Advertisement

ಜೈನಮುನಿ ಹತ್ಯೆ: ಮಂಗಳೂರಿನಲ್ಲಿ ಮೌನ ಪ್ರತಿಭಟನಾ ಮೆರವಣಿಗೆ; ಕಠಿನ ಕ್ರಮಕ್ಕೆ ಒತ್ತಾಯ

04:40 PM Jul 10, 2023 | Team Udayavani |

ಮಂಗಳೂರು: ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಹಿರೇಕೋಡಿ ಗ್ರಾಮದ ನಂದಿ ಪರ್ವತ ಆಶ್ರಮದ ಜೈನಮುನಿ ಕಾಮಕುಮಾರ ನಂದಿ ಮಹಾರಾಜರ ಬರ್ಬರ ಹತ್ಯೆಗೈದವರಿಗೆ ಕಠಿನ ಶಿಕ್ಷೆಯಾಗಬೇಕೆಂದು ಒತ್ತಾಯಿಸಿ ನಗರದಲ್ಲಿ ಭಾರತೀಯ ಜೈನ್ ಮಿಲನ್ ಮಂಗಳೂರು ವಿಭಾಗ ಮತ್ತು ಜೈನ ಸಮಾಜದ ನೇತೃತ್ವದಲ್ಲಿ ಮೌನ ಪ್ರತಿಭಟನಾ ಮೆರವಣಿಗೆ ನಡೆಯಿತು.

Advertisement

ಮೂಡುಬಿದಿರೆಯ ಜಗದ್ಗುರು ಡಾ. ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ವರ್ಯ ಮಹಾ ಸ್ವಾಮೀಜಿಯವರ ನೇತೃತ್ವದಲ್ಲಿ ಕ್ಲಾಕ್‌ ಟವರ್‌ನಿಂದ ಜಿಲ್ಲಾಧಿಕಾರಿ ಕಚೇರಿವರಿಗೆ ನಡೆದ ಮೆರವಣಿಗೆಯಲ್ಲಿ ಜೈನ ಸಮುದಾಯದ ಪ್ರಮುಖರಾದ ಪುಷ್ಪರಾಜ್ ಜೈನ್, ಸುರೇಶ್ ಬಲ್ಲಾಳ್, ಸುದರ್ಶನ ಜೈನ್, ರತ್ನಾಕರ ಜೈನ್, ಜಗತ್ಪಾಲ್ ಜೈನ್ ಮೊದಲಾದವರು ಪಾಲ್ಗೊಂಡಿದ್ದರು. ಜಿಲ್ಲಾಧಿಕಾರಿಯವರ ಮೂಲಕ ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಲಾಯಿತು.

ಮೆರವಣಿಗೆಗೂ ಮೊದಲು ಮಹಾಸ್ವಾಮೀಜಿಯವರು ಮಾತನಾಡಿ, ಬಂಧಿಸಲ್ಪಟ್ಟ ಆರೋಪಿಗಳು ಕಾನೂನಿನಡಿಯಲ್ಲಿ ಯಾವುದೇ ರೀತಿಯಲ್ಲಿ ನುಣುಚಿಕೊಳ್ಳಲು ಅವಕಾಶ ನೀಡದಂತೆ ಸೂಕ್ತ ತನಿಖಾಧಿಕಾರಿಯನ್ನು ನೇಮಿಸಿ ಸಮಗ್ರ ತನಿಖೆ ನಡೆಸಬೇಕು. ಅಲ್ಪಸಂಖ್ಯಾಕರಲ್ಲಿ ಅಲ್ಪಸಂಖ್ಯಾಕರಾದ ಜೈನ ಧರ್ಮೀಯರಿಗೆ ಸಾಮಾಜಿಕ ಭದ್ರತೆಯ ಭಯ ಉಂಟಾಗಿದ್ದು ಎಲ್ಲ ಮುನಿಗಳು, ಸಂತರಿಗೆ ಸೂಕ್ತ ರಕ್ಷಣೆ ಕೊಡಬೇಕು. ಶ್ರದ್ಧಾ ಕೇಂದ್ರಗಳಿಗೆ ಸಿಸಿ ಕೆಮರಾಗಳನ್ನು ಅಳವಡಿಸಬೇಕು ಎಂದು ಹೇಳಿದರು.

ವಿಶ್ವಹಿಂದೂ ಪರಿಷತ್, ಬಜರಗಂದಳದ ಪ್ರಮುಖರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next