Advertisement

ಶಿಲ್ಪಕಲೆಗೆ ಜೀವನ ಪಣಕ್ಕಿಟ್ಟ ಜಕಣಾಚಾರಿ; ಎನ್‌.ವೈ

05:13 PM Jan 02, 2023 | Team Udayavani |

ಬಾಗಲಕೋಟೆ: ಇಡೀ ಜೀವನವನ್ನೇ ಶಿಲ್ಪ ಕಲೆಗಾಗಿ ಪಣಕ್ಕಿಟ್ಟಂತಹ ಶಿಲ್ಪಿ ಜಕಣಾಚಾರಿಯಾಗಿದ್ದರು ಎಂದು ಜಿಪಂ ಉಪ ಕಾರ್ಯದರ್ಶಿ ಎನ್‌.ವೈ. ಬಸರಿಗಿಡದ ಹೇಳಿದರು.

Advertisement

ಡಾ|ಬಿ.ಆರ್‌. ಅಂಬೇಡ್ಕರ್‌ ಭವನದಲ್ಲಿ ಜಿಲ್ಲಾಡಳಿತ, ಜಿ.ಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ರವಿವಾರ ಆಯೋಜಿಸಿದ್ದ ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನ ಉದ್ಘಾಟಿಸಿ ಅವರು ಮಾತನಾಡಿದರು.

ಜಕಣಾಚಾರಿ ತನ್ನ ಶಿಲ್ಪ ಕಲೆ ಮೇಲೆ ಅಗಾಧ ದ ನಂಬಿಕೆಯಿಂದ ಕೆತ್ತಲಾಗಿದ್ದ ಚೆನ್ನಕೇ ಶವ ಮೂರ್ತಿಯಲ್ಲಿ ದೋಷವಿದೆ ಎಂಬ ಮಾತು ತನ್ನ ಮಗನಾದ ಡಂಕನಾಚಾರಿಯಿಂದ ಕೇಳಿ ಬಂದಾಗ ಮತ್ತು ಅದು ನಿಜವಾದಾಗ ತನ್ನ ಬಲಗೈಯನ್ನೇ ಕತ್ತರಿಸಿಕೊಂಡು ಮಾತಿಗೆ ತಕ್ಕಂತೆ ನಡೆದುಕೊಂಡು ಅಮರಶಿಲ್ಪಿಯಾಗಿ, ರಾಜ್ಯದ ಬೇಲೂರು-ಹಳೆಬೀಡಿನಲ್ಲಿ ನಾಜೂಕಿನ ಶಿಲ್ಪಕಲೆ ನಾಡಿಗೆ ಕೊಟ್ಟ ಮಹಾನ್‌ ಶಿಲ್ಪಿಯಾಗಿದ್ದರು ಎಂದರು.

ಇಳಕಲ್‌ ಡಯಟ್‌ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಜಗದೇವ ಮರೋಳ ವಿಶೇಷ ಉಪನ್ಯಾಸಕರಾಗಿ ಮಾತನಾಡಿ, ಜಕಣಾಚಾರಿ ಕೆತ್ತಿದ ಹಲವಾರು ಶಿಲ್ಪಗಳು ಇಂದಿಗೂ ಕಂಗೊಳಿಸುತ್ತಿವೆ. ಬೇಲೂರು, ಹಳೆಬೀಡು ಸೋಮನಾಥಪುರ ದೇವಾಲಯಗಳಲ್ಲಿ ಅವರ ಶಿಲ್ಪಕಲಾ ಕೌಶಲ್ಯ ನೋಡಬಹುದು.ಕಲೆ ಎಲ್ಲರಿಗೂ ಒಲಿಯುವಂಥದ್ದಲ್ಲ.

ಜ್ಞಾನಭಾವದಿಂದ ತಪಸ್ಸಿನಿಂದ ಮಾತ್ರ ಶ್ರೇಷ್ಠ ಶಿಲ್ಪಿಯಾಗಲು ಸಾಧ್ಯ. ಶಿಲ್ಪಿಯಾದವನು ಹೇಗೆ ಇರಬೇಕು ಎಂಬುದನ್ನು ಶಾಸ್ತ್ರಗಳಲ್ಲಿ ಹೇಳಲಾಗಿದೆ. ಅದರಂತೆಯೇ ಜಕಣಾಚಾರಿ ತಮ್ಮ ಕೆತ್ತನೆ ಮತ್ತು ನಡತೆಗಳಿಂದ ಅಮರಶಿಲ್ಪಿಯಾಗಿ ಅಜರಮರಾಗಿದ್ದಾರೆ ಎಂದು ಹೇಳಿದರು.  ಮುರನಾಳ ಜಗನ್ನಾಥ ಮಹಾಸ್ವಾಮಿ ಸಾನ್ನಿಧ್ಯ ವಹಿಸಿದ್ದರು. ಈ ವೇಳೆ ವಿಶ್ವಕರ್ಮ ಸಮುದಾಯದ ಮುಖಂಡರಾದ ಸಂಗಣ್ಣ ಹಡಗಲಿ, ವಿ.ಎಂ. ಕಮ್ಮಾರ, ಗ್ರೇಡ್‌-2 ತಹಶಿಲ್ದಾರ್‌ ಎಂ.ಎನ್‌. ಬಿರಾದಾರ ಸೇರಿದಂತೆ ಇತರರು ಇದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕರ್ಣಕುಮಾರ ಜೈನಾಪುರ ಸ್ವಾಗತಿಸಿದರು. ಶಂಕರಲಿಂಗ ದೇಸಾಯಿ ನಿರೂಪಿಸಿದರು.

Advertisement

ಭಾವಚಿತ್ರ ಮೆರವಣಿಗೆ: ಶಾಸಕ ಡಾ| ವೀರಣ್ಣ ಚರಂತಿಮಠ ಬೆಳಗ್ಗೆ 9.30ಕ್ಕೆ ಜಿಲ್ಲಾಡಳಿತ ಭವನ ಆವರಣದಲ್ಲಿ ಅಮರಶಿಲ್ಪಿ ಜಕಣಾಚಾರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಭಾವಚಿತ್ರ ಮತ್ತು ವಿವಿಧ ಜನಪದ ಕಲಾ ತಂಡಗಳ ಮೆರವಣಿಗೆಗೆ ಚಾಲನೆ ನೀಡಿದರು. ಮೆರಣಿಗೆ ಜಿಲ್ಲಾಡಳಿತ  ಭವನದಿಂದ ಪ್ರಾರಂಭವಾಗಿ ನವನಗರದ ಬಸ್‌ ನಿಲ್ದಾಣ, ಎಲ್‌ಐಸಿ ವೃತ್ತದ ಮಾರ್ಗವಾಗಿ ಸಾಗಿ ಡಾ| ಬಿ.ಆರ್‌. ಅಂಬೇಡ್ಕರ್‌ ಭವನದಲ್ಲಿ ಮುಕ್ತಾಯಗೊಂಡಿತು.

Advertisement

Udayavani is now on Telegram. Click here to join our channel and stay updated with the latest news.