Advertisement

Jaipur: 250 ಕೋ.ರೂ. ವೆಚ್ಚದ ವಿಪ್ರೋ ಉತ್ಪಾದನ ಘಟಕ

02:02 AM Aug 23, 2024 | Team Udayavani |

ಜೈಪುರ: ಬೆಂಗಳೂರು ಮೂಲದ ವಿಪ್ರೋ ಹೈಡ್ರಾಲಿಕ್ಸ್‌ ಸಂಸ್ಥೆ ರಾಜಸ್ಥಾನದ ಜೈಪುರದಲ್ಲಿ 250 ಕೋಟಿ ರೂ. ಮೌಲ್ಯದ ಉತ್ಪಾದನ ಘಟಕವನ್ನು ಆರಂಭಿಸಿದೆ. ಇದು ಸಂಸ್ಥೆಯ 6ನೇ ಉತ್ಪಾದನ ಘಟಕವಾಗಿದೆ. ರಾಜಸ್ಥಾನ ಮುಖ್ಯಮಂತ್ರಿ ಭಜನ್‌ ಲಾಲ್‌ ಶರ್ಮಾ, ವಿಪ್ರೋ ಮುಖ್ಯಸ್ಥ ಅಜೀಂ ಪ್ರೇಮ್‌ಜಿ ಉದ್ಘಾಟನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. “ಈ ಘಟಕವನ್ನು ಸ್ಥಾಪಿಸಲು ವಿಪ್ರೋ ಸುಮಾರು 250 ಕೋಟಿ ರೂ. ಹೂಡಿಕೆ ಮಾಡಿದ್ದು, ಸುಮಾರು 400 ಜನರಿಗೆ ಕೆಲಸ ನೀಡಲಿದೆ ‘ ಎಂದು ಸಂಸ್ಥೆ ಸಿಇಒ ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next