Advertisement

Congress ಟೀಕಾಕಾರನಿಗೆ ಈಗ ಜೈಪುರ ಟಿಕೆಟ್‌: ಕಾಂಗ್ರೆಸ್‌ ಬೆಂಬಲಿಗರ ಆಕ್ರೋಶ

01:13 AM Mar 25, 2024 | Team Udayavani |

ಜೈಪುರ: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಇತ್ತೀ ಚೆಗೆ ಕಾಂಗ್ರೆಸ್‌ ಬಿಡುಗಡೆಗೊಳಿಸಿದ ತನ್ನ 3ನೇ ಪಟ್ಟಿ ಯಲ್ಲಿ ರಾಜಸ್ಥಾನದ ಜೈಪುರ ಕ್ಷೇತ್ರದಿಂದ ಸುನೀಲ್‌ ಶರ್ಮಾ ಅವರಿಗೆ ಟಿಕೆಟ್‌ ನೀಡಿದೆ. ಇವರು ಈ ಹಿಂದೆ ಬಲಪಂಥೀಯ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದು, ಕಾಂಗ್ರೆಸ್‌ ಪಕ್ಷವನ್ನು ಟೀಕಿಸುತ್ತಿದ್ದರು. ಇವರಿಗೆ ಈಗ ಲೋಕಸಭೆ ಟಿಕೆಟ್‌ ನೀಡಿದ್ದು ಕಾಂಗ್ರೆಸ್‌ ಬೆಂಬಲಿಗರ ಆಕ್ರೋಶಕ್ಕೆ ಕಾರಣವಾಗಿದೆ.

Advertisement

ಇವರು ಸಾಮಾಜಿಕ ಜಾಲತಾಣದಲ್ಲಿ ಬಲಪಂ ಥೀಯ ಚಿಂತನೆಗಳನ್ನು ಪ್ರಚುರಪಡಿಸುವ “ದಿ ಜೈಪುರ್‌ ಡೈಲಾಗ್ಸ್‌’ ಕಂಪೆನಿಯ ಭಾಗವಾಗಿದ್ದಾರೆ ಎಂದು ಆರೋಪಿಸಲಾಗಿದೆ. ಜೈಪುರ ಟಿಕೆಟ್‌ ಕುರಿತು ಕಾಂಗ್ರೆಸ್‌ ಹೈಕ ಮಾಂಡ್‌ ಮರುಚಿಂತನೆ ನಡೆಸಬೇಕು ಎಂದು ಕಾಂಗ್ರೆಸ್‌ ಕಾರ್ಯಕರ್ತರು ಆಗ್ರಹಿಸಿದ್ದಾರೆ.

ಇದೇ ವೇಳೆ ಸುನೀಲ್‌ ಶರ್ಮಾ ಪ್ರತಿಕ್ರಿಯಿಸಿ, “ಹಲವು ವರ್ಷಗಳ ಹಿಂದೆ ಜೈಪುರ್‌ ಡೈಲಾಗ್ಸ್‌ ಫೋರಂ ಕಂಪೆನಿಯ ನಿರ್ದೇಶಕನಾಗಿದ್ದೆ. ಆದರೆ ಕಂಪೆನಿಗೂ ಯೂಟ್ಯೂಬ್‌ ಚಾನೆಲ್‌ಗ‌ೂ ಯಾವುದೇ ಸಂಬಂಧ ಇಲ್ಲ. ಈ ಹಿಂದೆ ನಾನು ಚಾನೆಲ್‌ನ ಸಂವಾದಗಳಲ್ಲಿ ಭಾಗವಹಿಸಿದ್ದೆ. ಕೆಲವರು ಬೇಕೆಂದೇ ಈಗ ವದಂತಿಗಳನ್ನು ಹಬ್ಬಿಸುತ್ತಿದ್ದಾರೆ’ ಎಂದು ಸ್ಪಷ್ಟಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.