Advertisement

ಫಿಲಂ ಚೇಂಬರ್‌ ಅಧ್ಯಕ್ಷರಾಗಿ ಜೈರಾಜ್‌ ಅವಿರೋಧ ಆಯ್ಕೆ

08:38 AM Jun 23, 2019 | Lakshmi GovindaRaj |

ಬೆಂಗಳೂರು: ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ನೂತನ ಅಧ್ಯಕ್ಷರಾಗಿ ಡಿ.ಆರ್‌.ಜೈರಾಜ್‌ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಪ್ರದರ್ಶಕರ ವಲಯದಿಂದ ಜೈರಾಜ್‌ ಸ್ಪರ್ಧಿಸಿದ್ದರು. ಇದೇ ವೇಳೆ, ಪ್ರದರ್ಶಕರ ವಲಯದಿಂದ ಉಪಾಧ್ಯಕ್ಷರಾಗಿ ವೆಂಕಟರಮಣ ಬಾಬ್‌ಜೀ, ಕಾರ್ಯದರ್ಶಿಗಳಾಗಿ ವಿತರಕರ ವಲಯದಿಂದ ಎ.ಗಣೇಶ್‌ ಹಾಗೂ ಪ್ರದರ್ಶಕರ ವಲಯದಿಂದ ನರಸಿಂಹಲು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

Advertisement

ನಿರ್ಮಾಪಕರ ವಲಯದಿದ ಉಪಾಧ್ಯಕ್ಷ ಸ್ಥಾನಕ್ಕೆ ಉಮೇಶ್‌ ಬಣಕಾರ್‌, ಪ್ರಮೀಳಾ ಜೋಷಾಯ್‌, ದಿನೇಶ್‌ ಗಾಂಧಿ ಸ್ಪರ್ಧಿಸಲಿದ್ದು, ಖಜಾಂಚಿ ಸ್ಥಾನಕ್ಕೆ ವೆಂಕಟೇಶ್‌ ಹಾಗೂ ಗುರುದತ್‌ ಮುಸುರಿ ಸ್ಪರ್ಧೆ ಮಾಡಲಿದ್ದು, ಜೂನ್‌ 29ರಂದು ಈ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next