Advertisement

ಮತ್ತೊಂದು ‘ಪುಲ್ವಾಮ ಮಾದರಿ’ ದಾಳಿಗೆ ಜೈಶ್ ಸಜ್ವು?

03:09 AM Mar 08, 2019 | Karthik A |

ಶ್ರೀನಗರ : ಇನ್ನು 3-4 ದಿನಗಳ ಒಳಗೆ ಪಾಕಿಸ್ಥಾನ ಬೆಂಬಲಿತ ಉಗ್ರ ಸಂಘಟನೆ ಜೈಶ್-ಎ-ಮಹಮ್ಮದ್ ಪುಲ್ವಾಮ ಮಾದರಿಯ ಆತ್ಮಾಹುತಿ ದಾಳಿಯೊಂದನ್ನು ನಡೆಸಲು ಸಿದ್ಧತೆ ನಡೆಸಿದೆ ಎಂಬ ಎಚ್ಚರಿಕೆಯನ್ನು ಗುಪ್ತಚರ ಮೂಲಗಳು ನೀಡಿವೆ. ಬಾಲಕೋಟ್ ನಲ್ಲಿರುವ ತನ್ನ ತರಬೇತಿ ಶಿಬಿರಗಳ ಮೇಲೆ ಭಾರತೀಯ ವಾಯುಪಡೆ ನಡೆಸಿದ ವಾಯುದಾಳಿಗೆ ಪ್ರತೀಕಾರವಾಗಿ ಇನ್ನೊಂದು ಪುಲ್ವಾಮ ಮಾದರಿಯ ದಾಳಿಯನ್ನು ಜೈಶ್ ಸಂಘಟನೆ ಶೀಘ್ರವೇ ನಡೆಸಲಿದೆ ಎಂಬ ಮಾಹಿತಿ ಹೊರಬಿದ್ದಿದೆ.

Advertisement

ಗುಪ್ತಚರ ಮಾಹಿತಿಗಳನ್ನು ಆಧರಿಸಿ ಇದೀಗ ಕಣಿವೆ ರಾಜ್ಯದಲ್ಲಿ ಗರಿಷ್ಠ ಮಟ್ಟದ ಭದ್ರತಾ ವ್ಯವಸ್ಥೆಯನ್ನು ಮಾಡಲಾಗಿದೆ. ಮತ್ತು ಎಲ್ಲಾ ಭದ್ರತಾ ಪಡೆಗಳನ್ನು ‘ಹೈ ಅಲರ್ಟ್’ ಸ್ಥಿತಿಯಲ್ಲಿರಿಸಲಾಗಿದೆ. ಜೈಶ್ ಮುಖ್ಯಸ್ಥ ಮಸೂದ್ ಅಜ್ಹರ್ ನೇತೃತ್ವದ ಜೈಶ್ ಸಂಘಟನೆಯು ಪ್ರಮುಖವಾಗಿ ದಕ್ಷಿಣ ಕಾಶ್ಮೀರದ ಖ್ವಾಝಿಗಂಡ್ ಮತ್ತು ಅನಂತನಾಗ್ ಪ್ರದೇಶಗಳಲ್ಲಿ ಐಇಡಿ ದಾಳಿಗಳನ್ನು ನಡೆಸಲು ಸಂಚು ರೂಪಿಸಿದೆ ಎಂಬ ಮಾಹಿತಿಯೂ ಗುಪ್ತಚರ ಮೂಲಗಳಿಂದ ಬಹಿರಂಗಗೊಂಡಿದೆ. ಮತ್ತು ತನ್ನ ಈ ಸ್ಪೋಟ ಸಂಚಿಗಾಗಿ ಈ ಉಗ್ರ ಸಂಘಟನೆಯು ‘ಟಾಟಾ ಸುಮೋ’ ಮಾದರಿಯ ವಾಹನಗಳನ್ನು ಬಳಸುವ ಸಾಧ್ಯತೆಗಳು ಇವೆ ಎನ್ನಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next