Advertisement

ಪಿಂಕ್‌ ಸಿಟಿ ಜೈಪುರ ಯುನೆಸ್ಕೋ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರ್ಪಡೆ

04:41 PM Jul 07, 2019 | Sathish malya |

ಜೈಪುರ : ವಿಶ್ವ ಪಾರಂಪರಿಕ ತಾಣಗಳ ಯುನಸ್ಕೋ ಪಟ್ಟಿಗೆ “ಪಿಂಕ್‌ ಸಿಟಿ’ ಜೈಪುರ ಸೇರ್ಪಡೆಯಾಗಿರುವುದಕ್ಕೆ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್‌ ಗೆಹಲೋಟ್‌ ರಾಜ್ಯದ ಜನತೆಯನ್ನು ಅಭಿನಂದಿಸಿದ್ದಾರೆ.

Advertisement

ಜೈಪುರ ವು ಪ್ರಾತಿನಿಧಿಕ ವಾಸ್ತುಶಿಲ್ಪ ಕೊಡುಗೆಯನ್ನು ಹಾಗೂ ಅತ್ಯಂತ ಸ್ಪಂದನಶೀಲ ಸಂಸ್ಕೃತಿಯನ್ನು ಹೊಂದಿದ್ದು ಯುನೆಸ್ಕೋ ಪಟ್ಟಿಗೆ ಅದರ ಸೇರ್ಪಡೆಯು ರಾಜ್ಯದ ಜನರಿಗೆ ಹೆಮ್ಮೆ ತಂದಿದೆ ಎಂದು ಹೇಳಿದ್ದಾರೆ.

ಅಜರ್‌ಬೈಜಾನ್‌ ನ ಬಾಕು ನಲ್ಲಿ ಕಳೆದ ಜೂನ್‌ 30ರಿಂದ ಆರಂಭಗೊಂಡು ಜುಲೈ 10ರ ವರೆಗೆ ನಡೆಯಲಿರುವ ಯುನೆಸ್ಕೋ ವಿಶ್ವ ಪಾರಂಪರಿಕ ಸಮಿತಿಯ 43ನೇ ಅಧಿವೇಶನದಲ್ಲಿ ರಾಜಸ್ಥಾನದ ಜೈಪುರವನ್ನು ಪಾರಂಪರಿಕ ತಾಣಗಳ ಪಟ್ಟಿಗೆ ಸೇರ್ಪಡೆಗೊಳಿಸಲಾಗಿರುವುದನ್ನು ಪ್ರಕಟಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next