ಕಾಡಗಿ, ಎನ್.ಎಸ್.ದೇವರವರ, ಸಿ.ಆರ್.ಸುತಾರ, ಎ.ಪಿ.ಕುಲಕರ್ಣಿ, ಬಿ.ವಿ.ತುಳಸಿಗೇರಿ ಸಹಿತ ಹಲವರು ಇದ್ದರು.
ತಾಲೂಕು ಆರೋಗ್ಯ ಕಚೇರಿಯಲ್ಲಿ ತಾಲೂಕು ವೈದ್ಯಾಧಿ ಕಾರಿ ಡಾ. ಗೈಬುಸಾಬ ಗಲಗಲಿ ಧ್ವಜಾರೋಹಣ ನೆರವೇರಿಸಿದರು. ಎಂ.ಎಚ್.ಕಡ್ಲಿಮಟ್ಟಿ, ಪರಮಗೊಂಡ, ವಸ್ತ್ರದ, ಜಯಶ್ರೀ, ನರಸಿಂಹ ಗಲಗಲಿ, ರವಿ ಪಾಟೀಲ, ನಾಗರಾಜ ಹೊಸಮನಿ, ಹುಣಸಿಗಿಡದ, ಎಲ್.ಎಚ್.ಹರಿಜನ, ಸಲ್ಮಾ ನದಾಫ್ ಸಹಿತ ಹಲವರು ಇದ್ದರು.
ಅರಣ್ಯ ಇಲಾಖೆ ಆವರಣದಲ್ಲಿ ತಾಲೂಕು ಎಸಿಎಫ್ ಅ ಧಿಕಾರಿ ಎಸ್.ಎಸ್. ಮಾದರ ಧ್ವಜಾರೋಹಣ ನೆರವೇರಿಸಿದರು. ಎಸ್.ಡಿ.ಬಬಲಾದಿ, ಎಸ್.ಬಿ. ಗೌಡರ, ಆರ್.ಜಿ.ಮೇತ್ರಿ, ವಿ.ಎಸ್.ಕುಬಕಡ್ಡಿ, ಬಿ.ಎಂ.ಬೆಳಕಿಂಡಿ, ಎಂ.ಬಿ.ಚಂಡಕಿ ಇದ್ದರು. ಪೊಲೀಸ್ ಠಾಣೆ ಆವರಣದಲ್ಲಿ ಡಿವೈಎಸ್‌ಪಿ ರಾಮನಗೌಡ ಹಟ್ಟಿ ಧ್ವಜಾರೋಹಣ ನೆರವೇರಿಸಿದರು. ಸಿಪಿಐ ಅಶೋಕ ಸದಲಗಿ, ಪಿಎಸ್‌ಐ ದಿನೇಶ ಜವಳಕರ, ಎಎಸ್‌ಐ ಎಸ್.ಡಿ.ಸಂಗಾಪುರ ಸಹಿತ ಆರಕ್ಷಕರು ಇದ್ದರು.
ಸಾಮಾಜಿಕ ಅರಣ್ಯ ಇಲಾಖೆ ಆವರಣದಲ್ಲಿ ಸಹಾಯಕ ಸಾಮಾಜಿಕ ಅರಣ್ಯ ಸಂರಕ್ಷಣಾಧಿಕಾರಿ ಎ.ಪಿ.ಚೌಗಲಾ ಧ್ವಜಾರೋಹಣ ನೆರವೇರಿಸಿದರು. ಎಸ್.ಜಿ.ಸಂಗಾಲಕರ, ಎಸ್.ಐ.ನಿಂಬಾಳೆ, ಎಂ.ಎನ್.ಜತರಗರ, ಎಸ್.ಎಸ್. ಪೂಜಾರ, ಎಸ್.ಎ.ಮಡ್ಡಿ, ಕೆ.ಆರ್.ಪಾಟೀಲ ಇದ್ದರು.
ಅರ್ಬನ್ ಬ್ಯಾಂಕ್ ಆವರಣದಲ್ಲಿ ಬ್ಯಾಂಕ್ ಅಧ್ಯಕ್ಷ ಫಕೀರಸಾಬ ಬಾಗವಾನ ಧ್ವಜಾರೋಹಣ ನೆರವೇರಿಸಿದರು. ಎ.ಆರ್. ಶಿಂಧೆ, ಜಿ.ಎಸ್.ನ್ಯಾಮಗೌಡ, ಎ.ಎಂ. ಶಹಾ, ನಂದೆಪ್ಪ ದಡ್ಡಿಮನಿ, ಕಾಡು ಮಾಳಿ, ವಿ.ಐ.ಕಂಬಿ, ರುದ್ರಯ್ಯ ಕರಡಿ, ಮಾಮೂನ ಪಾರತನಳ್ಳಿ, ವೈಶಾಲಿ ಗೊಂದಿ, ಎಂ.ಬಿ. ಕಲ್ಯಾಣಶೆಟ್ಟಿ, ಸಂತೋಶ ಹಲ್ಯಾಳ ಸಹಿತ ಹಲವರು ಇದ್ದರು.
ನಗರಸಭೆಯಲ್ಲಿ ಪೌರಾಯುಕ್ತ ಗೋಪಾ ಕಾಸೆ ಧ್ವಜಾರೋಹಣ ನೆರವೇರಿಸಿದರು. ತಾಪಂ ಕಚೇರಿಯಲ್ಲಿ ಎ.ಜಿ. ಪಾಟೀಲ, ಎಪಿಎಂಸಿ ಕಚೇರಿಯಲ್ಲಿ ಎಂ.ಐ.ಸಾಲಿ, ಕ್ಷೇತ್ರ ಶಿಕ್ಷಣಾಧಿ ಕಾರಿ ಕಚೇರಿಯಲ್ಲಿ ಬಿಇಒ ಪ್ರಮೀಳಾ ದೇಶಪಾಂಡೆ ಸಹಿತ ವಿವಿಧ ತಾಲೂಕು ಮಟ್ಟದ ಕಚೇರಿಗಳಲ್ಲಿ ಹಾಗೂ ಶಾಲಾ-ಕಾಲೇಜುಗಳಲ್ಲಿ, ಸಂಘ-ಸಂಸ್ಥೆಗಳಲ್ಲಿ ಧ್ವಜಾರೋಹಣ ನಡೆಯಿತು.