ಸುಬ್ರಹ್ಮಣ್ಯ: ಸುಬ್ರಹ್ಮಣ್ಯ ಕೆ.ಎಸ್.ಎಸ್ ಕಾಲೇಜಿನಲ್ಲಿ ನಡೆದ ಜಾಕೆ ಪರಮೇಶ್ವರ ಗೌಡ ರೋಲಿಂಗ್ ಟ್ರೋಪಿ ಅಂತರ್ ಕಾಲೇಜು ಪುರುಷರ ವಿಭಾಗದ ಖೋ-ಖೋ ಪಂದ್ಯಾಟದಲ್ಲಿ ಮೂಡಬಿದಿರೆಯ ಆಳ್ವಾಸ್ ಕಾಲೇಜ್ ತಂಡವು ಜಯ ಸಾಧಿಸುವುದರೊಂದಿಗೆ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. ದ್ವೀತಿಯ ಸ್ಥಾನ ಆಳ್ವಾಸ್ ಬಿಪಿಎಡ್ ಕಾಲೇಜು ತಂಡ ಪಡಕೊಂಡಿತು. ತೃತೀಯ ಸ್ಥಾನವನ್ನು ಬಂಟ್ವಾಳದ ವಾಮಪದವಿನ ಜಿಎಫ್ಜಿಸಿ ಕಾಲೇಜು ತಂಡ ಪಡೆದರೆ ಕೋಣಾಜೆಯ ಮಂಗಳೂರು ವಿಶ್ವವಿದ್ಯಾನಿಲಯ ತಂಡ ನಾಲ್ಕನೆ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.
ಪಂದ್ಯಾಟದ ವಯಕ್ತಿಕ ಪ್ರಶಸ್ತಿಗಳಲ್ಲಿ ಸರ್ವಾಂಗೀಣ ಆಟಗಾರನಾಗಿ ಪದವು ಆಳ್ವಾಸ್ ಕಾಲೇಜು ತಂಡದ ಕ್ರೀಡಾಪಟು ವಿನಾಯಕ ಪ್ರಶಸ್ತಿ ಪಡಕೊಂಡರು. ಬೆಸ್ಟ್ ಡಿಪೆಂಡರ್ ಆಗಿ ಮೂಡಬಿದಿರೆ ಆಳ್ವಾಸ್ ಕಾಲೇಜಿನ ಧನುಷ್ ಹಾಗೂ ಉತ್ತಮ ಹಿಡಿತಗಾರನಾಗಿ ವಾಮನಪದವು ಕಾಲೇಜಿನ ಜಿಎಪ್‌ಜಿಸಿ ತಂಡದ ಜಯಾನಂದ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡರು.
ಎರಡು ದಿನಗಳ ಅವಧಿ ನಡೆದ ಪಂದ್ಯಾಟದ ಸಮಾರೋಪ ಸಮಾರಂಭದಲ್ಲಿ ವಿಜೇತ ತಂಡಗಳಿಗೆ ಕುಕ್ಕೆ ಸುಬ್ರಹ್ಮಣ್ಯ ದೇಗುಲದ ಮಾಸ್ಟರ್ ಪ್ಲಾನ್ ಸಮಿತಿ ಸದಸ್ಯ ಶಿವರಾಮ ರೈ ಬಹುಮಾನ ವಿತರಿಸಿದರು. ಕಾಲೇಜು ಉಪಪ್ರಾಂಶುಪಾಲ ಮಂಜುನಾಥ ಭಟ್ ಅಧ್ಯಕ್ಷತೆ ವಹಿಸಿದರು.
ಕುಕ್ಕೆ ಸುಬ್ರಹ್ಮಣ್ಯ ದೇಗುಲದ ವ್ಯವಸ್ಥಾಪನ ಸಮಿತಿ ಸದಸ್ಯ ಕೃಷ್ಣಮೂರ್ತಿ ಭಟ್, ಮಂಗಳೂರು ಶಾರೀರಿಕ ಶಿಕ್ಷಣ ನಿರ್ದೇಶಕ ಕಿಶೋರುಕುಮಾರ್ ಸಿ.ಕೆ, ಮಂಗಳೂರು ವಿ.ವಿ ಹಿರಿಯ ಶಾರೀರಿಕ ಶಿಕ್ಷಣ ನಿರ್ದೇಶಕ ಯಂ ದಯಾಕರ, ಉಪಪ್ರಾಂಶುಪಾಲ ಪ್ರೊ| ಮಂಜುನಾಥ ಭಟ್, ಶಾರೀರಿಕ ಶಿಕ್ಷಣ ನಿರ್ದೇಶಕ ದಿನೇಶ್ ಕೆ, ಗುತ್ತಿಗೆದಾರ ಕೃಷ್ಣಕುಮಾರ್ , ಶಿಕ್ಷಕ-ರಕ್ಷಕ ಸಂಘದ ಪೂರ್ವಾಧ್ಯಕ್ಷ ಸೀತಾರಾಮ ಎಣ್ಣೆಮಜಲು ಉಪಸ್ಥಿತರಿದ್ದರು. ಪ್ರೊ| ಉದಯಕುಮಾರ್ ವಂದಿಸಿ, ವಿನ್ಯಾಸ್ ನಿರೂಪಿಸಿದರು.