Advertisement
ಕೋವಿಡ್ ಸೋಂಕು ತಡೆಯುವ ಉದ್ದೇಶದಿಂದ ಇಡೀ ದೇಶವನ್ನು ಕೇಂದ್ರ ಸರ್ಕಾರ ಲಾಕ್‌ಡೌನ್ ಘೋಷಣೆ ಮಾಡಿದ್ದು ಮೇ.3 ರ ತನಕ ಮುಂದುವರಿಯಲಿದೆ. ಇದರ ನಡುವೆ ಸರ್ಕಾರಗಳು ಜನರ ಸಂಕಷ್ಟಗಳಿಗೆ ನೆರವಾಗಲು ಜನಧನ್ ಖಾತೆಗೆ 500 ರೂ. ಹಾಗೂ ಪಿಎಂ ಕಿಸಾನ್ ಸಮ್ಮಾನ್ ಯೋಜನೆಯಡಿ 2000 ರೂ. ಬಿಡುಗಡೆ ಮಾಡಿ ರೈತರ ಹಾಗೂ ಕೃಷಿ ಕೂಲಿಕಾರರ ಕೈ ಹಿಡಿದಿದೆ.
ಕಷ್ಟಕಾಲದಲ್ಲಿ ಮಾನವೀಯತೆ ಮರೆತು ಸಾಲದ ಹಣಕ್ಕೆ ಪಿಂಚಣಿ, ಜನಧನ್ ಖಾತೆಗೆ ಹಾಕಿರುವ ಹಣವನ್ನು ಜಮೆ ಮಾಡಿಕೊಳ್ಳುತ್ತಿದ್ದು, ಸದ್ಯದ ಗ್ರಾಹಕರ ಸ್ಥಿತಿ ದೇವರು ವರ
ಕೊಟ್ಟರೂ ಪೂಜಾರಿ ಕೊಡಲಿಲ್ಲ ಎನ್ನುವಂತಾಗಿದೆ. ಲಾಕ್‌ಡೌನ್‌ನಿಂದ ಬಡ ಹಾಗೂ ಮಧ್ಯಮ ವರ್ಗದ ಜನರ ಜೀವನ ತೀವ್ರ ಸಂಕಷ್ಟದಲ್ಲಿದೆ. ಆದರೆ ಜಿಲ್ಲೆಯ ಕೆಲ ಖಾಸಗಿ
ಹಾಗೂ ಸಾರ್ವಜನಿಕ ಬ್ಯಾಂಕ್‌ಗಳು ಜನರ ನೆರವಿಗೆ ಕೊಟ್ಟ ಹಣವನ್ನು ಸಾಲಕ್ಕೆ ಮುರಿದುಕೊಳ್ಳುವ ಕಾಯಕದಲ್ಲಿ ನಿರತವಾಗಿದ್ದು, ಜನರ ಆಕ್ರೋಶಕ್ಕೆ ತುತ್ತಾಗಿವೆ. ಜಿಲ್ಲೆಯಲ್ಲಿ ಅತಿ ಹಿಂದುಳಿದ ಬಾಗೇಪಲ್ಲಿ, ಗುಡಿಬಂಡೆ, ಚಿಂತಾಮಣಿ ತಾಲೂಕುಗಳಲ್ಲಿ ಇತಂಹ ಆರೋಪಗಳು ಸಾರ್ವಜನಿಕರಿಂದ ವ್ಯಕ್ತವಾಗಿದ್ದು, ಈ ಬಗ್ಗೆ ಸಂಬಂದಪಟ್ಟ ಜಿಲ್ಲಾಡಳಿತದ ಅಧಿಕಾರಿಗಳು ಎಚ್ಚೆತ್ತಿಕೊಂಡು ಬ್ಯಾಂಕ್‌ಗಳಿಗೆ ಸೂಕ್ತ ನಿರ್ದೇಶನ ನೀಡಬೇಕಿದೆ. ಪಿಂಚಣಿ ಹಾಗೂ ಜನಧನ್ ಖಾತೆಗೆ ಜಮೆ ಆಗಿರುವ ಹಣವನ್ನು ಬ್ಯಾಂಕ್‌ಗಳು ಸಾಲಕ್ಕೆ ಜಮೆ ಮಾಡಿಕೊಳ್ಳುವಂತಿಲ್ಲ. ಈ ಬಗ್ಗೆ ಯಾವುದೇ ಬ್ಯಾಂಕ್‌ನಲ್ಲಿ ಆಗಿದ್ದರೂ ನಾಗರಿಕರು ದೂರು
ಕೊಡಬಹುದು. ನರೇಗಾ ಕೂಲಿ ಹಣ ಸಾಲಕ್ಕೆ ಹಿಡಿಯುತ್ತಿದ್ದರ ಬಗ್ಗೆ ದೂರು ಬಂದ ತಕ್ಷಣ ಸ್ಪಂದಿಸಿ ಬ್ಯಾಂಕ್‌ಗಳಿಗೆ ಎಚ್ಚರಿಕೆ ನೀಡಲಾಗಿದೆ. ಬಸವರಾಜ್, ಲೀಡ್ ಬ್ಯಾಂಕ್ ವ್ಯವಸ್ಥಾಪಕರು
Related Articles
Advertisement
ಕಾಗತಿ ನಾಗರಾಜಪ್ಪ