Advertisement

Jal Jeevan Mission Scheme; 1,225 ಕೋಟಿ ರೂ.ಬಳಕೆ ಮಾಡದ ಕರ್ನಾಟಕ

09:10 PM Aug 07, 2023 | Team Udayavani |

ನವದೆಹಲಿ: ದೇಶಾದ್ಯಂತ ಪ್ರತಿ ಮನೆಗೂ ಕುಡಿಯುವ ನೀರು ಸಂಪರ್ಕ ನೀಡಬೇಕು ಎಂಬ ಉದ್ದೇಶದಿಂದ ಆರಂಭಿಸಲಾಗಿದ್ದ ಜಲಜೀವನ್‌ ಮಿಷನ್‌ನ 16,484 ಕೋಟಿ ರೂ. ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಬಳಕೆಯಾಗದೇ ಹಾಗೆಯೇ ಉಳಿದಿದೆ ಎಂದು ಕೇಂದ್ರ ಸರ್ಕಾರ ರಾಜ್ಯಸಭೆಗೆ ಮಾಹಿತಿ ನೀಡಿದೆ.

Advertisement

2024ರ ವೇಳೆಗೆ ಎಲ್ಲ ಮನೆಗಳಿಗೂ ಕುಡಿಯುವ ನೀರು ಒದಗಿಸಬೇಕು ಎಂಬ ಉದ್ದೇಶದಿಂದ ಈ ಯೋಜನೆ ಆರಂಭಿಸಲಾಗಿದೆ. ಪ್ರಮುಖವಾಗಿ ಮಹಾರಾಷ್ಟ್ರ 2,401 ಕೋಟಿ ರೂ. ಮತ್ತು ಕರ್ನಾಟಕ 1,552 ಕೋಟಿ ರೂ.ಗಳನ್ನು ಬಳಕೆ ಮಾಡದೇ ಹಾಗೆಯೇ ಉಳಿಸಿಕೊಂಡಿವೆ ಎಂದು ತಿಳಿಸಿದೆ.

ನೀರು ಪೂರೈಕೆ ರಾಜ್ಯಗಳ ವಿಚಾರವಾಗಿದ್ದು, ಅವುಗಳೇ ಯೋಜನೆ ರೂಪಿಸಿ, ಜಾರಿಗೊಳಿಸಬೇಕಾಗಿದೆ. ಅಲ್ಲದೆ, ನಿರ್ವಹಣೆಯೂ ಅವುಗಳದ್ದೇ ಹೊಣೆಯಾಗಿದೆ ಎಂದು ಜಲ ಶಕ್ತಿ ಇಲಾಖೆಯ ರಾಜ್ಯ ಸಚಿವ ಪ್ರಹ್ಲಾದ್‌ ಸಿಂಗ್‌ ಪಟೇಲ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next