Advertisement

ಜೆಇಇ- ಅಡ್ವಾನ್ಸ್ಡ್ ಫ‌ಲಿತಾಂಶ ಪ್ರಕಟ: ಮೃದುಲ್‌ ಟಾಪರ್‌

09:09 PM Oct 15, 2021 | Team Udayavani |

ನವದೆಹಲಿ: ದೇಶದ ಪ್ರತಿಷ್ಠಿತ ಐಐಟಿಗಳಲ್ಲಿನ ದಾಖಲಾತಿಗಾಗಿ ರಾಷ್ಟ್ರಮಟ್ಟದಲ್ಲಿ ನಡೆಸಲಾಗುವ ಜೆಇಇ- ಅಡ್ವಾನ್ಸ್ಡ್ ಪರೀಕ್ಷೆಯ ಫ‌ಲಿತಾಂಶ ಹೊರಬಿದ್ದಿದ್ದು, ದೆಹಲಿ ವಲಯದ ಅಭ್ಯರ್ಥಿ ಮೃದುಲ್‌ ಅಗರ್ವಾಲ್ ಮೊದಲಿಗರಾಗಿ ಹೊರಹೊಮ್ಮಿದ್ದಾರೆ.

Advertisement

ಐಐಟಿ ಬಾಂಬೆ ಸಂಸ್ಥೆಗೆ ದಾಖಲಾಗಿ, ಬಿ.ಟೆಕ್‌ ಪದವಿ ಪಡೆಯುವ ಗುರಿಯನ್ನಿಟ್ಟುಕೊಂಡಿರುವ ಮೃದುಲ್‌, 360 ಅಂಕಗಳ ಪೈಕಿ 348 ಅಂಕ ಪಡೆಯುವ ಮೂಲಕ, ಈವರೆಗೆ ಈ ಪರೀಕ್ಷೆ ಎದುರಿಸಿರುವ ಅಭ್ಯರ್ಥಿಗಳಲ್ಲೇ ಅತಿ ಹೆಚ್ಚು ಅಂಕ ಗಳಿಸಿದವರೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಮಹಿಳೆಯರಲ್ಲಿ ಕಾವ್ಯಾಗೆ ಅಗಸ್ಥಾನ:
ದೆಹಲಿ ವಲಯದವರೇ ಆದ ಕಾವ್ಯಾ ಚೋಪ್ರಾ ಎಂಬವರು ಮಹಿಳಾ ಅಭ್ಯರ್ಥಿಗಳಲ್ಲಿ ಟಾಪರ್‌ ಆಗಿ ಹೊರಹೊಮ್ಮಿದ್ದಾರೆ. ಒಟ್ಟು 360 ಅಂಕಗಳಲ್ಲಿ ಅವರು 286 ಅಂಕ ಗಳಿಸಿದ್ದು ಸಮಗ್ರ ರ್‍ಯಾಂಕಿಂಗ್‌ನಲ್ಲಿ 98ನೇ ರ್‍ಯಾಂಕ್‌ ಗಳಿಸಿದ್ದಾರೆ.

ಇದನ್ನೂ ಓದಿ:ಮೂಕ ಪ್ರಾಣಿಯ ಈ ಪ್ರೀತಿಗೆ ಭಾಷೆಯಿಲ್ಲ!

ಆ ಮೂಲಕ, ಈ ಬಾರಿಯ ಪರೀಕ್ಷೆಯಲ್ಲಿ ಉನ್ನತ ಸಾಧನೆ ಮಾಡಿದ ಮಹಿಳೆ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ. ಇವರು, ಇತ್ತೀಚೆಗೆ ಪ್ರಕಟವಾಗಿದ್ದ ಜೆಇಇ-ಮೈನ್ಸ್‌ ಪರೀಕ್ಷೆಯಲ್ಲಿ ಶೇ. 100ರಷ್ಟು ಅಂಕಗಳನ್ನು ಗಳಿಸಿ, ಆ ಪರೀಕ್ಷೆಯಲ್ಲಿ ಮೊದಲ ರ್‍ಯಾಂಕ್‌ ಪಡೆದಿದ್ದ 17 ಮಂದಿಯಲ್ಲಿ ಒಬ್ಬರೆನಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next