ರಾಮನಗರ: ನಗರಸಭಾ ವ್ಯಾಪ್ತಿಯಲ್ಲಿ ಅಮೃತ್ 2.0 ಕಾರ್ಯಕ್ರಮದಡಿ ವುಮೆನ್ ಫಾರ್ ವಾಟರ್, ವಾಟರ್ ಫಾರ್ ವುಮೆನ್ ಕಾಂಪೈನ್ ಕಾರ್ಯ ಕ್ರಮದಡಿಯಲ್ಲಿ ದ್ಯಾವರಸೇಗೌಡನ ದೊಡ್ಡಿಯಲ್ಲಿರುವ ವಾಟರ್ ಟ್ರೀಟ್ ಮೆಂಟ್ ಪ್ಲಾಂಟ್ ನಲ್ಲಿ ಡೇ-ನಲ್ಮ್ ಯೋಜನೆಯ 60 ಸ್ವ-ಸಹಾಯ ಗುಂಪಿನ ಸದಸ್ಯ ರೊಂದಿಗೆ ಜಲ ದೀಪಾವಳಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ನಗರಸಭಾ ಅಧ್ಯಕ್ಷೆ ವಿಜಯಕುಮಾರಿ ನೀರಿನ ಸದ್ಭಳಕೆ ಮತ್ತು ಮಹತ್ವದ ಬಗ್ಗೆಅರಿವು ಮೂಡಿಸಿದರು.ನಗರಸಭಾ ಉಪಾಧ್ಯಕ್ಷ ಸೋಮಶೇಖರ್ (ಮಣಿ)ಅವರುನೀರಿನ ಸದ್ಬಳಕೆ ಹಾಗೂ ನೀರನ್ನು ಮಿತವಾಗಿ ಬಳಸಲು ತಿಳಿಸಿದರು.
ನೀರು ಸರಬರಾಜು ಮಂಡಳಿಯ ಸಹಾಯಕ ಅಭಿಯಂತರ ಅನಿಲ್ ಗೌಡ ಮತ್ತು ಕಂಪನಿಯ ವ್ಯವ ಸ್ಥಾಪಕ ಸಿದ್ದರಾಮು ದ್ಯಾವರಸೇಗೌಡನ ದೊಡ್ಡಿಯ ವಾಟರ್ ಟ್ರೀಟ್‌ಮೆಂಟ್ ಪ್ಲಾಂಟ್‌ನಲ್ಲಿನ ನೀರು ಶುದ್ಧೀಕರಣ ಘಟಕದ ತಂತ್ರಾಜ್ಞಾನದ ಕಾರ್ಯ ನಿರ್ವಹಣೆ ಹಾಗೂ ಮೈಕ್ರೋ ಫೈಭರ್ ಫಿಟ್ಟರ್‌ನ ಕಾರ್ಯವನ್ನು ವಿವರಿಸಿದರು.
ಕಾರ್ಯಕ್ರಮದಲ್ಲಿ ನಗರಸಭೆ ಮಾಜಿ ಉಪಾಧ್ಯಕ್ಷ ಜಯಲಕ್ಷ್ಮಮ್ಮ, ನಗರಸಭೆ ಪೌರಾಯುಕ್ತ ಎಲ್. ನಾಗೇಶ್, ಅಭಿಯಾನ ವ್ಯವಸ್ಥಾಪಕ ಡಾ.ಡಿ ನಟರಾಜೇಗೌಡ, ಸಮುದಾಯಸಂಪನ್ಮೂಲ ವ್ಯಕ್ತಿಗಳಾದ ಭೂಮಿಕಾ ಎಂ, ವಿಜಿಯಮ್ಮ ವಿ.ಎಸ್ ಹಾಗೂ ಮಹೇಶ್ವರಿ ಉಪಸ್ಥಿತರಿದ್ದರು.