Advertisement

ಜಲೀಲ್‌ ಕರೋಪಾಡಿ ಕೊಲೆ: ಸಿಐಡಿ ತನಿಖೆಗೆ ತಂದೆ ಆಗ್ರಹ

11:10 AM May 10, 2017 | Team Udayavani |

ಮಂಗಳೂರು: ಕರೋಪಾಡಿ ಗ್ರಾಮ ಪಂಚಾಯತ್‌ ಉಪಾಧ್ಯಕ್ಷ ಎ. ಅಬ್ದುಲ್‌ ಜಲೀಲ್‌ ಕರೋಪಾಡಿ ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ದ.ಕ. ಜಿಲ್ಲೆಯ ಪೊಲೀಸರು ನಡೆಸುತ್ತಿರುವ ತನಿಖೆ ತೃಪ್ತಿಕರವಾಗಿಲ್ಲ. ಪ್ರಕರಣದ ತನಿಖೆಯನ್ನು ಸಿಐಡಿ ನಡೆಸಬೇಕು ಎಂದು ಜಲೀಲ್‌ ಅವರ ತಂದೆ ಎ. ಉಸ್ಮಾನ್‌ ಕರೋಪಾಡಿ ಆಗ್ರಹಿಸಿದ್ದಾರೆ. ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪುತ್ರನ ಕೊಲೆಗೆ ಕಾರಣವಾಗಿರುವ ಮೂಲ ವ್ಯಕ್ತಿ ಹಾಗೂ ಸೂತ್ರಧಾರರನ್ನು ಇನ್ನೂ ದಸ್ತಗಿರಿ ಮಾಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. 

Advertisement

ಎಸ್ಪಿ ಸುಳ್ಳು ಮಾಹಿತಿ: ಐಜಿಪಿಯವರು ಇತ್ತೀಚೆಗೆ ಪತ್ರಿಕಾಗೋಷ್ಠಿಯ ಸಂದರ್ಭ ದಿನೇಶ್‌ ಶೆಟ್ಟಿ ಹೆಸರನ್ನು ಹೇಳಿದ್ದರು. ಎಡಿಜಿಪಿ ಆಲೋಕ್‌ ಕುಮಾರ್‌ ಕೂಡ ದಿನೇಶ್‌ ಶೆಟ್ಟಿ ಬಂಧನಕ್ಕೆ ಪೊಲೀಸ್‌ ವರಿಷ್ಠಾಕಾರಿಗೆ ಸೂಚನೆ ನೀಡಿರುವುದಾಗಿ ಹೇಳಿದ್ದಾರೆ. ಆದರೆ ಎಸ್ಪಿಧಿಯವರು ಮಾತ್ರ ಆತ ಕೇರಳದಲ್ಲಿ ತಲೆಮರೆಸಿಕೊಂಡಿದ್ದಾನೆಂದು ಸಚಿವರಿಗೆ ಹೇಳಿಕೆ ನೀಡಿದ್ದಾರೆ. ಆದರೆ ಆತ ಊರಲ್ಲೇ ಇದ್ದುಕೊಂಡು ಧಾರ್ಮಿಕ ಸಮಾಧಿರಂಭಗಳಲ್ಲಿ ಭಾಗವಹಿಸುತ್ತಿದ್ದರೂ ಪೊಲೀ ಸರು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿದರು. ಗೃಹ ಸಚಿವರ ಭೇಟಿಯಿಂದಲೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಉಸ್ಮಾನ್‌ ಕರೋಪಾಡಿ ತಿಳಿಸಿದರು. ಜಲೀಲ್‌ ಹತ್ಯೆಗೆ ದಿನೇಶ್‌ ಪ್ರಮುಖ ಕಾರಣ ಎಂದ‌ ಉಸ್ಮಾನ್‌ ಕರೋಪಾಡಿ, ಆತ ಮತ್ತು ಸಹಚರರ ಬಂಧನವಾಗಬೇಕು ಎಂದು ಆಗ್ರಹಿಸಿದರು.

ಮುಂದಿನ ವಾರ ಸಿಎಂ ಭೇಟಿ: ಮುಂದಿನ ವಾರ ತಾನು ಬೆಂಗಳೂರಿನಲ್ಲಿ ಮುಖ್ಯಮಂತ್ರಿಯನ್ನು ಭೇಟಿಯಾಗಿ ಪ್ರಕರಣದ ಸೂಕ್ತ ತನಿಖೆ ನಡೆಸಿ ತನ್ನ ಪುತ್ರನ ಸಾವಿಗೆ ನ್ಯಾಯ ಒದಗಿಸಲು ಆಗ್ರಹಿಸುವೆ ಎಂದು ಉಸ್ಮಾನ್‌ ಕರೋಪಾಡಿ ತಿಳಿಸಿದರು. ಪಂಚಾಯತ್‌ ಅಧ್ಯಕ್ಷೆ ಬೇಬಿ ಆರ್‌. ಶೆಟ್ಟಿ, ಕೆ.ಪಿ. ಸೀತಾರಾಂ ಭಟ್‌, ವನಜಾ ಶೆಟ್ಟಿ, ಅಲೊನ್ಸ್‌ ಲಿಗೋರಿ ಡಿ’ಸೋಜಾ ಉಪಸ್ಥಿತರಿದ್ದರು.

ನಿರಾಸಕ್ತಿ ಏಕೆ?
ಇತ್ತೀಚೆಗೆ ಐಜಿಪಿಯವರ ಜತೆಗೆ ಪ್ರಕರಣದ ಬಗ್ಗೆ ಮಾತನಾಡಿದಾಗ, ಈ ಕೊಲೆಗೆ ಐದು ಲಕ್ಷ ರೂ. ಸುಪಾರಿ ನೀಡಲಾಗಿತ್ತು. ಅದರಲ್ಲಿ ಕೇವಲ 40,000 ರೂ. ಮಾತ್ರವೇ ನೀಡಲಾಗಿತ್ತು ಎಂಬ ಮಾತನ್ನೂ ಹೇಳಿದ್ದಾರೆ. ಹಾಗಾಧಿದರೆ ಆ 40,000 ರೂ. ನೀಡಿದವರು ಯಾರು ಎಂಬುದೂ ಪೊಲೀಸರಿಗೆ ತಿಳಿದಿರಬೇಕಲ್ಲವೇ? ಹಾಗಿದ್ದರೂ ನೈಜ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಾಕೆ ಆಸಕ್ತಿ ತೋರಿಸುತ್ತಿಲ್ಲ ಎಂದು ಎ. ಉಸ್ಮಾನ್‌ ಕರೋಪಾಡಿ ಪ್ರಶ್ನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next