Advertisement

ರಾವಲ್ಪಿಂಡಿ ಆಸ್ಪತ್ರೆಯಲ್ಲಿ ಜೈಶ್‌ ಮುಖ್ಯಸ್ಥ ಮೌಲಾನಾ ಮಸೂದ್‌ ಅಜರ್‌ ಸಾವು ?

09:03 AM Apr 04, 2019 | Team Udayavani |

ಇಸ್ಲಾಮಾಬಾದ್‌: ಪಾಕಿಸ್ಥಾನದ ಜೈಶ್‌ ಎ ಮೊಹಮ್ಮದ್‌ ಉಗ್ರ ಸಂಘಟನೆಯ ಮುಖ್ಯಸ್ಥ ಮೌಲಾನಾ ಮಸೂದ್‌ ಅಜರ್‌ ಮೃತಪಟ್ಟಿರುವುದಾಗಿ ವರದಿಗಳು ತಿಳಿಸಿವೆ.

Advertisement

ಮೂಲಗಳ ಪ್ರಕಾರ ಉಗ್ರ ಅಜರ್‌ ಕಳೆದ ಮಾರ್ಚ್‌ 2ರಂದು ರಾವಲ್ಪಿಂಡಿಯಲ್ಲಿನ ಮಿಲಿಟರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.

ಆದರೆ ಪಾಕ್‌ ಸರಕಾರ ಈ ಬಗ್ಗೆ ಅಧಿಕೃತ ಹೇಳಿಕೆಯನ್ನು ಇನ್ನಷ್ಟೇ ಕೊಡಬೇಕಿದೆ. ಪಾಕ್‌ ಗುಪ್ತಚರ ದಳದ ಉನ್ನತ ಮೂಲಗಳ ಪ್ರಕಾರ ಅಜರ್‌ ಲಿವರ್‌ ಕ್ಯಾನ್ಸರ್‌ನಿಂದ ಮೃತಪಟ್ಟಿದ್ದಾನೆ.

ಕೆಲವು ವರದಿಗಳ ಪ್ರಕಾರ ಭಾರತೀಯ ವಾಯು ಪಡೆ ಕಳೆದ ಫೆ.26ರಂದು ಪಾಕಿಸ್ಥಾನದ ಬಾಲಾಕೋಟ್‌ ನಲ್ಲಿನ ಜೈಶ್‌ ಎ ಮೊಹಮ್ಮದ್‌ ಉಗ್ರ ತರಬೇತಿ ಶಿಬಿರಗಳ ಮೇಲೆ ಬಾಂಬ್‌ ದಾಳಿ ನಡೆಸಿದ್ದಾಗ ಮಸೂದ್‌ ಅಜರ್‌, ಶಿಬಿರ ಕಟ್ಟಡದಲ್ಲಿ ಮಲಗಿಕೊಂಡಿದ್ದ.

ಐಎಎಫ್ ವಾಯು ದಾಳಿಯಲ್ಲಿ ಕರ್ನಲ್‌ ಸಲೀಮ್‌ ಎಂಬ ಐಎಸ್‌ಐ ಅಧಿಕಾರಿಯೂ ಮೃತಪಟ್ಟಿದ್ದ ಎಂದು ಮೂಲಗಳು ತಿಳಿಸಿದ್ದವು.

Advertisement

ಈ ನಡುವೆ ಮಸೂದ್‌ ಅಜರ್‌ ಸತ್ತಿದ್ದಾನೆ ಎಂಬ ವರದಿಗಳನ್ನು ಜೈಶ್‌ ಎ ಮೊಹಮ್ಮದ್‌ ತಿರಸ್ಕರಿಸಿದೆ; ಆತ ಇನ್ನೂ ಜೀವಂತ ಇದ್ದಾನೆ ಎಂದು ಅದು ಹೇಳಿದೆ.

ಕಳೆದ ಶುಕ್ರವಾರ ಪಾಕ್‌ ವಿದೇಶ ಸಚಿವ ಶಾ ಮಹಮೂದ್‌ ಕುರೇಶಿ ಪಾಕಿಸ್ಥಾನದಲ್ಲೇ ಇದ್ದಾನೆ ಎಂದು ಒಪ್ಪಿಕೊಂಡಿದ್ದರು. “ಆತ ಪಾಕಿಸ್ಥಾನದಲ್ಲೇ ಇದ್ದಾನೆ; ನನಗೆ ಸಿಕ್ಕಿರುವ ಮಾಹಿತಿ ಪ್ರಕಾರ ಆತ ತುಂಬಾ ಅಸ್ವಸ್ಥನಿದ್ದಾನೆ ಮತ್ತು ಮನೆಯಿಂದ ಹೊರಹೋಗಲಾಗದಷ್ಟು ಅನಾರೋಗ್ಯ ಪೀಡಿತನಾಗಿದ್ದಾನೆ’ ಎಂದು ಹೇಳಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next