Advertisement

ಜೈನಕೆರೆ: ಬರಿದಾಗುತ್ತಿದೆ ಅತ್ಯಮೂಲ್ಯ ಜೀವ ಸೆಲೆ !

10:15 PM Mar 31, 2019 | sudhir |

ತೆಕ್ಕಟ್ಟೆ: ಕೃಷಿಕರ ಪಾಲಿನ ವರದಾನ ವಾಗಿರುವ ತೆಕ್ಕಟ್ಟೆ ಗ್ರಾ.ಪಂ. ವ್ಯಾಪ್ತಿಯ ಜೈನರ ಕೆರೆ (ಜನರ ಕೆರೆ) 0.80ಎಕ್ರೆ ವಿಸ್ತೀರ್ಣವನ್ನು ಹೊಂದಿದ್ದು ನಿರ್ವಹಣೆಗಳಿಲ್ಲದೆ ಸೊರಗುತ್ತಿದೆ. ಈ ಅತ್ಯಮೂಲ್ಯ ಜೀವ ಸೆಲೆ ಬರಿದಾಗುತ್ತಿದ್ದು ಸ್ಥಳೀಯ ಕೃಷಿಕರಲ್ಲಿ ಆತಂಕ ವ್ಯಕ್ತವಾಗಿದೆ.

Advertisement

ಕೆರೆಯಲ್ಲಿ ತುಂಬಿದೆ ಹೂಳು
ಸುತ್ತಮುತ್ತಲ ಪರಿಸರದ ನೂರಾರು ಎಕ್ರೆ ಫಲವತ್ತಾದ ಕೃಷಿ ಭೂಮಿಗಳಿಗೆ ಆಧಾರವಾಗಿದ್ದ ಜನರಕೆರೆ ಅಪಾರವಾದ ನೀರಿನ ಸೆಲೆಯನ್ನು ಹೊಂದಿದೆ. ಆದರೆ ಕೆರೆಯ ದಡದ ಸುತ್ತಲೂ ಬೆಳೆದು ನಿಂತಿರುವ ಗಿಡಗಂಟಿಗಳು ಮತ್ತು ಹೇರಳವಾಗಿ ಕೆರೆಯ ಆಳದಲ್ಲಿ ಸಂಗ್ರಹವಾಗಿರುವ ಹೂಳುಗಳಿಂದಾಗಿ ಅಂತರ್ಜಲ ಮಟ್ಟ ಸಂಪೂರ್ಣ ಕಡಿಮೆಯಾಗಿದೆ.

ಅಪಾರ ಪ್ರಮಾಣದ ನೀರಿನ ಸೆಲೆಯನ್ನು ಹೊಂದಿದ ಜೈನಕೆರೆ ಸಂಪೂರ್ಣ ಬತ್ತಿ ಹೋಗುತ್ತಿದ್ದು, ಸುತ್ತಮುತ್ತಲಿನ ಬಾವಿಯ ನೀರಿನ ಮಟ್ಟ ಕೂಡ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗುತ್ತಿರುವುದು ಕಂಡುಬಂದಿದೆ.

ಸಹಕಾರ ಅಗತ್ಯ
ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯನ್ನು ಸಮರ್ಪಕವಾಗಿ ಬಳಸಿಕೊಂಡು ವರ್ಗ ಒಂದರಲ್ಲಿ ಹಂತ ಹಂತವಾಗಿ ಗ್ರಾಮದ ಕೆರೆಗಳನ್ನು ಪುನಶ್ಚೇತನಗೊಳಿಸಲು ಅವಕಾಶವಿದೆ. ಈ ಬಗ್ಗೆ ಗ್ರಾಮಸ್ಥರ ಸಹಕಾರ ಕೂಡ ಅತೀ ಅಗತ್ಯ.
-ರಾಜೇಶ್‌, ಪ್ರಭಾರ ಪಿಡಿಒ, ತೆಕ್ಕಟ್ಟೆ ಗ್ರಾ.ಪಂ.

ಸಮರ್ಪಕ ಕ್ರಮ ಕೈಗೊಳ್ಳಿ
ಇತಿಹಾಸವುಳ್ಳ ಕೆರೆ ರಕ್ಷಣೆಗೆ ಗ್ರಾಮಸ್ಥರು ಒಂದಾಗಬೇಕಾಗಿದೆ. ಈ ಕೆರೆಯ ಹೂಳೆತ್ತುವ ಕಾರ್ಯದ ಜತೆಗೆ ಸುತ್ತಲೂ ಸಮರ್ಪಕವಾದ ದಂಡೆ ನಿರ್ಮಾಣವಾದರೆ ಒಳ್ಳೆಯದು. ಅವಧಿಗೂ ಮೊದಲೇ ಬತ್ತುತ್ತಿರುವ ಈ ಅತ್ಯಮೂಲ್ಯ ಜಲಮೂಲಗಳ ಉಳಿವಿಗೆ ಸಂಬಂಧಪಟ್ಟವರು ಸಮರ್ಪಕ ಕ್ರಮ ಕೈಗೊಳ್ಳಬೇಕು.
-ರಾಜೇಶ್‌ ದೇವಾಡಿಗ , ಯುವ ಕೃಷಿಕರು, ಜನರಕೆರೆ ಬೆಟ್ಟು

Advertisement
Advertisement

Udayavani is now on Telegram. Click here to join our channel and stay updated with the latest news.

Next