Advertisement

‘ಇಂದಿನ ಶಿವಾಜಿ ನರೇಂದ್ರ ಮೋದಿ’; ಏನಿದು ನಮೋ ಹೊಸ ಪುಸ್ತಕದ ವಿವಾದ?

09:59 AM Jan 14, 2020 | Hari Prasad |

ಮುಂಬಯಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಮರಾಠಾ ಸಾಮ್ರಾಟ, ಹಿಂದೂ ಹೃದಯ ಸಾಮ್ರಾಟ ಎಂದೆಲ್ಲಾ ಕರೆಯಿಸಿಕೊಳ್ಳುವ ಛತ್ರಪತಿ ಶಿವಾಜಿಗೆ ಹೋಲಿಸಿ ಬಿಜೆಪಿ ನಾಯಕರೊಬ್ಬರು ಬರೆದಿರುವ ಪುಸ್ತಕವೊಂದು ಮಹಾರಾಷ್ಟ್ರದಲ್ಲಿ ಇದೀಗ ಹೊಸದೊಂದು ವಿವಾದಕ್ಕೆ ಕಾರಣವಾಗಿದೆ.

Advertisement

ಬಿಜೆಪಿ ನಾಯಕ ಜೈ ಭಗವಾನ್ ಗೋಯಲ್ ಬರೆದಿರುವ ‘ಟುಡೇಸ್ ಶಿವಾಜಿ ನರೇಂದ್ರ ಮೋದಿ’ ಎಂಬ ಹೆಸರಿನ ಪುಸ್ತಕ ಇಂದು ನವದೆಹಲಿಯಲ್ಲಿ ಬಿಡುಗಡೆಗೊಂಡಿದೆ. ಇದರ ಬೆನ್ನಲ್ಲೇ ಮಹಾರಾಷ್ಟ್ರದಲ್ಲಿ ಈ ಪುಸ್ತಕದ ಕುರಿತಾಗಿ ಅಪಸ್ವರ ಮತ್ತು ಪ್ರತಿಭಟನೆಗಳು ಕಾಣಿಸಿಕೊಂಡಿವೆ.

ಮಹಾರಾಷ್ಟ್ರದಲ್ಲಿ ಅಧಿಕಾರದಲ್ಲಿರುವ ‘ವಿಕಾಸ್ ಅಘಾಡಿ’ ಮೈತ್ರಿಕೂಟದ ಪಕ್ಷಗಳಾಗಿರುವ ಶಿವಸೇನೆ, ಕಾಂಗ್ರೆಸ್ ಮತ್ತು ಎನ್.ಸಿ.ಪಿ. ಈ ಪುಸ್ತಕದ ಕುರಿತಾಗಿ ತಗಾದೆ ತೆಗೆದಿವೆ. ಇದರ ಬೆನ್ನಲ್ಲೇ ಪುಣೆಯಲ್ಲಿ ಎನ್.ಸಿ.ಪಿ. ಮತ್ತು ಸಂಭಾಜಿ ಬ್ರಿಗೇಡ್ ಕಾರ್ಯಕರ್ತರು ಈ ಪುಸ್ತಕದ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.

ಇದು ಮರಾಠ ಸಾಮ್ರಾಜ್ಯ ಮತ್ತು ಅದರ ಸಾಮ್ರಾಟನ ಇತಿಹಾಸವನ್ನು ಅಳಿಸಿ ಹಾಕುವ ಹುನ್ನಾರ ಎಂಬುದಾಗಿ ಎನ್.ಸಿ.ಪಿ. ಈ ಪುಸ್ತಕದ ಕುರಿತಾಗಿ ಕಿಡಿಯಾಗಿದೆ. ಶಿವಸೇನಾ ನಾಯಕ ಸಂಜಯ್ ರಾವತ್ ಅವರೂ ಸಹ ಈ ಪುಸ್ತಕ ಮತ್ತು ಇದರ ಲೇಖಕರ ಕುರಿತಾಗಿ ಕ್ರೋಧ ವ್ಯಕ್ತಪಡಿಸಿದ್ದಾರೆ. ದೆಹಲಿಯಲ್ಲಿರುವ ಮಹಾರಾಷ್ಟ್ರ ಸದನದ ಮೇಲೆ ದಾಳಿ ನಡೆಸಿದ ಮತ್ತು ಶಿವಾಜಿ ಮಹಾರಾಜರ ಮಹಾರಾಷ್ಟ್ರ ಹಾಗೂ ಮರಾಠಿ ಜನರನ್ನು ನಿಂದಿಸಿದ ವ್ಯಕ್ತಿಯೃ ಈ ಪುಸ್ತಕದ ಲೇಖಕರಾಗಿರುವುದು ದುರಂತ ಎಂದು ರಾವತ್ ಅವರು ಟೀಕಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next