Advertisement

ವೈದ್ಯರೇ ಇಲ್ಲದ ಜಾಲಹಳ್ಳಿ ಪಶು ಆಸ್ಪತ್ರೆ

06:25 PM Aug 13, 2021 | Team Udayavani |

ದೇವದುರ್ಗ: ಜಾಲಹಳ್ಳಿ ಗ್ರಾಮದ ಪಶು ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ಇರುವ ಹಿನ್ನೆಲೆಯಲ್ಲಿ ಜಾನುವಾರುಗಳ ಆರೋಗ್ಯ ಸಂರಕ್ಷಣೆಗೆ ರೈತರು ಪರಿತಪಿಸುವಂತಾಗಿದೆ. ಜಾಲಹಳ್ಳಿ ಪಶು ಆಸ್ಪತ್ರೆಯಲ್ಲಿ ಹಿರಿಯ ಪಶು ವೈದ್ಯಾಧಿಕಾರಿ, ಜಾನುವಾರು ಅಧಿಕಾರಿ, ಡಿಗ್ರೂಪ್‌ನ ಎರಡು ಹುದ್ದೆ ಸೇರಿ ನಾಲ್ಕು ಹುದ್ದೆಗಳು ಕಾಲಿ ಇದೆ. ಯಾರೂ ಇರದೇ ಇದ್ದುದರಿಂದ ಸುಸಜ್ಜಿತವಾದ ಕಟ್ಟಡ ಭಣ ಭಣ ಎನ್ನುತ್ತಿದೆ. ಖಾಲಿ ಹುದ್ದೆಗಳ ಭರ್ತಿಗೆ ಅನೇಕ ಸಂಘ-ಸಂಸ್ಥೆಗಳು
ಹಲವು ಬಾರಿ ಹೋರಾಟ ಮಾಡಿದರೂ ಪ್ರಯೋಜನ ಇಲ್ಲದಾಗಿದೆ.

Advertisement

ವೈದ್ಯರ ಎರವಲ ಸೇವೆ: ಜಾಲಹಳ್ಳಿ ಪಶು ಆಸ್ಪತ್ರೆಗೆ ಕಾಯಂ ವೈದ್ಯರು ಇಲ್ಲದೇ ಇರುವುದರಿಂದ ವೈದ್ಯರ ಎರವಲ ಸೇವೆ ಪಡೆಯಲಾಗಿದೆ. ಗಲಗ ಆಸ್ಪತ್ರೆಯ ವೈದ್ಯ ರವೀಂದ್ರ ಮೂರು ದಿನ ನೋಡಿಕೊಳ್ಳುತ್ತಿದ್ದಾರೆ. ಇನ್ನು ರಾತ್ರಿ ಜಾನುವಾರುಗಳಿಗೆ ಆರೋಗ್ಯ ಸಮಸ್ಯೆ ಉಂಟಾದಲ್ಲಿ ದೇವರಿಗೆ ಪ್ರೀತಿ ಎಂಬಂತಾಗಿದೆ.

ಜಾಲಹಳ್ಳಿ ಗ್ರಾಮದ ಪಶು ಆಸ್ಪತ್ರೆಯಲ್ಲಿರುವ ಖಾಲಿ ಹುದ್ದೆಗಳ ಭರ್ತಿಗೆ ಸ್ಥಳೀಯ ಶಾಸಕ ಕೆ.ಶಿವನಗೌಡ ನಾಯಕ ಗಮನ ಹರಿಸಬೇಕೆಂದು ರೈತ ಸಂಘಟನೆ ಮುಖಂಡ ಶಬ್ಬೀರ ಜಾಲಹಳ್ಳಿ ಆಗ್ರಹಿಸಿದ್ದಾರೆ.

ಎಷ್ಟಿವೆ ಜಾನುವಾರು
ಜಾಲಹಳ್ಳಿ ಪಶು ಆಸ್ಪತ್ರೆ ವ್ಯಾಪ್ತಿಯಲ್ಲಿ 1.975 ಎಮ್ಮೆ, 17.184 ಮೇಕೆ, 1.129 ಆಡು, 189 ನಾಯಿ, 17.515 ಕೋಳಿ, 740 ಹಂದಿ ಸೇರಿ ಜಾಲಹಳ್ಳಿ ಸುತ್ತಲಿನ 22 ಹಳ್ಳಿಗಳಲ್ಲಿ 7.292 ಜಾನುವಾರುಗಳಿವೆ.

ವೈದ್ಯರ ಕೊರತೆ ಹಿನ್ನೆಲೆಯಲ್ಲಿ ಗಲಗ ಪಶು ಆಸ್ಪತ್ರೆಯಿಂದ ಮೂರು ದಿನ ಜಾಲಹಳ್ಳಿ ಆಸ್ಪತ್ರೆಗೆ ಎರವಲ ಹಾಕಲಾಗಿದೆ. ತಾಲೂಕಿನಾದ್ಯಂತ ಪಶು ಆಸ್ಪತ್ರೆಯಲ್ಲಿ ಹಲವು ಹುದ್ದೆಗಳು ಖಾಲಿ ಇವೆ. ಇದ್ದ ವೈದ್ಯರೇ ಜಾನುವಾರುಗಳ ಆರೋಗ್ಯ ರಕ್ಷಣೆ ಮಾಡುತ್ತಿದ್ದಾರೆ.
*ಡಾ|ಬಿ.ಎಸ್‌.ಮಿರಾಸ್ಥಾರ, ಪ್ರಭಾರ
ಸಹಾಯಕ ನಿರ್ದೇಶಕರು.

Advertisement

ತಾಲೂಕಿನಾದ್ಯಂತ ಪಶು ಆಸ್ಪತ್ರೆಯಲ್ಲಿ ವೈದ್ಯರು ಮತ್ತು ಸಿಬ್ಬಂದಿ ಕೊರತೆ ಹಿನ್ನೆಲೆ ಜಾನುವಾರುಗಳ ಆರೋಗ್ಯ ಸಂರಕ್ಷಣೆ ಸಮಸ್ಯೆ ಎದುರಾಗಿದೆ. ಆಗಾಗ ರೋಗ ಲಕ್ಷಣಗಳು ಕಂಡು ಬರುತ್ತಿರುವ ಹಿನ್ನೆಲೆ ರೈತರು ಆತಂಕ ಪಡುವಂತಾಗಿದೆ.
*ನರಸಣ್ಣ ನಾಯಕ,ಕರ್ನಾಟಕ ಪ್ರಾಂತ
ಸಂಘ ತಾಲೂಕಾಧ್ಯಕ್ಷ

*ನಾಗರಾಜ ತೇಲ್ಕರ್‌

Advertisement

Udayavani is now on Telegram. Click here to join our channel and stay updated with the latest news.

Next