ದೋಟಿಹಾಳ: ಸಮೀಪದ ಜಾಲಿಹಾಳ ಅಂಗನವಾಡಿ ಕೇಂದ್ರ ಕಟ್ಟಡ ಶಿಥಿಲಾವಸ್ಥೆ ತಲುಪಿದ್ದು, ಗೋಡೆಗಳಲ್ಲಿ ಬಿರುಕು ಕಾಣಿಸಿಕೊಂಡಿವೆ. ಇದರಿಂದ ಮಕ್ಕಳು ಭಯದ ಭೀತಿಯಲ್ಲಿ ಅಂಗನವಾಡಿಗೆ ತೆರಳುತ್ತಿದ್ದಾರೆ. ಈ ಅಂಗನವಾಡಿ ಕೇಂದ್ರದಲ್ಲಿ 30-35 ಮಕ್ಕಳು ಇದ್ದಾರೆ. ಸುಮಾರು 35 ವರ್ಷದ ಹಳೆ ಕಟ್ಟಡವಾಗಿದು. ಈಗ ಶಿಥಿಲಗೊಂಡಿದೆ. ಚಾವಣಿ ಬೀಳುವ ಸ್ಥಿತಿಯಲ್ಲಿವೆ.
ಮಳೆ ಬಂದರೆ ನೀರು ಕೇಂದ್ರದೊಳಗೆ ಸೋರುತ್ತಿದೆ. ಕಟ್ಟಡದ ಕಳೆಭಾಗದ ಪಾಟಿಕಲ್ಲುಗಳು ಕಿತ್ತು ಮಕ್ಕಳು ಕೂಡಲು ಸ್ಥಳದ ಅಭಾವವಿದೆ. ಇಲಾಖೆಯಿಂದ ಬಂದ ಆಹಾರ ಧ್ಯಾನ್ಯ ಸಂಗ್ರಹಿಸಿಡಲು ಹಾಗೂ ದಾಖಲೆಗಳನ್ನು ಇಡಲು ಕೊಠಡಿಯಲ್ಲಿ ಜಾಗ ಇಲ್ಲವಾಗಿದೆ.
ಅಂಗನವಾಡಿ ಕಾರ್ಯಕರ್ತೆ ಪ್ರೇಮಾ ಬಿಜ್ಜಲ್ ಮಾತನಾಡಿ, ಸದ್ಯ ಶಿಥಿಲಗೊಂಡ ಹಳೇ ಕಟ್ಟಡದಲ್ಲಿ ಕೇಂದ್ರ ನಡೆಯುತ್ತಿದೆ. ಮಳೆ ಬಂದಾಗ ಕಟ್ಟಡದಲ್ಲಿ ನೀರು ಸೋರುತ್ತಿದೆ ಹಾಗೂ ಕಟ್ಟಡದ ಚಾವಣಿ ಶಿಥಿಲಗೊಂಡಿದ್ದರಿಂದ ಕೇಂದ್ರದಲ್ಲಿ ಮಕ್ಕಳ ಮೇಲೆ ಹಲವು ಬಾರಿ ಸಣ್ಣ ಸಣ್ಣ ಅಕ್ಕಿಳಿಕೆಬೀಳುತ್ತಿದರಿಂದ ಮಕ್ಕಳನ್ನು ಕೇಂದ್ರದ ಒಳಗೆ ಕುಳ್ಳಿಸಿ ಕಲಿಸುವುದು ಕಷ್ಟವಾಗಿ. ಇನ್ನು ಕೇಂದ್ರದ ಆಹಾರ ಸಾಮಗ್ರಿ ಇಡಲು ಸ್ಥಳದ ಕೊರತೆ ಇದೆ. ಹೊಸ ಕಟ್ಟಡ ನಿರ್ಮಾಣ ಮಾಡಲು ಅಧಿಕಾರಿಗಳಿಗೆ ಮನವಿ ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.
ಜಾಲಿಹಾಳ ಗ್ರಾಮದ ಅಂಗನವಾಡಿ ಕೇಂದ್ರ ಕಟ್ಟಡ ಶಿಥಿಲಾವಸ್ಥೆ ತಲುಪಿದ್ದು, ಇದರ ಬಗ್ಗೆ ಹಿರಿಯ ಅಧಿ ಕಾರಿಗಳಿಗೆ ಗಮನಕ್ಕೆ ತರಲಾಗಿದೆ, ಗ್ರಾಪಂನಿಂದ ಹೊಸ ಕಟ್ಟಡದ ನಿರ್ಮಾಣದ ಪ್ರಸ್ತಾಪನೆ ಸಲಿಸಿದರೆ ಹಿರಿಯ ಅಧಿಕಾರಿಗಳಿಗೆ ಗಮನಕ್ಕೆ ತಂದು ಜಿಪಂ ಅವರು ಕಳಿಸುಕೊಡುತ್ತೇವೆ. ಮಂಜೂರಿಯಾದ ಮೇಲೆ ಹೊಸ ಕಟ್ಟಡ ನಿರ್ಮಾಣ ಮಾಡಲು ಸಾಧ್ಯ ಎಂದು ಕೇಂದ್ರದ ಮೇಲ್ವಿಚಾರಕಿ ಭುವನೇಶ್ವರಿ ಸಂಕಾನಟ್ಟಿ ಹೇಳಿದರು.