ಜೈಪುರ: ಇನ್‌ಸ್ಟಾಗ್ರಾಂನಲ್ಲಿನ ಲೋಪ ಹುಡುಕಿ, ಕೋಟ್ಯಾಂತರ ಜನರ ಸಾಮಾಜಿಕ ಜಾಲತಾಣದ ಖಾತೆಗಳನ್ನು ಹ್ಯಾಕ್ ಆಗದಂತೆ ಉಳಿಸಿದ್ದಕ್ಕಾಗಿ ಇನ್‌ಸ್ಟಾಗ್ರಾಮ್ ಯುವಕನೋರ್ವನಿಗೆ 38 ಲಕ್ಷ ರೂಪಾಯಿ ಬಹುಮಾನ ನೀಡಿದೆ.
ಇದನ್ನೂ ಓದಿ: ವೈರಲ್ ಪೋಸ್ಟ್: ಬೆಂಗಳೂರಿನ ಟ್ರಾಫಿಕ್ ಜಾಮ್ ನಲ್ಲೇ ಲವ್, ಮದುವೆ ಮತ್ತು ಊಟ !
ಜೈಪುರದ ನೀರಜ್ ಶರ್ಮಾ ಎಂಬ ವಿದ್ಯಾರ್ಥಿ ಇನ್‌ಸ್ಟಾಗ್ರಾಂನ ಲೋಪಗಳನ್ನು ಕಂಡುಹುಡುಕಿದ್ದಾನೆ. ಇನ್‌ಸ್ಟಾಗ್ರಾಂ ಖಾತೆಯಲ್ಲಿ ಲಾಗಿನ್ ಮತ್ತು ಪಾಸ್‌ವರ್ಡ್ ಇಲ್ಲದೆ ಯಾವುದೇ ಬಳಕೆದಾರರ ಖಾತೆಯಲ್ಲಿ ಥಂಬ್‌ನೇಲ್‌ಗಳನ್ನು ಬದಲಾಯಿಸಬಹುದಾಗಿತ್ತು. ಈ ಲೋಪವನ್ನು ನೀರಜ್ ಕಂಡುಹುಡುಕಿ, ಇನ್‌ಸ್ಟಾಗ್ರಾಂ ಮತ್ತು ಫೇಸ್‌ಬುಕ್‌ಗೆ ಮಾಹಿತಿ ನೀಡಿದ್ದರು. ಬಳಿಕ ವಿಚಾರಣೆ ನಡೆಸಿದ ವೇಳೆ ಇನ್‌ಸ್ಟಾಗ್ರಾಂನಲ್ಲಿ ಲೋಪಗಳಿರುವುದು ಕಂಡುಬಂದಿದೆ. ಕೋಟ್ಯಾಂತರ ಜನರ ಖಾತೆಗಳು ಹ್ಯಾಕ್ ಆಗುವುದನ್ನು ತಡೆದಿದ್ದಕ್ಕಾಗಿ ನೀರಜ್ ಅವರಿಗೆ 38 ಲಕ್ಷ ರೂ. ಬಹುಮಾನ ನೀಡಿದೆ.
ಕಳೆದ ವರ್ಷ ಡಿಸೆಂಬರ್‌ನಲ್ಲಿ ಇನ್‌ಸ್ಟಾಗ್ರಾಮ್ ಖಾತೆ ಬಗ್ಗೆ ಸಂದೇಹವಿತ್ತು. ಈ ಕುರಿತು ತಪ್ಪುಗಳನ್ನು ಹುಡುಕಲು ಪ್ರಾರಂಭಿಸಿದೆ. ಬಹಳಷ್ಟು ಕಠಿಣ ಪರಿಶ್ರಮದ ನಂತರ, ಜನವರಿ 31 ರ ಬೆಳಿಗ್ಗೆ, ಇನ್‌ಸ್ಟಾಗ್ರಾಂ ನ (ಬಗ್) ಲೋಪದ ಬಗ್ಗೆ ನನಗೆ ತಿಳಿಯಿತು. ಖಾತೆಯಲ್ಲಿ ಲಾಗಿನ್ ಮತ್ತು ಪಾಸ್‌ವರ್ಡ್ ಇಲ್ಲದೆ ಯಾವುದೇ ಬಳಕೆದಾರರ ಖಾತೆಯಲ್ಲಿ ಥಂಬ್‌ನೇಲ್‌ಗಳನ್ನು ಬದಲಾಯಿಸಬಹುದಾಗಿತ್ತು. ಖಾತೆದಾರರ ಪಾಸ್‌ವರ್ಡ್ ಎಷ್ಟು ಪ್ರಬಲವಾಗಿದ್ದರೂ ಅದನ್ನು ಬದಲಾಯಿಸಬಹುದಾತ್ತು. ಇದಾದ ನಂತರ, ನಾನು ವರದಿಯನ್ನು ಇನ್‌ಸ್ಟಾಗ್ರಾಂ ಮತ್ತು ಫೇಸ್‌ಬುಕ್‌ಗೆ ನೀಡಿದೆ. ಈ ತಪ್ಪಿನ ಬಗ್ಗೆ ಮತ್ತು ಮೂರು ದಿನಗಳ ನಂತರ ಅವರಿಂದ ಪ್ರತಿಕ್ರಿಯೆ ಸ್ವೀಕರಿಸಿದೆ. ಅವರು ಡೆಮೊವನ್ನು ಕೇಳಿದರು. ಕೇವಲ 5 ನಿಮಿಷದಲ್ಲಿ ತಪ್ಪನ್ನು ತೋರಿಸಿದೆ ಎಂದು ನೀರಜ್ ಹೇಳಿದರು.
ಮೇ 11 ರಂದು ಫೇಸ್‌ಬುಕ್‌ನಿಂದ ಮೇಲ್ ಬಂದಿದ್ದು, ಅದರಲ್ಲಿ ಅವರಿಗೆ $ 45,000 (ಸುಮಾರು ರೂ 35 ಲಕ್ಷ) ಬಹುಮಾನವನ್ನು ನೀಡಲಾಗಿದೆ. ಬಹುಮಾನವನ್ನು ನೀಡಲು ನಾಲ್ಕು ತಿಂಗಳ ವಿಳಂಬವಾಗಿದ್ದು, ಫೇಸ್‌ಬುಕ್ $ 4500 (ಸುಮಾರು 3 ಲಕ್ಷ ರೂ.) ಅನ್ನು ಬೋನಸ್ ಆಗಿ ನೀಡಿದೆ.