Advertisement

ಕಾವ್ರಾಡಿ ಗ್ರಾ.ಪಂ: ಜಲಜೀವನ್‌ ಮಿಷನ್‌ ಸಭೆ

04:14 PM May 06, 2020 | sudhir |

ಬಸ್ರೂರು: ಕಾವ್ರಾಡಿ ಗ್ರಾಮ ಪಂಚಾಯತ್‌ ಸಭಾಭವನದಲ್ಲಿ ಜಲಜೀವನ್‌ ಮಿಷನ್‌ ಯೋಜನೆಯಂತೆ ನೀರಿನ ಸ್ಥಿತಿಗತಿ ಬಗ್ಗೆ ಮೌಲ್ಯಮಾಪನ ಮತ್ತು ಕುಡಿಯುವ ನೀರು ಮತ್ತು ನೈರ್ಮಲ್ಯ ಯೋಜನೆಯ ವಿಶೇಷ ಸಭೆಯನ್ನು ಕರೆಯಲಾಗಿದ್ದು ಗ್ರಾ.ಪಂ.ಅಧ್ಯಕ್ಷೆ ಗೌರಿ ಆರ್‌. ಶ್ರೀಯಾನ್‌ ಅಧ್ಯಕ್ಷತೆಯಲ್ಲಿ ನಡೆಯಿತು.

Advertisement

ಗ್ರಾಮವಾರು ಪ್ರತಿ ಮನೆಗಳಿಗೆ ಕುಡಿ ಯುವ ನೀರು, ಪ್ರತಿಯೊಬ್ಬ ವ್ಯಕ್ತಿಗೆ ತಲಾ 55 ಲೀ. ನಂತೆ ನೀರು ನೀಡಬೇಕಾಗಿದ್ದು ಬಾಕಿ ಇರುವ ಎಲ್ಲ ಮನೆಗಳಿಗೆ ಕುಡಿಯುವ ನೀರಿನ ಸೌಲಭ್ಯ ಒದಗಿಸಲು ಮುಂದಿನ ನಾಲ್ಕು ವರ್ಷಗಳ ಯೋಜನೆ ತಯಾರಿಕೆ ಬಗ್ಗೆ ಚರ್ಚಿಸಲಾಯಿತು. ಎಲ್ಲ ವಾರ್ಡುಗಳಲ್ಲಿ ಆದ್ಯತೆಯ ಕಾಮಗಾರಿಯಾದ ಪೈಪ್‌ಲೈನ್‌ ವಿಸ್ತರಣೆ, ಬಾವಿ ಆಳ ಮಾಡುವುದು ಇತ್ಯಾದಿ ಮತ್ತು ಮುಂದಿನ ದಿನಗಳಲ್ಲಿ ನೀರಿನ ಬವಣೆಯಾಗದಂತೆ ವಾರಾಹಿ ನದಿಯಲ್ಲಿ ಜಾಕ್‌ವೆಲ್‌ ಮೂಲಕ ನೀರಿನ ಶುದ್ಧೀಕರಣಗೊಳಿಸಿ ಕುಡಿಯುವ ನೀರಿನ ವ್ಯವಸ್ಥೆ ಬಗ್ಗೆ ಮಾತುಕತೆ ನಡೆಯಿತು.

ನೀರಿನ ಬಳಕೆ ಯೋಜನೆ ತಯಾರಿ ಬಗ್ಗೆ ಸಹಾಯಕ ಎಂಜಿನಿಯರ್‌ ಶರತ್‌ ಮಾರ್ಗದರ್ಶನ ನೀಡಿದರು.
ಗ್ರಾಮ ಪಂಚಾಯತ್‌ನ ಉಪಾಧ್ಯಕ್ಷ ಸಂತೋಷ ಶೆಟ್ಟಿ, ಸದಸ್ಯರು, ನೀರು ನೈರ್ಮಲ್ಯ ಸಮಿತಿಯ ಸದಸ್ಯರು, ಆಶಾ ಕಾರ್ಯಕರ್ತೆಯರು, ಅಂಗನ ವಾಡಿ ಕಾರ್ಯಕರ್ತೆಯರು, ಆರೋಗ್ಯ ಕಾರ್ಯಕರ್ತೆಯರು, ಶಾಲಾ ಮುಖ್ಯೋ ಪಾಧ್ಯಾಯರು, ಅಧ್ಯಾಪಕರು ಭಾಗವಹಿಸಿ ದ್ದರು. ಗ್ರಾ.ಪಂ. ಕಾರ್ಯ ದರ್ಶಿ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು. ಪಂಚಾಯತ್‌ ಅಭಿವೃದ್ಧಿ ಅಧಿಕಾರಿ ಗೀತಾ ಯೋಜನೆಯ ಮಾಹಿತಿ ನೀಡಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next