ತಮಿಳು ಸಿನಿರಂಗದ ಖ್ಯಾತ ನಟ ರಜನಿಕಾಂತ್ ಅವರ ಬಹು ನಿರೀಕ್ಷಿತ ಸಿನಿಮಾ ಜೈಲರ್‌ಗೆ ಬಾಲಿವುಡ್ ಸ್ಟಾರ್ ಜಾಕಿ ಶ್ರಾಫ್ ಜತೆಯಾಗಿದ್ದಾರೆ.
Advertisement
ರಜನಿ ಜತೆಗೆ ತೆರೆ ಹಂಚಿಕೊಳ್ಳಲಿರುವ ಶ್ರಾಫ್ ಅವರ ಫಸ್ಟ್‌ಲುಕ್ ಅನ್ನು ಸಿನಿಮಾ ತಂಡ ಬಿಡುಗಡೆಗೊಳಿಸಿದೆ.
ಇದಕ್ಕೂ ಮುನ್ನ ಶ್ರಾಫ್ ಹಾಗೂ ರಜನಿ 2014ರಲ್ಲಿ ಕೊಚಾಡಿಯನ್ ಸಿನಿಮಾದಲ್ಲಿ ತೆರೆ ಹಂಚಿಕೊಂಡಿದ್ದರು. ಈಗ ಮತ್ತೆ ಈ ಜೋಡಿಯ ಮೋಡಿಯನ್ನು ಜೈಲರ್ ಮೂಲಕ ತೆರೆ ಮೇಲೆ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತುರರಾಗಿದ್ದಾರೆ.
ಈ ಸಿನಿಮಾಗೆ ನೆಲ್ಸನ್ ದಿಲೀಪ್ ಕುಮಾರ್ ಆ್ಯಕ್ಷನ್ -ಕಟ್ ಹೇಳುತ್ತಿದ್ದಾರೆ.