Advertisement

ಟ್ರಾಫಿಕ್‌ ಸಿಗ್ನಲ್‌ನಲ್ಲಿ ಬುಮ್ರಾ ಚಿತ್ರ, ವ್ಯಾಪಕ ಖಂಡನೆ

03:45 AM Jun 25, 2017 | |

ಜೈಪುರ: ಪಾಕಿಸ್ತಾನ ಹಾಗೂ ಭಾರತದ ಟ್ರಾಫಿಕ್‌ ಸಿಗ್ನಲ್‌ಗ‌ಳಲ್ಲಿ ಭಾರತ ಕ್ರಿಕೆಟ್‌ ತಂಡದ ವೇಗಿ ಜಸ್‌ಪ್ರೀತ್‌ ಬುಮ್ರಾ ನೋಬಾಲ್‌ ಹಾಕುತ್ತಿರುವ ಚಿತ್ರವನ್ನು ಹಾಕಲಾಗಿದ್ದು ಇದರ ವಿರುದ್ಧ ಬುಮ್ರಾ ಅಭಿಮಾನಿಗಳು ಸಿಡಿದೆದ್ದಿದ್ದಾರೆ. 

Advertisement

ಜೈಪುರ ಹಾಗೂ ಫೈಸಾಲಾಬಾದ್‌ ಟ್ರಾಫಿಕ್‌ ಪೊಲೀಸರ ವಿರುದ್ಧ ಟ್ವೀಟರ್‌ನಲ್ಲಿ ಅಭಿಮಾನಿಗಳು ಟೀಕೆಗಳ ಸುರಿಮಳೆಯನ್ನೇ ಹರಿಸಿದ್ದಾರೆ. ಈ ನಡುವೆ ಸ್ವತಃ ಬುಮ್ರಾ ಕೂಡ ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಟ್ವೀಟ್‌ ಮಾಡಿದ್ದಾರೆ. ಈ ಘಟನೆ ನಡೆದ ಬೆನ್ನಲ್ಲೇ ಜೈಪುರ ಟ್ರಾಫಿಕ್‌ ಪೊಲೀಸರು ಸ್ಪಷ್ಟನೆ ನೀಡಿದ್ದಾರೆ.

ಬುಮ್ರಾ ಅವರನ್ನು ಅವಮಾನಿಸುವುದಕ್ಕಾಗಲಿ ಅಥವಾ ಕೋಟ್ಯಂತರ ಕ್ರಿಕೆಟ್‌ ಪ್ರೇಮಿಗಳಿಗೆ ನೋವುಂಟು ಮಾಡುವುದಕ್ಕಾಗಲಿ ನಾವು ಫ‌ಲಕ ಹಾಕಿಲ್ಲ. ಕೇವಲ ಸವಾರರಿಗೆ ಎಚ್ಚರಿಕೆ ನೀಡುವ ಉದ್ದೇಶದಿಂದ ಬಳಸಿಕೊಂಡಿದ್ದೇವೆ. ನೀವು ಯೂತ್‌ ಐಕಾನ್‌, ನಮಗೆಲ್ಲರಿಗೂ ಮಾದರಿ ಎಂದು ಟ್ವೀಟರ್‌ನಲ್ಲಿ ಪ್ರಕಟಿಸಿದ್ದಾರೆ. ಬುಮ್ರಾ ಪಾಕಿಸ್ತಾನ ವಿರುದ್ಧದ ಚಾಂಪಿಯನ್ಸ್‌ ಟ್ರೋಫಿ ಫೈನಲ್‌ ವೇಳೆ ಎಸೆದ ನೋಬಾಲ್‌ ಚಿತ್ರ. ಇದರ ಎದುರುಗಡೆ ಎರಡು ಕಾರುಗಳು ಟ್ರಾಫಿಕ್‌ ಗೆರೆಯ ಎದುರು ನಿಂತಿರುವ ಫೋಟೋವನ್ನು ಜೈಪುರ ಟ್ರಾಫಿಕ್‌ ಬಳಿಸಿದ್ದರು. ಇದಾದ ಬಳಿಕ ಪಾಕ್‌ನ ಟ್ರಾಪಿಕ್‌ ಸಿಗ್ನಲ್‌ಗ‌ಳಲ್ಲೂ ಬಳಸಲಾಗಿತ್ತು. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next