Advertisement
ಈ ಹಿನ್ನೆಲೆಯಲ್ಲಿ ಅವರು ಜೈಲಿನಿಂದ ಬಿಡುಗಡೆಯಾಗಲಿದ್ದಾರೆ. ಪ್ರಕರಣದ ವಿಚಾರಣೆ ನಡೆಸಿದ್ದ ಇಸ್ಲಾಮಾಬಾದ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಅಮೀರ್ ಫಾರೂಖ್ ಮತ್ತು ನ್ಯಾ. ತಾರಿಕ್ ಮೆಹಮೂದ್ ಜಹಾಂಗಿರಿ ಸೋಮವಾರ ತೀರ್ಪನ್ನು ಕಾಯ್ದಿರಿಸಿದ್ದರು. ತೋಷಖಾನ ಪ್ರಕರಣದಲ್ಲಿ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್(ಪಿಟಿಐ) ಮುಖ್ಯಸ್ಥ ಇಮ್ರಾನ್ ಖಾನ್(70) ದೋಷಿ ಎಂದು ವಿಚಾರಣಾಧೀನ ನ್ಯಾಯಾಲಯ ಆ.5ರಂದು ತೀರ್ಪು ನೀಡಿತ್ತು. ಜತೆಗೆ ಮೂರು ವರ್ಷಗಳ ಶಿಕ್ಷೆ ವಿಧಿಸಿತ್ತು. ಅಲ್ಲದೇ 5 ವರ್ಷಗಳ ಚುನಾವಣೆಯಲ್ಲಿ ಸ್ಪರ್ಧಿಸದಂತೆ ಚುನಾವಣಾ ಆಯೋಗವೂ ನಿಷೇಧ ಹೇರಿತ್ತು. ಈ ಪ್ರಕರಣದಲ್ಲಿ ಇಮ್ರಾನ್ ಖಾನ್ ಅವರಿಗೆ ನಿರಾಳತೆ ಸಿಕ್ಕಿದ್ದರೂ, ಅವರ ವಿರುದ್ಧ ಪಾಕಿಸ್ತಾನದ ರಹಸ್ಯ ದಾಖಲೆ ಸೋರಿಕೆ ಮಾಡಿರುವ ಆರೋಪದ ವಿಚಾರಣೆ ಬಾಕಿ ಇದೆ. Advertisement
Pakistan: ಜೈಲು ಶಿಕ್ಷೆ ರದ್ದು: ಇಮ್ರಾನ್ ನಿಟ್ಟುಸಿರು
08:53 PM Aug 29, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.