Advertisement

ಹೋರಾಟದ ಎಫೆಕ್ಟ್; ತಮಿಳುನಾಡು ವಿಧಾನಸಭೇಲಿ ಜಲ್ಲಿಕಟ್ಟು ಮಸೂದೆ ಪಾಸ್

05:56 PM Jan 23, 2017 | Team Udayavani |

ಚೆನ್ನೈ: ತಮಿಳುನಾಡಿನ ಜಲ್ಲಿಕಟ್ಟು ಕ್ರೀಡೆಗೆ ಶಾಶ್ವತ ಪರಿಹಾರ ನೀಡಬೇಕೆಂದು ಆಗ್ರಹಿಸಿ ನಡೆಸಿದ ಪ್ರತಿಭಟನೆ ಸೋಮವಾರ ತೀವ್ರ ಹಿಂಸಾರೂಪಕ್ಕೆ ತಿರುಗಿದ ಬೆನ್ನಲ್ಲೇ ತಮಿಳುನಾಡು ವಿಧಾನಸಭೆಯಲ್ಲಿ ಮಂಡಿಸಲ್ಪಟ್ಟ ಜಲ್ಲಿಕಟ್ಟು ಮಸೂದೆ ಅವಿರೋಧವಾಗಿ ಆಂಗೀಕಾರಗೊಂಡಿದೆ.

Advertisement

ಜಲ್ಲಿಕಟ್ಟು ಮಸೂದೆ ಮಂಡಿಸಿದ ಕೆಲವೇ ಕ್ಷಣದಲ್ಲಿ ಅವಿರೋಧವಾಗಿ ಅಂಗೀಕಾರವಾಗಿದೆ. ಮತ್ತೊಂದೆಡೆ ಪ್ರತಿಭಟನಾಕಾರರು, ವಿದ್ಯಾರ್ಥಿಗಳು ಹಿಂಸಾಚಾರಕ್ಕೆ ಇಳಿಯದೆ, ಶಾಂತಿ ಕಾಪಾಡಿಕೊಳ್ಳಬೇಕೆಂದು ಸೂಪರ್ ಸ್ಟಾರ್ ನಟ ರಜನಿಕಾಂತ್, ಕಮಲ್ ಹಾಸನ್ ಸೇರಿದಂತೆ ವಿವಿಧ ಗಣ್ಯರು ಮನವಿ ಮಾಡಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next